ದಸರೆ ವೇಳೆ ರಾಜಮನೆತನದಲ್ಲಿ ಸೂತಕ ಬಂದಾಗ ನಾಡಹಬ್ಬ ನಿಂತಿದ್ದು ಉಂಟೇ?
Recommended Video

ಮೈಸೂರು, ಅಕ್ಟೋಬರ್.09: ಮೈಸೂರು ದಸರೆ ಎಂದರೆ ಅದೊಂದು ಧಾರ್ಮಿಕ ವಿಧಿವಿಧಾನಗಳ ಭವ್ಯ ಆಚರಣೆ. ಸಾಮಾನ್ಯವಾಗಿ ನಮ್ಮ ಮನೆಯಲ್ಲಿ ಅತ್ಯಾಪ್ತರು ನಿಧನರಾದರೆ ಹಬ್ಬ ಹರಿದಿನಗಳನ್ನು ಮನೆಯಲ್ಲಿ ಆಚರಿಸುವುದಿಲ್ಲ.
ಹಾಗೆಯೇ ದಸರೆ ಆಚರಣೆ ವೇಳೆಯಲ್ಲಿ ಸೂತಕ ಬಂದು ಎಲ್ಲಾದರೂ ನಾಡಹಬ್ಬ ನಿಂತಿದ್ದುಂಟೇ ಎಂದು ಗಮನಿಸಿದರೆ ಹೌದೆನ್ನುತ್ತದೆ ಇತಿಹಾಸ
ನಾಡಹಬ್ಬ ದಸರೆ ವಿಜಯನಗರ ಅರಸರ ಬಳುವಳಿ. 1399ರಲ್ಲಿ ಯದುರಾಯನಿಂದ ಯದುವಂಶ ಶುರುವಾದರೂ, ದಸರಾ ಆಚರಣೆಗಳು ಶುರುವಾಗುವುದು 1610ರಲ್ಲಿ. ಶ್ರೀರಂಗಪಟ್ಟಣದಲ್ಲಿ ಸಂಸ್ಥಾನದ 9ನೇ ದೊರೆ ರಾಜ ಒಡೆಯರ್ ನವರಾತ್ರಿ ಆಚರಣೆ ಆರಂಭಿಸಿದ.
ಮೊದಲ ದಸರೆಯಲ್ಲಿಯೇ ಅರಮನೆಯನ್ನು ಸೂತಕ ಆವರಿಸಿತ್ತು. ಮಹಾಲಯ ಅಮಾವಾಸ್ಯೆಯ ಹಿಂದಿನ ದಿನ ಮಗ ಸಾವಿಗೀಡಾದರೂ, ರಾಜ ಒಡೆಯರ್ ತನ್ನ ಸಂಬಂಧಿಯಿಂದ ಅಂತ್ಯಸಂಸ್ಕಾರ ಮಾಡಿಸಿ ಕಂಕಣ ತೊಟ್ಟರು.
1761ರಲ್ಲಿ ಮೈಸೂರು ಸಂಸ್ಥಾನವನ್ನು ಹೈದರಾಲಿ ವಶಪಡಿಸಿಕೊಂಡಾಗಲೂ ದಸರೆ ಸಂಪ್ರದಾಯ ನಿಲ್ಲಲಿಲ್ಲ. ಆದರೆ, ಟಿಪ್ಪು ಕಾಲದಲ್ಲಿ (1796 ರಿಂದ 1799) ಆಚರಣೆ ನಡೆಯಲಿಲ್ಲ. ಟಿಪ್ಪು ಮರಣಾನಂತರ ಮುಮ್ಮಡಿ ಕೃಷ್ಣರಾಜ ಒಡೆಯರ್ ಮೈಸೂರನ್ನು ರಾಜಧಾನಿಯಾಗಿಸಿಕೊಂಡು, ದಸರೆಗೆ ಜೀವ ತುಂಬಿದರು. ಮುಂದೆ ಓದಿ..

ಸರಳ ದಸರೆ ನಡೆಯಿತು
ಹಳೆಯ ಅರಮನೆ ಅಗ್ನಿ ಅನಾಹುತಕ್ಕೆ ಈಡಾದ ಸಂದರ್ಭ ಸರಳ ದಸರೆ ನಡೆಯಿತು. 1910ರ ಬಳಿಕ ಮಹಾರಾಜರು ಕಂಕಣ ತೊಡುವುದು, ಸರಸ್ವತಿ ಪೂಜೆ, ದರ್ಬಾರ್, ಅಂಬಾರಿ ಮೇಲೆ ಕುಳಿತು ಜಂಬೂ ಸವಾರಿ ನಡೆಸುವುದು ಮುಂತಾದ ಆಚರಣೆಗಳು ಶಾಸ್ತ್ರೋಕ್ತ ರಂಗು, ಸೊಬಗು ಪಡೆದವು.

ಪರಂಪರೆಗೆ ಚ್ಯುತಿ ಬಂದಿಲ್ಲ
1970ರಲ್ಲಿ ರಾಜಧನ ರದ್ದಾದ ಬಳಿಕ ಮೊದಲ ಬಾರಿಗೆ ದಸರಾ ಪರಂಪರೆ ಮೇಲೆ ಕಾರ್ಮುಗಿಲು ಕಾಣಿಸಿಕೊಂಡಿತು. ಮುಂದೆ ಸರಕಾರವೇ ನಾಡಹಬ್ಬವನ್ನಾಗಿ ಆಚರಿಸಲು ಆರಂಭಿಸಿದ ಬಳಿಕ ಪರಂಪರೆಗೆ ಚ್ಯುತಿ ಬಂದಿಲ್ಲ.

ಖಾಸಗಿ ದರ್ಬಾರ್‌ಗೆ ಭಂಗ ಬಂದಿಲ್ಲ
ಕಳೆದ ಶತಮಾನದ ಕಡೆಯ ದಶಕದಲ್ಲಿ ದಕ್ಷಿಣ ಭಾರತದಲ್ಲಿ ನಡೆದ ಮಹಾನ್ ಭೂಕಂಪ, ಕ್ಷಯ ರೋಗ ಭಯದಿಂದ ಉತ್ಸವ ಸರಳವಾಯಿತು. ಭೀಕರ ಬರಗಾಲ ಸಂದರ್ಭದಲ್ಲೊಮ್ಮೆ ಜಂಬೂ ಸವಾರಿ ನಿಂತಿತು. ಆಗಲೂ ಖಾಸಗಿ ದರ್ಬಾರ್‌ಗೆ ಭಂಗ ಬಂದಿರಲಿಲ್ಲ.

ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ನಿಧನ
2013ರ ಡಿಸೆಂಬರ್ ನಲ್ಲಿ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ನಿಧನಗೊಂಡರು. 2014ರ ದಸರಾ ವೇಳೆಯಲ್ಲಿ ರತ್ನ ಖಚಿತ ಸಿಂಹಾಸನದಲ್ಲಿ ಪಟ್ಟದ ಕತ್ತಿಯನ್ನು ಇಟ್ಟು ಪೂಜಿಸಲಾಯಿತು. ಕಾರಣ ಆ ವೇಳೆಯಲ್ಲಿ ಯಾವ ಉತ್ತರಾಧಿಕಾರಿಯನ್ನು ನೇಮಿಸಿರಲಿಲ್ಲ.
ಅಲ್ಲದೇ ಆಗ ರಾಜಮಾತೆ ಪ್ರಮೋದಾದೇವಿ ಒಡೆಯರ್ ಯಾವ ಕಾರ್ಯಕ್ರಮದಲ್ಲೂ ಪಾಲ್ಗೊಂಡಿರಲಿಲ್ಲ. ಇದುವರೆಗೂ ಅರಮನೆಯಲ್ಲಿ ದಸರೆ ವೇಳೆಯಲ್ಲಿ ಸೂತಕ ಬಂದಾಗ ಆಚರಿಸಿದ ವಿಧಿ ವಿಧಾನಗಳಾಗಿದೆ.












Click it and Unblock the Notifications