ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ದಸರಾದಲ್ಲಿ ಓಡಾಡಲಿದೆ ರೆಡ್ ಅಂಬಾರಿ ಸವಾರಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಸೆಪ್ಟೆಂಬರ್ 28: ಮೈಸೂರು ದಸರಾ ಅಂದರೆ ಕಲೆ, ಸಾಹಿತ್ಯ, ಸಂಸ್ಕೃತಿ, ಸಾಮಾಜಿಕ ಚಟುವಟಿಕೆ, ಮನರಂಜನೆಯ ಸಂಗಮ. ಇಂತಹ ದಸರಾಕ್ಕೆ ಮೆರಗು ನೀಡಲೆಂದೇ ನಗರದಲ್ಲಿ ರೆಡ್ ಅಂಬಾರಿಯ ಸವಾರಿ ಹೊರಡಲಿದೆ.

ಕೆಲವು ವರ್ಷಗಳಿಂದ ದಸರಾ ಆರಂಭವಾದ ದಿನದಿಂದ ಕೊನೆಯ ದಿನದವರೆಗೆ ಈ ಅಂಬಾರಿ ನಗರದಲ್ಲಿ ಸಂಚಾರ ನಡೆಸುತ್ತಾ ಬಂದಿತ್ತು. ಇದೀಗ ರಿಲಯನ್ಸ್ ಜಿಯೋ 93.5 ರೆಡ್ ಎಫ್‌ಎಂ ಸಹಯೋಗದಲ್ಲಿ 9ನೇ ಆವೃತ್ತಿಯ ರೆಡ್ ಅಂಬಾರಿ ಹೊರತರುತ್ತಿದೆ. ಜತೆಗೆ ಇದರಲ್ಲಿ ಸಂಗೀತ, ಆಟಗಳ ಮೂಲಕ ಜಿಯೋ ಫೋನ್ ಗೆಲ್ಲುವ ಅವಕಾಶವನ್ನು ನೀಡುತ್ತಿದೆ.

ಮೈಸೂರು ದಸರಾದಲ್ಲಿ ಧರೆಗಿಳಿಯಲಿದೆ ಪುಷ್ಪಲೋಕ; ಈ ಬಾರಿ ವಿಶೇಷವೇನು?

9 ದಿನಗಳ ಕಾಲ ನಗರದಾದ್ಯಂತ ಇದು ಸಂಚರಿಸಲಿದ್ದು, ಮೈಸೂರು ಮಾತ್ರವಲ್ಲದೆ, ಕೊಡಗು, ಮಂಡ್ಯ, ನಂಜನಗೂಡು ಸೇರಿದಂತೆ ಹಲವು ಕಡೆಗಳಲ್ಲಿ ಸಂಚರಿಸಿ ದಸರಾ ಉತ್ಸಾಹವನ್ನು ಎಲ್ಲೆಡೆಗೂ ಕೊಂಡೊಯ್ಯಲಿದೆ. ಅರಮನೆ, ಫಲಪುಷ್ಪ ಪ್ರದರ್ಶನ, ದಸರಾ ವಸ್ತುಪ್ರದರ್ಶನ, ದಸರಾ ಕ್ರೀಡಾಕೂಟ, ಮಹಿಳಾ ಮತ್ತು ಮಕ್ಕಳ ದಸರಾ, ಜಂಬೂ ಸವಾರಿ ಮೆರವಣಿಗೆ ಸೇರಿದಂತೆ ನಗರದಾದ್ಯಂತ ನಡೆಯುವ ದಸರಾ ಕಾರ್ಯಕ್ರಮಗಳಲ್ಲಿ ರೆಡ್ ಎಫ್‌ಎಂನ ಆರ್‌ಜೆಗಳು ಕಾರ್ಯಕ್ರಮ ನಡೆಸಲಿವೆ.

Red Ambari Ride In Dasara Mysore

ವಿಜಯದಶಮಿಯಂದು 93.5 ರೆಡ್ ಎಫ್‌ಎಂ ಜಂಬೂಸವಾರಿ ಮೆರವಣಿಗೆಯನ್ನು ಚಿತ್ರೀಕರಿಸುವುದಲ್ಲದೆ ಅರಮನೆ ಆವರಣದಿಂದ ನೇರ ಪ್ರಸಾರ ಮಾಡಲಿದೆ. ಈ ಕಾರ್ಯಕ್ರಮಗಳು ಮೈಸೂರು ಮಾತ್ರವಲ್ಲದೆ, ರೆಡ್ ಎಫ್‌ಎಂನ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಗುಲ್ಬರ್ಗ ಸ್ಟೇಷನ್‌ಗಳಲ್ಲೂ ಪ್ರಸಾರವಾಗಲಿದೆ.

English summary
Mysore Dasara means the confluence of art, literature, culture, social activity and entertainment. Red Ambari rides in the city will cheer for such a colourful Dasara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X