• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಥಸಪ್ತಮಿ ಆಚರಣೆ: ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಯದುವೀರ್ ಭಾಗಿ

By ಮೈಸೂರು ಪ್ರತಿನಿಧಿ
|

ಮೈಸೂರು, ಫೆಬ್ರವರಿ 19: ರಥಸಪ್ತಮಿ ಆಚರಣೆಯ ಹಿನ್ನಲೆಯಲ್ಲಿ ಮೈಸೂರಿನಲ್ಲಿ ನಡೆದ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ರಾಜವಂಶಸ್ಥ ಯದುವೀರ್ ಒಡೆಯರ್ ಭಾಗಿಯಾದರು.

ರಥಸಪ್ತಮಿ ಆಚರಣೆ ನಿಮಿತ್ತ ವಿಶೇಷ ಹೋಮ ಮಾಡಲಾಗಿದ್ದು, ಈ ವೇಳೆ ಯದುವೀರ್ ಒಡೆಯರ್ ಪಾಲ್ಗೊಂಡಿದ್ದರು. ದೀಪ ಬೆಳಗಿಸುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮೈಸೂರು ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ

ನಂತರ ಮಾತನಾಡಿದ ರಾಜವಂಶಸ್ಥ ಯದುವೀರ್, ಸೂರ್ಯ ನಮಸ್ಕಾರ ನನ್ನ ಜೀವನದಲ್ಲಿ ತುಂಬಾ ಮಹತ್ವ ಪಡೆದಿದೆ. ನಾನೂ ಕೂಡ ಸೂರ್ಯ ನಮಸ್ಕಾರವನ್ನು ಅಳವಡಿಸಿಕೊಂಡಿದ್ದೇನೆ. ನಮ್ಮ ಮೈಸೂರಿನ ಸಂಸ್ಕೃತಿ ಜೊತೆ ಯೋಗ ಪ್ರಾರಂಭವಾಗಿದ್ದು, ಯೋಗಕ್ಕೆ ನಮ್ಮ ತಾತನವರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಅಪಾರವಾಗಿದೆ ಎಂದರು.

ಶುಕ್ರವಾರ ರಥಸಪ್ತಮಿ ಆಚರಣೆ ಹಿನ್ನೆಲೆಯಲ್ಲಿ ಮೈಸೂರು ಅರಮನೆ ಕೋಟೆ ಆಂಜನೇಯ ದೇವಾಲಯ ಮುಂಭಾಗ ಸಾಮೂಹಿಕ ಸೂರ್ಯ ನಮಸ್ಕಾರ ಮಾಡಲಾಯಿತು. ನೂರಾರು ಯೋಗ ಪಟುಗಳಿಂದ 108 ಸೂರ್ಯ ವಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಭಗವಾನ್ ಸೂರ್ಯ ನಾರಾಯಣ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಪ್ರತಿ ವರ್ಷದಂತೆ ಈ ವರ್ಷವೂ ಮೈಸೂರು ಯೋಗ ಒಕ್ಕೂಟದಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

English summary
Yaduvir Wodeyar participated in the mass Surya Namaskara event in Mysuru on the back of the Rathasaptami celebration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X