ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಲ್ಲಿ ಟ್ರಿಣ್ ಟ್ರಿಣ್ ಸೈಕಲ್ ಏರಿ ಪಾರಂಪರಿಕ ಕಟ್ಟಡ ವೀಕ್ಷಣೆ

By Yashaswini
|
Google Oneindia Kannada News

ಮೈಸೂರು, ಸೆಪ್ಟೆಂಬರ್ 25: ಇಂದು ಬೆಳ್ಳಂಬೆಳ್ಳಗೆ ಮಳೆಯ ನಡುವೆಯೇ ಟ್ರಿಣ್ ಟ್ರಿಣ್ ಎಂದು ಸದ್ದು ಮಾಡುತ್ತಲೇ ಉತ್ಸಾಹದಿಂದ ಸೈಕಲ್ ಮೇಲೆ ಸವಾರಿ ಏರಿ ಕೆಲವರು ಗುಂಪಲ್ಲೇ ಹೊರಟ್ಟಿದ್ದುರು. ಅದು ಪಾರಂಪರಿಕ ಕಟ್ಟಡಗಳ ಉಳಿವಿಗಾಗಿ.

ಮೈಸೂರು: ಪಾರಂಪರಿಕ ಹಾದಿ ಹಾದುಬಂದ ಜಾವಾ ಬೈಕ್ ಗಳು ಮೈಸೂರು: ಪಾರಂಪರಿಕ ಹಾದಿ ಹಾದುಬಂದ ಜಾವಾ ಬೈಕ್ ಗಳು

ದಸರಾ ಮಹೋತ್ಸವ 2017 ಪ್ರಯುಕ್ತ ರಂಗಾಚಾರ್ಲು ಪುರಭವನ ಆವರಣದಲ್ಲಿ ಟ್ರಿಣ್-ಟ್ರಿಣ್ ಸೈಕಲ್ ಗಳೊಡನೆ, ಪಾರಂಪರಿಕ ಕಟ್ಟಡಗಳ ದರ್ಶನಕ್ಕೆ ಚಾಲನೆ ನೀಡಲಾಯಿತು. ದಸರಾ ಮಹೋತ್ಸವದ ಪ್ರಯುಕ್ತ ಪುರಾತತ್ವ, ಪರಂಪರೆ ಮತ್ತು ಪರಂಪರೆ ಇಲಾಖೆಯ ಯಶಸ್ವಿ ಕಾರ್ಯಕ್ರಮ ಪಾರಂಪರಿಕ ನಡಿಗೆ ಮೂರನೇ ದಿನ ಸೈಕಲ್ ಮೇಲೆ ಪಾರಂಪರಿಕ ಕಟ್ಟಡಗಳನ್ನು ವೀಕ್ಷಿಸುವ ಅವಕಾಶ ಕಲ್ಪಿಸಲಾಗಿತ್ತು.

Rain fails to dampen Trin Trin sound on 3rd day of Heritage Walk

ದಸರಾ ವಿಶೇಷಾಧಿಕಾರಿ ಡಿ.ರಂದೀಪ್ ಮಾತನಾಡಿ ದಸರಾ‌ ಮಹೋತ್ಸವ ಯಶಸ್ವಿಯಾಗಿ ನಡೆದಿದೆ, ಇವತ್ತು ಮಳೆ‌ ಇದ್ದರೂ ಆಸಕ್ತರು ಬಂದಿದ್ದಾರೆ. ಪಾರಂಪರಿಕ ಕಟ್ಟಡಗಳ ಮಾಹಿತಿಯನ್ನು ಸೈಕಲ್‌ನಲ್ಲಿ ಸವಾರಿಮಾಡಿ ನೋಡುವುದು ವಿಶೇಷವಾಗಿದೆ ಎಂದು ತಿಳಿಸಿದರು. ಜಿಲ್ಲಾಧಿಕಾರಿಗಳು ಖುದ್ದು ಸೈಕಲ್‌ನಲ್ಲಿ ಪ್ರಯಾಣಿಸಿ, ತಮ್ಮ ಕಚೇರಿಯ ಮಹತ್ವ ಪಡೆದುಕೊಂಡರು. ಅಲ್ಲಿ‌ನ ಕಂಚಿನ ಗೋರ್ಡನ್ ಪ್ರತಿಮೆಯ ಬಳಿ ಫೋಟೋ ತೆಗೆಸಿಕೊಂಡರು.

Rain fails to dampen Trin Trin sound on 3rd day of Heritage Walk

ಜಿಲ್ಲಾಧಿಕಾರಿಗಳಿಗೆ ಮಹಾಪೌರರಾದ ಎಂ.ಜೆ. ರವಿಕುಮಾರ್ ಅವರು ಸಾಥ್ ನೀಡಿದರು. ನಗರದ ಸುಮಾರು 70ಕ್ಕೂ ಅಧಿಕ ಮಂದಿ ವಯಸ್ಸಿನ ಭೇದವಿಲ್ಲದೆ ಟ್ರಿಣ್ ಟ್ರಿಣ್ ಸೈಕಲ್‌ ಸವಾರಿಯಲ್ಲಿ ಭಾಗವಹಿಸಿದ್ದರು. ಸವಾರಿ ದೊಡ್ಡಗಡಿಯಾರ, ಚಾಮರಾಜ ವೃತ್ತ, ಅರಮನೆ, ಕೆ.ಆರ್ ವೃತ್ತ, ಜಗನ್ಮೋಹನ ಅರಮನೆ , ಜೂನಿಯರ್ ಮಹಾರಾಣಿ ಕಾಲೇಜು, ನಿರಂಜನ ಆಶ್ರಮ, ಪದ್ಮಾಲಯ, ಯುವರಾಜ ಕಾಲೇಜು, ಮಹಾರಾಜ ಕಾಲೇಜು, ಒರಿಯಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್, ಕ್ರಾಫರ್ಡ್ ಹಾಲ್, ಜಿಲ್ಲಾಧಿಕಾರಿ ಕಚೇರಿ ಮೂಲಕ ಸಾಗಿ ಬಂತು.

English summary
The heritage walk programme was inaugurated at the premises of Rangacharlu town hall in mysuru city on 25th Sep. The 3rd day event of heritage walk allowed the participants to visit heritage sites on their cycles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X