• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರಿನಲ್ಲಿ ರಾಹುಲ್ ಗಾಂಧಿ ವಿರುದ್ಧ ವಿಶ್ವನಾಥ್ ವಾಗ್ದಾಳಿ

By Yashaswini
|

ಮೈಸೂರು, ಮಾರ್ಚ್ 27 : 'ರಾಹುಲ್ ಗಾಂಧಿ ಕಾಂಗ್ರೆಸ್ ನ ಪಾಪ ಪಾಂಡು' ಎಂದು ಮಾಜಿ ಸಂಸದ ಎಚ್. ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿಗೆ ಯಾವುದರ ಅರಿವಿಲ್ಲ ಲೋಕಸಭೆಯಲ್ಲಿ ಸದನ ನಡೆಯುವಾಗ ಮೊಬೈಲ್ ನಲ್ಲಿ ಗೇಮ್ ಆಡುತ್ತಾ ಕುಳಿತುಕೊಳ್ಳುತ್ತಾರೆ. ಇಂತಹವರಿಂದ ದೇಶದ ಅಭಿವೃದ್ಧಿ ಸಾಧ್ಯವೇ ಎಂದು ವಾಗ್ದಾಳಿ ನಡೆಸಿದರು.

ಪಟ್ಟು ಹಾಕಿ ತೋರಿಸ್ತೀನಿ ಬನ್ನಿ ಎಂದು ಸಿಟ್ಟಿನಲ್ಲಿ ಸಿದ್ದುಗೆ ಗೌಡರ

ರಾಹುಲ್ ನನ್ನ ನಾನು ಬಹಳ ಹತ್ತಿರ ದಿಂದ ರಾಹುಲ್ ನೋಡಿದ್ದೇನೆ. ಈತ ಒಬ್ಬ ಅನುಭವ ಇಲ್ಲದವ. ಇಂತಹ ನಾಯಕನನ್ನ ರಾಷ್ಟ್ರ ಆಳುವಂತೆ ಹೇಳುತ್ತಾರೆ. ಅವರು ಎರಡು ಬಾರಿ ರಾಜ್ಯಕ್ಕೆ ಬಂದರೂ ಏನು ಪ್ರಯೋಜನವಾಗುವುದಿಲ್ಲ. ರಾಹುಲ್ ಬಂದ್ರೆ ನಮಗೆ ಅನುಕೂಲ ಜಾಸ್ತಿ ಎಂದು ವ್ಯಂಗ್ಯವಾಡಿದರು.

ಕನ್ನಡದ ಕೊಲೆಗಡುಕ ರಾಗಾ:

ಕನ್ನಡದಲ್ಲಿ ರಾಹುಲ್ ಮಾತಾನಾಡಿದ್ದು ಕೇಳುಗರನ್ನು ಮುಜುಗರಕ್ಕೀಡುಮಾಡಿದೆ. ಅವರಿಗೆ ಸರಿಯಾಗಿ ಕನ್ನಡ ಹೇಳಿಕೊಡಬೇಕಿತ್ತು. ಕನ್ನಡವನ್ನ ರಾಹುಲ್ ಕೊಂದಿದ್ದಾರೆ. ಕನ್ನಡದಲ್ಲಿ ಇವನಾರವ ಇವನಾರವ ಅನ್ನೋದು ಕೂಡ ಸರಿಯಾಗಿ ಉಚ್ಛಾರಿಸಿಲ್ಲ. ಬಸವಣ್ಣನ ಮತ್ತು ಅವರ ವಚನಗಳನ್ನ ತಪ್ಪಾಗಿ ರಾಹುಲ್ ಬಾಯಿಂದ ಹೇಳಿಸಿದ್ದು ಅಗೌರವ ಮಾಡಿದಂತೆ ಎಂದು ಹೆಚ್. ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು.

ತಪ್ಪು ವಚನದಿಂದ ಅವಮಾನ:

ಬಸವಣ್ಣನ ವಚನ ಹೇಳೋ ಹಾಗೆ ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡವೆನ್ನುತ್ತಾರೆ. ಆದರೆ ಸಿದ್ದು ಸ್ವಪಕ್ಷದ ನಾಯಕರ ವಿರುದ್ಧವೇ ಅಸೂಹೆ ಪಡುತ್ತಾರೆ. ಸಂವಾದದಲ್ಲಿ ಕಾಲೇಜಿನ ಹೆಣ್ಣು ಮಗಳು ಜಾತಿ ಆಧಾರಿತವಾಗಿ ಯಾಕೆ ತಾರತಮ್ಯ ಎಂದು, ಆದರೆ ಅದರ ಉತ್ತರಕ್ಕೆ ನಾಯಕರು ತಡಬಡಾಯಿಸಿದರು.

ಎಲ್ಲರನ್ನೂ ಮಾತನಾಡುವ ಮುಖ್ಯಮಂತ್ರಿ ಸಿದ್ದು, ನಿಮ್ಮನ್ನ ಬಣ್ಣಿಸಿಕೊಳ್ಳಲು 1300 ಕೋಟಿಗಳನ್ನ ಖರ್ಚು ಮಾಡಿ ಸಮಾವೇಶ ಮಾಡಬೇಕಾಯ್ತು ಎಂದು ಕುಟುಕಿದ ಮಾಜಿ ಸಂಸದ ಹೆಚ್.ವಿ, ದೇವೇಗೌಡರ ಬಗ್ಗೆ ಕೀಳಾಗಿ ಮಾತನಾಡಿದ್ದಿರಿ. ನಿಮ್ಮ ಆತ್ಮ ಶುದ್ಧವಿಲ್ಲ. ಹಳೆಯದನ್ನ ಸ್ವಲ್ಪ ಮೆಲಕು ಹಾಕಿ. ಮುಸ್ಲಿಂ ಸಮುದಾಯ. ಜೆಡಿಎಸ್ ಕಡೆ ಓಲಿಯುತ್ತಿದ್ದರೆ ನಿಮ್ಮ ಕಡೆ ಸದ್ಯಕ್ಕೆ ಯಾರು ಇಲ್ಲ. ನಿಮ್ಮ ಮಂತ್ರಿ ಮಂಡಲದಲ್ಲಿ ಇರುವವರು ಜೆಡಿಎಸ್ ನಿಂದ ಬಂದವರೇ. ಎಂದು ಚಾಟಿ ಬೀಸಿದರು.

ಅಲ್ಲಿಗೋದ ಏಳು ಜನರ ಕೆಲಸ ಏನ್ ಗೊತ್ತೆ...?

ನಮ್ಮ ಜೆಡಿಎಸ್ ತಂಡದಿಂದ ಏಳು ಜನ ಮ್ಯಾಚ್ ಫಿಕ್ಸಿಂಗ್ ಗಿರಾಕಿಗಳನ್ನು ಕಾಂಗ್ರೆಸ್ ಗೆ ಕಳುಹಿಸಿದ್ದೇವೆ. ರಾಜ್ಯದಲ್ಲಿ ಒಂದು ಕ್ರಿಕೆಟ್ ಟೀಮ್ ಇದೆ. ಅಲ್ಲಿ ಮೇಯಿನ್ ಪ್ಲೇಯರ್ ನೀವು. ಈಗ ಜೆಡಿಎಸ್ ನಿಂದ ಬಂದ 7 ಜನರು ಅಲ್ಲಿ ಎಕ್ಟ್ರಾ ಪ್ಲೇಯರ್ಸ್ ಗಳು ಎಂದು ವ್ಯಂಗವಾಡಿದ ಎಚ್.ವಿಶ್ವನಾಥ್ , ಪಾಪ ಒರಿಜಿನಲ್ ಕಾಂಗ್ರೆಸಿಗರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಅಂತಹದರಲ್ಲಿ ಈ 7 ಜನರಿಗೆಲ್ಲಿದೆ ಅವಕಾಶ. ಈ ಏಳು ಜನರ ಕೆಲಸವೆಂದರೆ ನೀರು ಕುಡಿದು, ಬಾಲನ್ನು ತೆಗೆದುಕೊಂಡುಬರುವುದು ಎಂದು ವ್ಯಂಗ್ಯವಾಡಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
"Rahul Gandhi is a childish leader of Congress" JDS leader and former MP H Vishwanath told in a pressmeet in Mysuru. As Karnataka assembly elections will be taking place On may 12th, leaders are blaming each other.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more