• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಿಟ್ಲರ್‌ನಂತೆ ಜಿಟಿ ದೇವೇಗೌಡ ವರ್ತನೆ: ಸಚಿವ ಪುಟ್ಟರಂಗ ಶೆಟ್ಟಿ ಆರೋಪ

|

ಮೈಸೂರು, ಅಕ್ಟೋಬರ್ 10: ಉನ್ನತ ಶಿಕ್ಷಣ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಜಿಟಿ ದೇವೇಗೌಡ ಹಿಟ್ಲರ್‌ನಂತೆ ವರ್ತಿಸುತ್ತಿದ್ದಾರೆ ಎಂದು ಸಚಿವ ಪುಟ್ಟರಂಗ ಶೆಟ್ಟಿ ಆರೋಪಿಸಿದ್ದಾರೆ.

ಬುಧವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವ ಪುಟ್ಟರಂಗಶೆಟ್ಟಿ, ಮೈಸೂರು ದಸರಾ ಉತ್ಸವದಲ್ಲಿ ನನ್ನನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ, ಜಿಟಿ ದೇವೇಗೌಡ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಪ್ರೋಟೋಕಾಲ್ ನಲ್ಲಿ ಹೆಸರಿಲ್ಲದಿದ್ದರೂ ದಸರಾ ವೇದಿಕೆ ಏರಿದರು ಆ ಮಹಿಳೆ!

ಮನಸ್ಸಿಗೆ ಬಂದಂತೆ ದಸರಾ ಸಮಿತಿಗಳನ್ನು ರಚಿಸಿದ್ದಾರೆ, ಹಾಗಾಗಿ ನಾನು ದಸರಾ ಉತ್ಸವದಲ್ಲಿ ಪಾಲ್ಗೊಂಡಿಲ್ಲ ಎಂದು ದಸರಾ ಉತ್ಸವದಲ್ಲಿ ಪಾಲ್ಗೊಂಡಿಲ್ಲ ಎಂದರು.ಮೈಸೂರು ದಸರಾ ಉತ್ಸವನ್ನು ಇನ್ಫೋಸಿಸ್ ಪ್ರತಿಷ್ಠಾನ ಅಧ್ಯತೆ ಸುಧಾಮೂರ್ತಿ ಹಾಗೂ ಸಿಎಂ ಕುಮಾರಸ್ವಾಮಿಯವರಿಂದ ಇಂದು ವಿದ್ಯುಕ್ತ ಚಾಲನೆ ದೊರೆತಿದೆ.

ದಸರಾ ವಿಚಾರದಲ್ಲಿ ರಾಜಕೀಯ ಬೇಡ: ಪರಮೇಶ್ವರ ಮನವಿ

ಆದರೆ ಉತ್ಸವ ಉದ್ಘಾಟನೆಯಲ್ಲಿ ಕಾಂಗ್ರೆಸ್ ನಾಯಕರು ಗೈರಾಗಿದ್ದರು. ಈ ಕುರಿತು ಮಾತನಾಡಿದ ಪುಟ್ಟರಂಗಶೆಟ್ಟಿ ತಾವು ದಸರಾಗೆ ಆಗಮಿಸದಿರಲು ಕಾರಣ ಏನು ಎಂಬುದನ್ನು ಸ್ಪಷ್ಟಪಡಿಸಿದರು.

408ನೇ ಮೈಸೂರು ದಸರಾ: ಅರಮನೆಯಲ್ಲಿ ಖಾಸಗಿ ದರ್ಬಾರ್ ಆರಂಭ

ಇನ್ನೊಂದೆಡೆ ಉಪಮುಖ್ಯಮಂತ್ರಿ ಪರಮೇಶ್ವರ್ ಕೂಡ ದಸರಾ ಆರಂಭಕ್ಕೆ ತಮ್ಮ ಅನುಪಸ್ಥಿತಿ ಕುರಿತು ಮಾತನಾಡಿದ್ದು, ಮೂರು ದಿನಗಳ ಕಾಲ ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದೇನೆ ಹಾಗಾಗಿ ದಸರಾ ಉದ್ಘಾಟನೆಗೆ ಹೋಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

English summary
Chamraj Nagar district in charge minister Puttarangashetty has criticized that Mysuru district in charge minister G.T.Devegiwda is acting like Hitler during Dussehra celebration in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X