ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಸರಾ ದೀಪಾಲಂಕಾರ ತೆರವುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಅಕ್ಟೋಬರ್ 14: ಸಾಂಕೇತಿಕ ದಸರಾ ಆಚರಣೆ ನಡೆಸಿ, ದೀಪಾಲಂಕಾರ ತೆರವುಗೊಳಿಸುವಂತೆ ಆಗ್ರಹಿಸಿ ಇಂದು ಮೈಸೂರು ಜಿಲ್ಲಾ ಸಮಿತಿಯ ಭಾರತ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಇದೇ ಸಂದರ್ಭ, ದಸರಾ ಆಚರಣೆಗೆ ಮೀಸಲಿಟ್ಟ ಹಣವನ್ನು ಆಟೋ, ಟ್ಯಾಕ್ಸಿ, ಸಣ್ಣಪುಟ್ಟ ವ್ಯಾಪಾರಿಗಳಿಗೆ ಮಾಸಿಕ 7500ರೂ ನೀಡಬೇಕು ಎಂದೂ ಆಗ್ರಹಿಸಲಾಯಿತು. ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಕೆ.ಬಸವರಾಜ್ ಮಾತನಾಡಿ, "ಜಿಲ್ಲೆಯಲ್ಲಿ ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿದ್ದು, ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇಂಥ ಸಂದರ್ಭದಲ್ಲಿ ಜಿಲ್ಲಾಡಳಿತ, ಸೋಂಕು ನಿಯಂತ್ರಿಸುವ ಬದಲು ದಸರಾ ಆಚರಣೆ ಮಾಡಿ ಸೋಂಕನ್ನು ಹೆಚ್ಚಿಸಲು ಹೊರಟಿದೆ. ಸರಳ ದಸರಾ ಆಚರಿಸಲು, ದೀಪಾಲಂಕಾರ ಮಾಡಲು ಹೊರಟಿರುವುದು ಸೂತಕದ ಮನೆಯಲ್ಲಿ ದೀಪಾಲಂಕಾರ ಮಾಡಿದಂತೆ" ಎಂದು ಟೀಕಿಸಿದರು.

Mysuru: Protest Demanding Only Symbolic Dasara Celebration

 ಸರ್ಕಾರ ಅದ್ಧೂರಿ ದಸರಾ ಉತ್ಸವವನ್ನು ಮಾಡಲೇಬೇಕು: ವಾಟಾಳ್ ನಾಗರಾಜ್ ಸರ್ಕಾರ ಅದ್ಧೂರಿ ದಸರಾ ಉತ್ಸವವನ್ನು ಮಾಡಲೇಬೇಕು: ವಾಟಾಳ್ ನಾಗರಾಜ್

ದಸರಾ ಆಚರಿಸುವ ಬದಲು ದಸರಾ ಆಚರಣೆಗೆ ಮೀಸಲಿಟ್ಟಿರುವ ಹಣವನ್ನು ಬಡ ವ್ಯಾಪಾರಿಗಳಿಗೆ ಮೂರು ತಿಂಗಳು ಕಾಲ ನೀಡಬೇಕು. ಪ್ಯಾಂಡಮಿಕ್ ಆಕ್ಟ್ ನೀಡುವ ವಿಶೇಷಾಧಿಕಾರವನ್ನು ಜಿಲ್ಲಾಧಿಕಾರಿಗಳು ಬಳಸಿ ಖಾಸಗಿ ಆಸ್ಪತ್ರೆ, ಕೋವಿಡ್ ಸೆಂಟರ್‌ಗಳನ್ನು ಸರ್ಕಾರದ ವಶಕ್ಕೆ ಪಡೆದು ಜನರಿಗೆ ಉಚಿತ ಚಿಕಿತ್ಸೆ ನೀಡಬೇಕೆಂದು ಆಗ್ರಹಿಸಿದರು.

English summary
Mysuru District committee communist Party activists staged a protest today demanding symbolic Dasara celebration
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X