ಶಾಸಕ ವಿಶ್ವನಾಥ್ ವಿರುದ್ಧ ಮೈಸೂರಿನಲ್ಲಿ ಪ್ರತಿಭಟನೆ

ಮೈಸೂರು, ಜುಲೈ 8: ಜೆಡಿಎಸ್ ಗೆ ರಾಜೀನಾಮೆ ಕೊಟ್ಟ ಶಾಸಕ ಎಚ್.ವಿಶ್ವನಾಥ್‌ ಅವರು ಅತೃಪ್ತ ಶಾಸಕರೊಂದಿಗೆ ಸೇರಿ ಒಳಸಂಚು ನಡೆಸುತ್ತಿರುವುದನ್ನು ಖಂಡಿಸಿ ಹುಣಸೂರು ತಾಲ್ಲೂಕು ಜೆಡಿಎಸ್ ಕಾರ್ಯಕರ್ತರು ಪಕ್ಷದ ಕಚೇರಿ ಮುಂಭಾಗ ದಿಢೀರ್ ಪ್ರತಿಭಟನೆ ನಡೆಸಿದರು.

ಕಚೇರಿ ಮುಂಭಾಗ ಸೇರಿದ ಕಾರ್ಯಕರ್ತರು 'ಪಕ್ಷಕ್ಕೆ ಮೋಸ ಮಾಡಿದ ಶಾಸಕರಿಗೆ ಧಿಕ್ಕಾರ', 'ದೇವೇಗೌಡರಿಗೆ ಮೋಸ ಮಾಡಿದವರಿಗೆ ಧಿಕ್ಕಾರ' ಎಂದು ಘೋಷಣೆಗಳನ್ನು ಕೂಗಿದರು.

Protest against H Vishwanath resignation in Hunsur

ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಕಾರ್ಯಕರ್ತರು, ‌‌'ರಾಜಕೀಯ ಅಂತ್ಯಕಾಲದಲ್ಲಿ, ಇವರು ಶಾಸಕರಾಗಲು ದೇವೇಗೌಡರು ಕಾರಣರಾಗಿದ್ದಾರೆ. ಆದರೆ ಈಗ ತಾಲ್ಲೂಕಿನ ಜನತೆಗೂ ತಿಳಿಸದೇ, ಪಕ್ಷದ ಹಿರಿಯರ ಬಳಿ ಚರ್ಚಿಸದೇ ಇದ್ದಕ್ಕಿದ್ದಂತೆ ಅತೃಪ್ತರೊಡನೆ ಸೇರಿಕೊಂಡು ರಾಜೀನಾಮೆ ನೀಡುವ ಮೂಲಕ ಪಕ್ಷದ ಗೌರವಕ್ಕೆ ಧಕ್ಕೆಯುಂಟು ಮಾಡಿದ್ದಾರೆ. ದೇವರಾಜ ಅರಸರ ಒಡನಾಡಿ ಎಂದು ಹೇಳಿಕೊಳ್ಳುವ ವಿಶ್ವನಾಥ್, ಇಂದು ಅರಸರ ಹೆಸರಿಗೆ ಮಸಿ ಬಳಿದಿದ್ದಾರೆ. ವಿಶ್ವನಾಥ್ ತಾಲ್ಲೂಕಿನ ಜನತೆ ಮುಂದೆ ಬಂದು ವಿವರ ನೀಡಬೇಕು' ಎಂದು ಒತ್ತಾಯಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+