ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರತಾಪ್ ಸಿಂಹ ಉಗ್ರಗಾಮಿ, ನರಿ ಅವನಿಗೇಕೆ ಮತ ಹಾಕಬೇಕು? :ಮಹೇಶ್ ಚಂದ್ರ ಗುರು

|
Google Oneindia Kannada News

ಮೈಸೂರು, ಮಾರ್ಚ್ 23 : ಪ್ರತಾಪ್ ಸಿಂಹ ಒಬ್ಬ ಉಗ್ರಗಾಮಿ. ಅವನೊಬ್ಬ ನರಿ ಅವನಿಗೇಕೆ ಮತ ಹಾಕಬೇಕು ಎಂದು ಪ್ರಗತಿಪರ ಚಿಂತಕ ಪ್ರೊ. ಮಹೇಶ್ ಚಂದ್ರ ಗುರು ಗಂಭೀರ ಆರೋಪ ಮಾಡಿದ್ದಾರೆ.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

ಮೈಸೂರಿನಲ್ಲಿ ಮಾತನಾಡಿದ ಅವರು, ಬಿಜೆಪಿಯ ಸಂಸದ ನನ್ನ ಶಿಷ್ಯ ಸಿಂಹ, ಸಿಂಹ ಎಂಥಾ ಸಿಂಹ?, ಪ್ರತಾಪ್ ಸಿಂಹ ಒಬ್ಬ ಪೇಪರ್ ನರಿ, ಉಗ್ರಗಾಮಿ ಅವನಿಗೆ ಮತ ಹಾಕುವುದು ವ್ಯರ್ಥ. ಪ್ರತಾಪ್ ಸಿಂಹಗೆ ಪತ್ರಿಕೋದ್ಯಮದ ಪಾಠ ಹೇಳಿಕೊಟ್ಟವನು ನಾನು. ಅವನು ನನ್ನ ಶಿಷ್ಯನಾಗಿದ್ದ ಆತನ ಬಗ್ಗೆ ಎಲ್ಲವೂ ಬಲ್ಲೆ ಎಂದು ಗುಡುಗಿದ್ದಾರೆ.

ಗೌರಿ ಹಂತಕರ ಹಿಟ್ ಲಿಸ್ಟ್ ನಲ್ಲಿದ್ದ ಮಹೇಶ್ ಚಂದ್ರ ಗುರು ಸ್ಫೋಟಕ ಸಂದರ್ಶನ ಗೌರಿ ಹಂತಕರ ಹಿಟ್ ಲಿಸ್ಟ್ ನಲ್ಲಿದ್ದ ಮಹೇಶ್ ಚಂದ್ರ ಗುರು ಸ್ಫೋಟಕ ಸಂದರ್ಶನ

ಪ್ರತಾಪ್ ನಂತಹ ಉಗ್ರಗಾಮಿಗೆ ಮತ ಏಕೆ ಹಾಕಬೇಕು ಎಂದು ಕೇಳಿದ್ದಾರೆ. ಇದೇ ವೇಳೆ ಚಾಮರಾಜನಗರ ಸಂಸದ ಧೃವನಾರಾಯಣ್ ಅವರನ್ನು ಹೊಗಳಿರುವ ಮಹೇಶ್, ಅವರು ರಾಜ್ಯದಲ್ಲೇ ಉತ್ತಮ ಸಂಸದರು ಎಂದು ಶಹಬ್ಬಾಸಗಿರಿ ವ್ಯಕ್ತಪಡಿಸಿದ್ದಾರೆ.

progressive thinker Mahesh Chandra guru made allegation on pratap simha

ಧೃವನಾರಾಯಣ್ ದೇಶದಲ್ಲೇ ಕ್ಷೇತ್ರ ಅಭಿವೃದ್ಧಿಗೊಳಿಸಿದ ನಾಲ್ಕನೇ ಉತ್ತಮ ಸಂಸದ ಎಂದು ಮನ್ನಣೆ ಪಡೆದಿದ್ದಾರೆ. ಅಂತವರನ್ನು ಗೆಲ್ಲಿಸದೇ ಇನ್ಯಾರನ್ನು ಗೆಲ್ಲಿಸುತ್ತೀರಾ ಎಂದು ಮಹೇಶ್ ಚಂದ್ರಗುರು ಪ್ರಶ್ನಿಸಿದ್ದಾರೆ.

ಕರ್ನಾಟಕ ಲೋಕಸಭಾ ಕ್ಷೇತ್ರಗಳ 'ಎ ಟು ಜೆಡ್' ಮಾಹಿತಿ

ರಾಷ್ಟ್ರದಲ್ಲಿ ಬಿಜೆಪಿ ಪಕ್ಷದೊಂದಿಗೆ ಬಿಎಸ್‍ಪಿ ಒಳ ಒಪ್ಪಂದ ಮಾಡಿಕೊಂಡಿದ್ದು, ಈ ಮೂಲಕ ದೇಶ ಮುಗಿಸಲು ಒಳಸಂಚು ಮಾಡುತ್ತಿದ್ದಾರೆ. ಬಿಜೆಪಿ ಹಾಗೂ ಬಿಎಸ್‍ಪಿ ಒಂದೇ ನಾಣ್ಯದ ಎರಡು ಮುಖಗಳು. ದಲಿತ ಮತಗಳನ್ನು ವಿಭಜನೆ ಮಾಡಿ ಜಾತ್ಯಾತೀತ ಪಕ್ಷವನ್ನು ಸೋಲಿಸಲು ಪ್ರಯತ್ನ ಮಾಡುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಮಾಯಾವತಿ 25 ಸ್ಥಾನ ಗೆದ್ದರೆ, ಉಪಪ್ರಧಾನಿ ನೀಡುವ ಮಾತು ಮೋದಿ ಕೊಟ್ಟಿದ್ದಾರೆ. ಆದ್ದರಿಂದ ಒಳಮೈತ್ರಿಯನ್ನು ಸೋಲಿಸಬೇಕಿದೆ ಎಂದರು.

progressive thinker Mahesh Chandra guru made allegation on pratap simha

ಸುಮಲತಾ ಮಂಡ್ಯದಲ್ಲಿ ಗೆಲ್ಲಬಾರದು. ಜನ ಸಿನಿಮಾದವರ ಹಿಂದೆ‌ ಹೋದರೇ ದೇಶ ಉದ್ಧಾರ ಆಗಲ್ಲ. ಸುಮಲತಾಗೆ ಹೊಲಿಸಿದರೆ ನಿಖಿಲ್ ಕುಮಾರಸ್ವಾಮಿ ಬೆಟರ್ ಇದ್ದಾರೆ. ಪ್ರಕಾಶ್ ರೈ ಒಬ್ಬ ಪ್ರಗತಿಪರ ಚಿಂತಕನಾಗಿ ಹೋರಾಟಗಾರನಾಗಿ ಚುನಾವಣೆಗೆ ನಿಲ್ಲಲು ಅರ್ಹರು. ಅಂತಿಮವಾಗಿ ಮತದಾರ ಅವರನ್ನು ಆಯ್ಕೆ ಮಾಡಬೇಕು. ಆದರೆ ಯಾರೂ ತೆವಲಿಗಾಗಿ ಚುನಾವಣೆಗೆ ನಿಲ್ಲಬಾರದು ಎಂದು ಸುಮಲತಾ ವಿರುದ್ಧ ಪ್ರೊ.ಮಹೇಶ್ ಚಂದ್ರಗುರು ಕಿಡಿಕಾರಿದರು.

English summary
Progressive thinker Prof. Mahesh Chandra made allegation on Mysuru MP Pratap simha. He said that, Pratap simha is a militant. Why should vote for a fox?.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X