ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ವಿವಿ ನೂತನ ಆಡಳಿತ ಕುಲಸಚಿವರಾಗಿ ಡಾ.ಲಿಂಗರಾಜ ಗಾಂಧಿ ಆಯ್ಕೆ

|
Google Oneindia Kannada News

ಮೈಸೂರು, ಫೆಬ್ರವರಿ 21: ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾಗಿದ್ದ ಪ್ರೊ.ಲಿಂಗರಾಜ ಗಾಂಧಿ ಅವರನ್ನು ಮೈಸೂರು ವಿಶ್ವವಿದ್ಯಾಲಯದ ಆಡಳಿತ ಕುಲಸಚಿವರನ್ನಾಗಿ ನೇಮಿಸಲಾಗಿದೆ.

ಇಂಗ್ಲಿಷ್‌ ಪ್ರಾಧ್ಯಾಪಕರೂ ಆಗಿರುವ ಲಿಂಗರಾಜ ಗಾಂಧಿ ಈ ಹಿಂದೆ ಮೈಸೂರು ವಿ.ವಿ ಯೋಜನೆ, ಉಸ್ತುವಾರಿ ಮತ್ತು ಮೌಲ್ಯಮಾಪನ ಮಂಡಳಿಯ ನಿರ್ದೇಶಕರಾಗಿ, ರುಸಾ ನೋಡೆಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.

ಇನ್ಮುಂದೆ ಮೈಸೂರು ವಿವಿ ವಿದ್ಯಾರ್ಥಿಗಳಿಗೆ ವಿದೇಶಿ ಪ್ರಾಧ್ಯಾಪಕರಿಂದ ಪಾಠ!ಇನ್ಮುಂದೆ ಮೈಸೂರು ವಿವಿ ವಿದ್ಯಾರ್ಥಿಗಳಿಗೆ ವಿದೇಶಿ ಪ್ರಾಧ್ಯಾಪಕರಿಂದ ಪಾಠ!

ಈ ಹಿನ್ನೆಲೆಯಲ್ಲಿ ಪ್ರತಿಕ್ರಯಿಸಿರುವ ಪ್ರೊ.ಲಿಂಗರಾಜ ಗಾಂಧಿ, ನಾನು ಓದಿದ, ಸಂಶೋಧನೆ ನಡೆಸಿದ, ಪ್ರಾಧ್ಯಾಪಕನಾಗಿ ಕಾರ್ಯ ನಿರ್ವಹಿಸಿದ ವಿ.ವಿಗೆ ಹಿಂದಿರುಗಲು ಖುಷಿಯಾಗುತ್ತಿದೆ. ಸರಿಸುಮಾರು 35 ವರ್ಷ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಈಗ ಮತ್ತೊಂದು ಜವಾಬ್ದಾರಿ ಲಭಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.

Prof.Lingaraja Gandhi appointed as new registrar of Mysuru university

ಹುಣಸೂರು ತಾಲೂಕಿನವರಾದ ಪ್ರೊ.ಲಿಂಗರಾಜ ಗಾಂಧಿ, ಯೆಮನ್‌ ದೇಶದ ಸಂದರ್ಶಕ ಪ್ರಾಧ್ಯಾಪಕರಾಗಿ, ಮೈಸೂರು ವಿ.ವಿ ಕಾಲೇಜು ಅಭಿವೃದ್ಧಿ ಮಂಡಳಿ ಹಾಗೂ ಯುಜಿಸಿ-ಎಚ್‌ಆರ್‌ಡಿ ಕೇಂದ್ರದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಕುಲಸಚಿವರಾಗಿದ್ದ ಪ್ರೊ.ಆರ್.ರಾಜಣ್ಣ ಅವರನ್ನು ಮಾತೃ ವಿಭಾಗಕ್ಕೆ ವಾಪಸ್‌ ಕಳುಹಿಸಲಾಗಿದೆ. ಅವರ ಕಾರ್ಯವೈಖರಿ ಬಗ್ಗೆ ವಿ.ವಿ ಬೋಧಕರು ಹಾಗೂ ವಿದ್ಯಾರ್ಥಿಗಳು ದೂರು ನೀಡಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಪ್ರಥಮ ಡಿಜಿಟಲ್ ಯೂನಿವರ್ಸಿಟಿಯಾಗಲು ಪಣತೊಟ್ಟ ಮೈಸೂರು ವಿವಿಪ್ರಥಮ ಡಿಜಿಟಲ್ ಯೂನಿವರ್ಸಿಟಿಯಾಗಲು ಪಣತೊಟ್ಟ ಮೈಸೂರು ವಿವಿ

ಸಂಶೋಧನಾ ವಿದ್ಯಾರ್ಥಿಗಳು ಈಚೆಗೆ ಅಹೋರಾತ್ರಿ ಧರಣಿ ನಡೆಸಿದ್ದರು. ಮೈಸೂರು ವಿ.ವಿಯ 124 ಬೋಧಕೇತರ ಸಿಬ್ಬಂದಿ ಬಿಡುಗಡೆ ಹಾಗೂ ಮರುನೇಮಕ ಪ್ರಕರಣದಲ್ಲೂ ಅವರ ಹೆಸರು ಕೇಳಿಬಂದಿತ್ತು. ಈ ಸಂಬಂಧ ಪ್ರೊ.ದಯಾನಂದ ಮಾನೆ ಅವರು ರಾಜ್ಯಪಾಲರಿಗೆ ದೂರು ನೀಡಿದ್ದರು.

Prof.Lingaraja Gandhi appointed as new registrar of Mysuru university

 ಮೈಸೂರು ವಿವಿ ಬೋಧಕೇತರ ಸಿಬ್ಬಂದಿ ನೇಮಕದಲ್ಲಿ ಅಕ್ರಮ ನಡೆದಿಲ್ಲ ಮೈಸೂರು ವಿವಿ ಬೋಧಕೇತರ ಸಿಬ್ಬಂದಿ ನೇಮಕದಲ್ಲಿ ಅಕ್ರಮ ನಡೆದಿಲ್ಲ

ಕುವೆಂಪು ವಿಶ್ವವಿದ್ಯಾಲಯದ ಕಡೂರು ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಕೆ.ಎಂ.ಮಹದೇವನ್ ಅವರನ್ನು ಮೈಸೂರು ವಿ.ವಿ ಮೌಲ್ಯ ಮಾಪನ ಕುಲಸಚಿವರನ್ನಾಗಿ ನೇಮಿಸಲಾಗಿದೆ. ಈ ಸ್ಥಾನದಲ್ಲಿದ್ದ ಪ್ರೊ.ಜೆ.ಸೋಮಶೇಖರ್‌ ಅವರು ಮಾತೃ ವಿಭಾಗಕ್ಕೆ ಮರಳಿದ್ದಾರೆ.

English summary
The government of karnataka appointed Prof.Lingaraja Gandhi as registrar of Mysuru University.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X