Priyanka Gandhi: ಮೈಸೂರಿನ ಮೈಲಾರಿ ಹೋಟೆಲ್‌ನಲ್ಲಿ ದೋಸೆ, ಇಡ್ಲಿ ತಿಂದ ಪ್ರಿಯಾಂಕಾ ಗಾಂಧಿ
ಮೈಸೂರು, ಏಪ್ರಿಲ್ 26: ಕರ್ನಾಟಕ ವಿಧಾನಸಭಾ ಚುನಾವಣೆ ನಿಮಿತ್ತ ಮೈಸೂರಿನಲ್ಲಿ ಪ್ರಚಾರ ಕೈಗೊಂಡಿರುವ ಎಐಸಿಸಿ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಬುಧವಾರ ಮೈಸೂರಿನ ಅಗ್ರಹಾರದಲ್ಲಿರುವ ಮೈಲಾರಿ ಹೋಟೆಲ್‌ನಲ್ಲಿ ದೋಸೆ ತಿಂದರು.
ಮಂಗಳವಾರ ನರಸೀಪುರದ ಹೆಳವರಹುಂಡಿಯಲ್ಲಿ ಪ್ರಚಾರ ಕೈಗೊಂಡಿದ್ದ ಅವರು ಬುಧವಾರ ಬೆಳಗ್ಗೆಯೇ ಮೈಸೂರಿನ ಅಗ್ರಹಾರದಲ್ಲಿರುವ ಖ್ಯಾತ ಮೈಲಾರಿ ಹೋಟೆಲ್‌ಗೆ ತೆರಳಿ ದೋಸೆ ಸವಿದರು. ಈ ವೇಳೆ ಅವರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ರಣದೀಪ್ ಸರ್ಜೇವಾಲಾ ಹಾಗೂ ಎಸ್‌ಟಿ ಸೋಮಶೇಖರ್ ಇತರರು ಇದ್ದರು.

ಮೈಸೂರಿನ ಮೈಲಾರಿ ಹೋಟೆಲ್ ಹಲವಾರು ವರ್ಷಗಳಿಂದ ರಾಜ್ಯದಾದ್ಯಂತ ಸುದ್ದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ವರಿಷ್ಠೆ ಪ್ರಿಯಾಂಕಾ ಗಾಂಧಿ ಅವರು ಇಂದು ಬೆಳಗ್ಗೆಯೇ ಮೈಸೂರಿನ ಮೈಲಾರಿ ಹೋಟೆಲ್‌ಗೆ ತೆರಳಿ ದೋಸೆ ಸವಿದರು, ಮಾತ್ರವಲ್ಲದೆ ಅಡುಗೆ ಕೋಣೆಗೆ ಹೋದ ಅವರು ಅಲ್ಲಿಂದ ಬಾಣಸಿಗರ ಜೊತೆ ದೋಸೆಯನ್ನು ತಯಾರಿಸಿದರು.
ಮೈಸೂರಿನ ಮೈಲಾರಿ ಹೋಟೆಲ್‌ನಲ್ಲಿ ದೋಸೆ ತಿಂದ ಪ್ರಿಯಾಂಕಾ ಗಾಂಧಿ#mysuru #priyankagandhi #dosa #mylarihotelmysore #karnatakaelections2023 pic.twitter.com/dxnu09k1Gj
— oneindiakannada (@OneindiaKannada) April 26, 2023
ಮೈಲಾರಿ ಹೋಟೆಲ್‌ಗೆ ಹೋಗಿದ್ದ ಪ್ರಿಯಾಂಕಾ ಗಾಂಧಿ ಅವರನ್ನು ಕಂಡ ಸ್ಥಳೀಯರು ಖುಷಿಯಿಂದ ಬಂದು ಪೋಟೋ ತೆಗೆಸಿಕೊಂಡರು, ಈ ವೇಳೆ ಪ್ರಿಯಾಂಕಾ ಗಾಂಧಿ ಅವರು ಸ್ಥಳೀಯರೊಂದಿಗೆ ಮಾತನಾಡಿ ಆತ್ಮೀಯತೆ ಮೆರೆದರು. ಈ ವೇಳೆ ಪೋಟೋಗಳನ್ನು ಸ್ಥಳೀಯರು ಅವರ ಜೊತೆ ತೆಗೆದುಕೊಂಡರು. ಚುನಾವಣಾ ಹಿನ್ನೆಲೆಯಲ್ಲಿ ಪ್ರಿಯಾಂಕಾ ಗಾಂಧಿ ಅವರು ಏಪ್ರಿಲ್ 26ರಂದು ಅವರು 10.30ಕ್ಕೆ ಶೃಂಗೇರಿಗೆ ಭೇಟಿ ನೀಡಲಿದ್ದಾರೆ.

ಬಳಿಕ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ. ನಂತರ 12. ಗಂಟೆಗೆ ಶೃಂಗೇರಿಯ ಬಾಳೆಹಿನ್ನೂರಿಗೆ ಭೇಟಿ ನೀಡಿ ಕಲಾರಂಗ ಕ್ರೀಡಾಂಗಣದಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ. ನಂತರ 3.15ಕ್ಕೆ ಹಿರಿಯೂರಿನ ಹುಳಿಯಾರ್ ರಸ್ತೆಯಲ್ಲಿರುವ ಸಾರ್ವಜನಿಕ ಕ್ರೀಡಾಂಗಣದಲ್ಲಿ ಗೊಲ್ಲ ಸಮುದಾಯದ ನಾಯಕರೊಂದಿಗೆ ಸಂವಾದ ನಡೆಸಲಿದ್ದಾರೆ. ಬಳಿಕ 3.30ಕ್ಕೆ ಹಿರಿಯೂರಿನ ನಂಜಯ್ಯನ ಕೊಟ್ಟಿಗೆ ಗಾಂಧಿ ವೃತ್ತದ ಮೂಲಕ ರಂಜಿತ್ ಹೊಟೇಲ್‌ವರೆಗೆ ರೋಡ್ ಶೋ ನಡೆಸಲಿದ್ದಾರೆ.
ನಿನ್ನೆ ಪ್ರಚಾರ ಮುಗಿಸಿದ್ದ ಶ್ರೀಮತಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮೈಸೂರು ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಇದ್ದರು. ಬೆಳಗ್ಗೆ ಡಿಕೆ ಶಿವಕುಮಾರ್ ಅವರು ಅವರನ್ನು ಸ್ವಾಗತಿಸಿದರು.












Click it and Unblock the Notifications