ಮೈಸೂರು : ತಿ.ನರಸೀಪುರ ಕುಂಭಮೇಳಕ್ಕೆ ಸಕಲ ಸಿದ್ಧತೆ

ಮೈಸೂರು, ಫೆಬ್ರವರಿ 04 : ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ 11ನೇ ಕುಂಭಮೇಳಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಫೆ.17, 18 ಮತ್ತು 19ರಂದು ಕುಂಭಮೇಳ ನಡೆಯಲಿದೆ.

ಕಾವೇರಿ, ಕಪಿಲಾ ಹಾಗೂ ಗುಪ್ತಗಾಮಿನಿ ಸ್ಪಟಿಕ ಸರೋವರ ಕೂಡುವ ಸ್ಥಳ ಹಾಗೂ ಸುತ್ತಮುತ್ತಲಿನ ಆಳವಾದ ಮರಳಿಲ್ಲದ ಸ್ಥಳಗಳಲ್ಲಿ ಸಾವಿರಾರು ಮರಳು ಮೂಟೆಗಳನ್ನು ಹಾಕಿ ಪುಣ್ಯ ಸ್ನಾನಕ್ಕೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.

ಹಳೇ ತಿರಮಕೂಡಲಿನ ವ್ಯಾಸರಾಜ ಮಠದ ಮುಂದೆ 12 ಅಡಿ ಅಗಲ, 120 ಮೀಟರ್ ಉದ್ದದ ಸಾವಿರಾರು ಮರಳು ಚೀಲಹಾಕಿ ಸಭಾ ಮಂಟಪಕ್ಕೆ ಸಾರ್ವಜನಿಕರು ಓಡಾಡಲು ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಲಾಗಿದೆ.

Kumbh mela 2019

ಭಕ್ತರಿಗಾಗಿ 15 ಕಡೆ ನಲ್ಲಿಗಳಿರುವ ಫ್ಲಾಟ್‌ ಫಾರಂ ನಿರ್ಮಾಣ ಮಾಡಲಾಗುತ್ತಿದೆ. ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಿಂದ ಅಗಸ್ತ್ಯೇಶ್ವರ ದೇವಾಸ್ಥಾನಕ್ಕೆ 10 ಮಿನಿ ಬಸ್ ವ್ಯವಸ್ಥೆ ಮಾಡಲಾಗಿದೆ. ನದಿ ಮತ್ತು ಎರಡೂ ದೇವಸ್ಥಾನಗಳ ಬಳಿ ಬಟ್ಟೆ ಬದಲಿಸುವ ತಾತ್ಕಾಲಿಕ ಕೊಠಡಿ ನಿರ್ಮಾಣ ಮಾಡಲಾಗಿದೆ.

ಶ್ರೀ ಗುಂಜಾನರಸಿಂಹಸ್ವಾಮಿ ನದಿ ದಂಡೆಯಿಂದ ಶ್ರೀ ಅನಾದಿ ಮೂಲಸ್ಥಾನೇಶ್ವರವರೆಗೆ ಹಾಗೂ ವ್ಯಾಸರಾಜಮಠ ಮುಂಭಾಗದ ನದಿ ದಂಡೆಯಲ್ಲಿ ಬೆಳೆದಿದ್ದ ಗಿಡಗಂಟಿ ತೆರವು ಮಾಡಿ ಸ್ವಚ್ಛಗೊಳಿಸಲಾಗಿದೆ. ಸುತ್ತಮುತ್ತಲಿನ ಪ್ರದೇಶಗಳ ಸ್ವಚ್ಛತಾ ಕೆಲಸವೂ ಪ್ರಗತಿಯಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+