ಮತ್ತೆ ಲಾಕ್ ಡೌನ್ ಗೆ ವಿರೋಧ ವ್ಯಕ್ತಪಡಿಸಿದ ಸಂಸದ
ಮೈಸೂರು, ಜೂನ್ 25: "ಎಷ್ಟು ದಿನ ಅಂತ ಜನರನ್ನು ಮನೆಯಲ್ಲಿ ಕೂರಿಸುತ್ತೀರಾ? ಜೀವ ಉಳಿಸೋಕೆ ಹೋಗಿ ಜೀವನ ಹಾಳಾಗಬಾರದು" ಎಂದು ಲಾಕ್ ಡೌನ್ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಸಂಸದ ಪ್ರತಾಪ್ ಸಿಂಹ.
ಮೈಸೂರಿನಲ್ಲಿ ಇಂದು ಮಾತನಾಡಿದ ಅವರು, "ಮತ್ತೆ ಲಾಕ್‌ಡೌನ್ ಅವಶ್ಯಕತೆ ಇಲ್ಲ ಎಂದು ನನಗನ್ನಿಸುತ್ತದೆ. ಸುಮ್ಮನೆ ಪ್ಯಾನಿಕ್ ಕ್ರಿಯೇಟ್ ಮಾಡುವ ಅಗತ್ಯವಿಲ್ಲ. ಪರಿಸ್ಥಿತಿ ಸರ್ಕಾರದ ನಿಯಂತ್ರಣದಲ್ಲಿದೆ. ಸರ್ಕಾರ ಅಂದ ಮೇಲೆ ಜೀವ, ಜೀವನ ಎರಡನ್ನೂ ಉಳಿಸಬೇಕು. ತಜ್ಞರು ಭಾರತದಲ್ಲಿ ಲಕ್ಷಗಟ್ಟಲೆ ಜನ ಸಾಯ್ತಾರೆ ಅಂದಿದ್ರು. ಹಾಗೇನಾದ್ರು ಆಯ್ತಾ? ಈಗಲೂ ಅಷ್ಟೇ ಏನೂ ಆಗಲ್ಲ" ಎಂದರು.
ಸಾವರ್ಕರ್ ಹೆಸರಿಡಲು ವಿರೋಧ ವ್ಯಕ್ತಪಡಿಸಿದರೆ ಕಾಂಗ್ರೆಸ್ ನಿರ್ನಾಮ; ಪ್ರತಾಪ ಸಿಂಹ
"ಕೊರೊನಾ ವೈರಸ್ ನಿಯಂತ್ರಣಕ್ಕೆ ಬೇಕಾದ ಎಲ್ಲ ಮುಂಜಾಗ್ರತಾ ಕ್ರಮವನ್ನು ಸರ್ಕಾರ ತೆಗೆದುಕೊಂಡಿದೆ. ಮೋದಿ ಸರ್ಕಾರ ಲಾಕ್‌ಡೌನ್ ಸಡಿಲಿಕೆ ಮಾಡುವಾಗ ಇದನ್ನೆಲ್ಲ ಯೋಚನೆ ಮಾಡಿದೆ. ಮುಂಬೈ, ದೆಹಲಿಗೂ ಬೆಂಗಳೂರಿಗೂ ವ್ಯತ್ಯಾಸ ಇದೆ. ಅಲ್ಲಿನ ಪರಿಸ್ಥಿತಿಗೂ ಇಲ್ಲಿಗೂ ಸಾಕಷ್ಟು ವ್ಯತ್ಯಾಸ ಇದೆ" ಎಂದು ತಿಳಿಸಿದರು.
"ಬೆಂಗಳೂರಿನಲ್ಲಿ ಕಡಿಮೆ ಸಕ್ರಿಯ ಪ್ರಕರಣಗಳಿವೆ. ಹಾಗಾಗಿ ಮತ್ತೆ ಲಾಕ್‌ಡೌನ್ ಅನಿವಾರ್ಯತೆ ಇಲ್ಲ" ಎಂದು ಹೇಳಿದರು.