ಕನ್ನಡಿಗರ ಬೈದ ಗೋವಾ ಸಚಿವನ ವಿರುದ್ಧ ಪ್ರತಾಪ್ ಸಿಂಹ ಘರ್ಜನೆ

ಮೈಸೂರು, ಜನವರಿ 15 : ಗೋವಾ ಸಚಿವ ಕನ್ನಡಿಗರ ವಿರುದ್ಧ ಕೀಳು ಭಾಷೆ ಬಳಸಿರುವ ಬಗ್ಗೆ ಸಂಸದ ಪ್ರತಾಪ್ ಸಿಂಹ ಟ್ವಿಟ್ಟರ್‌ನಲ್ಲಿ ಕಿಡಿ ಕಾರಿದ್ದಾರೆ. ಮಾತು ಸರಿಯಾಗಿ ಬಳಸದಿದ್ದರೆ ಸರಿಯಾದ ಪಾಠ ಕಲಿಸಬೇಕಾಗುತ್ತದೆ ಎಂದು ಗೋವಾ ಸಚಿವನಿಗೆ ಎಚ್ಚರಿಸಿದ್ದಾರೆ.

ಗೋವಾ ಸಿಎಂ ಪರಿಕ್ಕರ್ ಅವರಿಗೆ ಟ್ವೀಟ್ ಮಾಡಿರುವ ಪ್ರತಾಪ್ ಸಿಂಹ ಪರಿಕ್ಕರ್ ಜೀ ಅವರೇ ನಿಮ್ಮ ಸರ್ಕಾರದ ಉದಾರತೆ ಬಗ್ಗೆ ನಮಗೆ ಗೌರವವಿದೆ. ಕಾಂಗ್ರೆಸ್‌ನ ಕೊಳಕು ರಾಜಕಾರಣದ ಹೊರತಾಗಿ ಕುಡಿಯುವ ನೀರು ಕೊಡುವ ವಿಷಯದಲ್ಲಿ ನಿಮ್ಮ ನಿಲುವಿಗೆ ಗೌರವವಿದೆ. ಆದರೆ ಪದಗಳು ಉಚಿತವಾಗಿ ಸಿಗುತ್ತವೆ ಎಂದು ಮಾತನಾಡಬಾರದು. ಆ ಪದಗಳನ್ನು ಬಳಸುವಾಗ ಎಚ್ಚರವಿರಬೇಕು. ನಿಮ್ಮ ಸಚಿವ ವಿನೋದ್ ಪಾಳೇಕರ್ ಅವರಿಗೆ ಸರಿಯಾಗಿ ಪದ ಬಳಸಲು ಹೇಳಿ, ಇಲ್ಲವಾದರೆ ಅವರು ಇನ್ನೊಮ್ಮೆ ಕರ್ನಾಟಕಕ್ಕೆ ಕಾಲಿಟ್ಟರೆ ನಾವೇ ಪಾಠ ಕಲಿಸಬೇಕಾಗುತ್ತದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಸಿದ್ದರಾಮಯ್ಯ ಅವರ ವಿರುದ್ಧವೂ ಟ್ವಿಟ್ಟರ್‌ನಲ್ಲಿ ಹರಿಹಾಯ್ದಿರುವ ಪ್ರತಾಪ್ ಸಿಂಹ ಸಿದ್ದರಾಮಯ್ಯನವರೇ ನಿಮ್ಮ ನಿದ್ರೆ ನಮ್ಮ ರಾಜ್ಯದ ಹಿತಾಸಕ್ತಿ ಹಾಳು ಮಾಡುತ್ತಿದೆ. ತಾವು ಕನಿಷ್ಟ ಮೇ 1ರವರೆಗಾದರೂ ಎಚ್ಚರದಿಂದಿರಿ ಎಂದು ಸಂಸದ ಪ್ರತಾಪ್ ಸಿಂಹ ಟ್ವಿಟ್ ಮಾಡಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ ಕರ್ನಾಟಕದ ಸಂವೇದನಾಶೀಲ ಸ್ಥಳಕ್ಕೆ ಗೋವಾ ಮಂತ್ರಿಯನ್ನು ಬರಲು ಏಕೆ ಬಿಟ್ಟಿರಿ.? ಕಾವೇರಿ ಸಮಸ್ಯೆ ಇರುವಾಗ ಮುಖ್ಯ ಇಂಜಿನಿಯರ್ ಜೊತೆ ನಮ್ಮ ನೀರಾವರಿ ಸಚಿವರು ತಮಿಳುನಾಡಿಗೆ ಹೋಗಿ ಬರ್ತಾರ. ಹಾಗೆಯೇ ಗೋವಾ ಮಂತ್ರಿ ಬಂದು ಫೋಟೊ ತೆಗೆದುಕೊಳ್ಳಲು ಅವಕಾಶ ನೀಡಿದ ಪುಕ್ಕಲು ಸರ್ಕಾರ ನಿಮ್ಮದು ಎಂದು ಕಿಡಿಕಾರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+