• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊಡಗಿನಲ್ಲಿ 'ಟಿಪ್ಪು' ಹೆಸರನ್ನ ನಾಯಿಗಳಿಗೆ ಇಡ್ತಾರೆ: ಪ್ರತಾಪ್ ಸಿಂಹ

|

ಮೈಸೂರು, ನವೆಂಬರ್.05:ನಿಮ್ಮ ಸರ್ಕಾರಕ್ಕೆ ಮಾನ-ಮರ್ಯಾದೆ ಎಂಬುದು ಇದ್ದರೆ ಟಿಪ್ಪು ಜಯಂತಿ ಕೈಬಿಟ್ಟು ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಆಚರಿಸಿ ಎಂದು ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಜಯಂತಿ, ಬಸವ ಜಯಂತಿ ಮುಂತಾದ ಮಹನೀಯರ ಜಯಂತಿಯನ್ನು ಆಚರಿಸುವಾಗ ಸಾರ್ವಜನಿಕರು ಸಂಭ್ರಮದಿಂದ ಭಾಗವಹಿಸುತ್ತಾರೆ. ಈ ಜಯಂತಿಗಳಿಗೆ ಯಾವುದೇ ಪೊಲೀಸ್ ಕಾವಲು ಇರುವುದಿಲ್ಲ.

ದೀಪಾವಳಿ ವಿಶೇಷ ಪುರವಣಿ

ಆದರೆ ಟಿಪ್ಪು ಜಯಂತಿ ಆಚರಿಸುವಾಗ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿ, ನಾಲ್ಕು ಗೋಡೆಗಳ ಒಳಗೆ ನಡೆಸುತ್ತಾರೆ. ಇದಕ್ಕೆ ಜನರ ಆಕ್ರೋಶವೇ ಕಾರಣ. ಜನರ ಭಾವನೆಗಳಿಗೆ ಬೆಲೆ ಕೊಡದೆ ನಾಲ್ಕು ಗೋಡೆಗಳ ಮಧ್ಯೆ ಪೊಲೀಸ್ ಸರ್ಪಗಾವಲಿನಲ್ಲಿ ಕದ್ದು ಮುಚ್ಚಿ ಟಿಪ್ಪು ಜಯಂತಿ ಆಚರಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಟಿಪ್ಪು ಜಯಂತಿ ಆಚರಣೆ ಬಗ್ಗೆ ಕುಮಾರಸ್ವಾಮಿ ಹೇಳಿದ್ದೇನು?

ಮೈಸೂರಿಗೆ ಯದು ವಂಶದ ಕೊಡುಗೆ ಅಪಾರ. ಸಾಕಷ್ಟು ಕೊಡುಗೆ ಕೊಟ್ಟ ನಾಲ್ವಡಿ ಕೃಷ್ಣರಾಜ ಒಡೆಯರ್ ಬಗ್ಗೆ ನಿಮ್ಮ ಪ್ರೀತಿ ತೋರಿಸಿ. ದೀನ ದಲಿತರಿಗೆ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಮೀಸಲಾತಿ ನೀಡಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್. ಹೀಗಾಗಿ ನಿಮಗೆ ಪ್ರೀತಿ, ಗೌರವ ಇದ್ದರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಮಾಡಿ ಎಂದು ಆಗ್ರಹಿಸಿದರು.

 ಟಿಪ್ಪು ಸುಲ್ತಾನ್ ಬಗ್ಗೆ ತಿಳಿದಿಲ್ಲ

ಟಿಪ್ಪು ಸುಲ್ತಾನ್ ಬಗ್ಗೆ ತಿಳಿದಿಲ್ಲ

ಜಯಮಾಲಾ ಉತ್ತಮ ಕಲಾವಿದೆ. ಆಕೆ ಯಾರೋ ಬರೆದು ಕೊಟ್ಟ ಸ್ಕ್ರಿಪ್ಟ್ ಓದಿದ್ದಾರೆ ಅಷ್ಟೇ. ಅವರಿಗೆ ಟಿಪ್ಪು ಸುಲ್ತಾನ್ ಬಗ್ಗೆ ತಿಳಿದಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಠಕ್ಕೆ ಬಿದ್ದ ಪರಿಣಾಮ ಇಂದು ಅಧಿಕಾರ ಕಳೆದುಕೊಂಡಿದ್ದಾರೆ. ಈಗಲೂ ಕಾಲ ಮುಂಚಿಲ್ಲ. ಸಿಎಂ ಟಿಪ್ಪು ಜಯಂತಿ ಬೇಡ ಎಂದು ನಿಲ್ಲಿಸಬಹುದು. ಕನ್ನಡ ಭಾಷೆ, ನಾಡಿಗೆ ಟಿಪ್ಪು ಸುಲ್ತಾನ್ ನ ಕೊಡುಗೆ ಏನಿದೆ ತಿಳಿಸಲಿ. ಉತ್ತಮ ಮಹಾನುಭಾವರ ಜಯಂತಿ ಆಚರಿಸಲಿ ಎಂದು ಪ್ರತಾಪ್ ಸಿಂಹ ಮನವಿ ಮಾಡಿದರು.

ಟಿಪ್ಪು ಜಯಂತಿ ಕುರಿತು ಸಚಿವೆ ಜಯಮಾಲಾ ನೇತೃತ್ವದಲ್ಲಿ ಸಭೆ

 ಟಿಪ್ಪು ಸುಲ್ತಾನ್ ಬಗ್ಗೆ ಆಕ್ರೋಶವಿದೆ

ಟಿಪ್ಪು ಸುಲ್ತಾನ್ ಬಗ್ಗೆ ಆಕ್ರೋಶವಿದೆ

ಈಗಲೂ ಸಿಎಂ ಮೇಲೆ ವಿಶ್ವಾಸವಿದೆ. ಟಿಪ್ಪು ಸುಲ್ತಾನ್ ಜಯಂತಿಯನ್ನು ನಿಲ್ಲಿಸಬಹುದು. ಇನ್ನೂ ಸಮಯವಿದೆ ಎಂದ ಪ್ರತಾಪ್ ಸಿಂಹ, ಒಳ್ಳೆ ನಿರ್ಧಾರಕ್ಕೆ ಬಂದರೆ ಒಳ್ಳೆಯದು. ಕೊಡಗು ಜನ ಟಿಪ್ಪು ಸುಲ್ತಾನ್ ಹೆಸರನ್ನ ನಾಯಿಗಳಿಗೆ ಇಡುತ್ತಾರೆ. ಕೊಡಗಿನ ಜನರಿಗೆ ಟಿಪ್ಪು ಸುಲ್ತಾನ್ ಬಗ್ಗೆ ಆಕ್ರೋಶವಿದೆ ಎಂದರು.

 ನನ್ನ ಹೆಸರು ಹಾಕಬೇಡಿ

ನನ್ನ ಹೆಸರು ಹಾಕಬೇಡಿ

ಇಂದು ಬೆಳಗ್ಗೆ ಕೊಡಗು ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಟಿಪ್ಪು ಜಯಂತಿಗೆ ನನ್ನ ಹೆಸರು ಹಾಕಬೇಡಿ ಎಂದು ತಿಳಿಸಿದ್ದೇನೆ. ಮೈಸೂರು ಜಿಲ್ಲಾಧಿಕಾರಿಗಳಿಗೂ ಈ ಬಗ್ಗೆ ತಿಳಿಸಿದ್ದೇನೆ. ಪತ್ರ ಕೂಡ ಕಳುಹಿಸಿಕೊಡುತ್ತೇನೆ ಎಂದು ಪ್ರತಾಪ್ ಸಿಂಹ ತಿಳಿಸಿದರು.

'ಯಾರೂ ವಿರೋಧ ಮಾಡಿದರೂ ಟಿಪ್ಪು ಜಯಂತಿ ಆಚರಣೆ ಮಾಡುತ್ತೇವೆ'

 ಅಬ್ದುಲ್ ಕಲಾಂ ಜಯಂತಿ ಆಚರಿಸಿ

ಅಬ್ದುಲ್ ಕಲಾಂ ಜಯಂತಿ ಆಚರಿಸಿ

ಅಬ್ದುಲ್ ಕಲಾಂ, ನಜೀರ್ ಸಾಬ್, ಸಂತ ಶಿಶುನಾಳ ಷರೀಫ್ ಜಯಂತಿ ಆಚರಿಸಿ ಎಂದು ಆಗ್ರಹಿಸಿದ ಪ್ರತಾಪ್ ಸಿಂಹ, ಟಿಪ್ಪು ಮೇಲಪಂಕ್ತಿಯ ವ್ಯಕ್ತಿಯಲ್ಲ. ಟಿಪ್ಪು ಪಾತ್ರ ಮಾಡಿದ ಸಂಜಯ್ ಖಾನ್ ಮೈ ಸುಟ್ಟುಕೊಂಡಿದ್ದರು. ವಿಜಯ್ ಮಲ್ಯ ತಮ್ಮ ವ್ಯವಹಾರ ಕಳೆದುಕೊಂಡರು. ನೀವು ಎಚ್ಚರಿಕೆಯಿಂದಿರಿ ಎಂದರೂ ಸಿದ್ದರಾಮಯ್ಯ ಕೇಳಲಿಲ್ಲ. ಅವರು ಅಧಿಕಾರ ಕಳೆದುಕೊಂಡರು. ಇನ್ನು ಮೇಲೆ ನಿಮ್ಮಿಷ್ಟ ಎಂದರು.

ಟಿಪ್ಪು ಜಯಂತಿ ಆಮಂತ್ರಣದಲ್ಲಿ ಬಿಜೆಪಿ ನಾಯಕರ ಹೆಸರು ಬೇಡ:ಕೋಟಾ ಶ್ರೀನಿವಾಸ ಪೂಜಾರಿ

English summary
MP Pratap Simha Said that do not celebrate Tippu Jayanti. But Celebrate Nalvadi Krishnaraja Wodeyar Jayanti.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X