ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುರುಘಾ ಶ್ರೀಗಳ ಮೇಲೆ ಪೋಕ್ಸೋ ಪ್ರಕರಣ: ಮಕ್ಕಳ ಮೇಲೆ ಬಕಾಸುರನಂತೆ ಸರದಿಯಲ್ಲಿ ದೌರ್ಜನ್ಯ!

|
Google Oneindia Kannada News

ಮೈಸೂರು, ಆಗಸ್ಟ್ 27: ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡರುವ ಆರೋಪವನ್ನು ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ದ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಮಕ್ಕಳನ್ನು ರಕ್ಷಣೆ ಮಾಡಿದ ಒಡನಾಡಿ ಸಂಸ್ಥೆಯ ಮುಖ್ಯಸ್ಥರ ಬಳಿ ಮಕ್ಕಳು ಹೇಳಿದ್ದೇನು? ಈ ಬಗ್ಗೆ ಒಡನಾಡಿ ಸಂಸ್ಥೆಯ ಮುಖ್ಯಸ್ಥರು ಹೇಳಿದ್ದೇನು. ಇಲ್ಲಿದೆ ಸಂಪೂರ್ಣ ರಿಪೋರ್ಟ್‌.

ಮಕ್ಕಳು ಹೇಳಿದ್ದು ಕೇಳಿ ಸ್ವಾಮೀಜಿ ಬಗ್ಗೆ ಅಸಹ್ಯ
"ಶಿವಮೂರ್ತಿ ಶರಣರು ಸೇರಿ ಐವರು ವಿರುದ್ದ ದೂರು ದಾಖಲಾಗಿದೆ. ಉಳಿದ ನಾಲ್ವರು ಲೈಂಗಿಕ ದೌರ್ಜನ್ಯಕ್ಕೆ ಸ್ವಾಮೀಜಿಗೆ ಸಹಾಯ ಮಾಡುತ್ತಿದ್ದರು. ನಮ್ಮ‌ ಬಳಿ ದೂರು ಬರುತ್ತಿದ್ದಂತೆ ಬಹಳಷ್ಟು ಒತ್ತಡಗಳು ಬಂದಿವೆ. ನಾವು ಅದಾವುದನ್ನು ಲೆಕ್ಕಿಸದೆ ಮಕ್ಕಳಿಗೆ ನ್ಯಾಯ ಒದಗಿಸಲಷ್ಟೇ ಹೆಜ್ಜೆ ಇಟ್ಟಿದ್ದೇವೆ. ಸ್ವಾಮೀಜಿಯವರು ವಿಚಾರವಂತರು, ಪ್ರಜ್ಞಾವಂತರು, ಪ್ರಗತಿಪರರು ಎಂಬ ಭಾವನೆ ಇತ್ತು. ಮಕ್ಕಳ ಹೇಳಿಕೆ ಬಳಿಕ‌ ಸ್ವಾಮೀಜಿಯವರ ಬಗ್ಗೆ ನಮಗೆ ಅಸಹ್ಯ ಹುಟ್ಟಿಸಿದೆ" ಎಂದು ಮೈಸೂರಿನಲ್ಲಿ ಒಡನಾಡಿ ಸಂಸ್ಥೆ ಮುಖ್ಯಸ್ಥ ಪರಶು ಹೇಳಿದ್ದಾರೆ.

POSCO case file Against Muruga Mutt Swamiji: Mysuru Odanadi organization reaction

ಮಕ್ಕಳು ಬೆಂಗಳೂರಿಗೆ ತೆರಳಿ ಆತ್ಮಹತ್ಯೆಗೆ ಮುಂದಾಗಿದ್ದರು:
"ಇಬ್ಬರು ಮಕ್ಕಳು ಚಿತ್ರದುರ್ಗದಲ್ಲಿ ಓದುತ್ತಿದ್ದರು. ಆ ಮಕ್ಕಳ ಮೇಲೆ ಸ್ವಾಮೀಜಿಯವರು ನಿರಂತರ ದೌರ್ಜನ್ಯ ನಡೆಸಿದ್ದಾರೆ. ಅವರ ಕಿರುಕುಳದಿಂದ‌ ಬೇಸತ್ತ ಮಕ್ಕಳು ರಾಜಧಾನಿ ಬೆಂಗಳೂರಿಗೆ ಬಂದು ಅಲ್ಲಿ ದೂರು ದಾಖಲಿಸಲು ಪ್ರಯತ್ನ ಮಾಡಿದ್ದಾರೆ, ಅಲ್ಲಿ ಸಾಧ್ಯವಾಗದಿದ್ದಾಗ ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಳ್ಳಲು‌ ಮುಂದಾಗಿದ್ದರು. ಆದರೆ ಒಬ್ಬರು ಆಟೋ ಚಾಲಕ ಅವರಿಗೆ ಸಹಾಯ ಮಾಡಿ ನಮ್ಮ ಬಳಿ ಹೋಗಿ ನ್ಯಾಯ ಸಿಗುತ್ತೆ ಎಂದು ಕಳುಹಿಸಿಕೊಟ್ಟರು. ಆ ಇಬ್ಬರು ಮಕ್ಕಳನ್ನು ಆಪ್ತ ಸಮಾಲೋಚನೆ ಮಾಡಿದಾಗ ಸ್ವಾಮೀಜಿಯವರ ಕಿರುಕುಳವನ್ನ ಎಳೆಎಳೆಯಾಗಿ ಬಿಚ್ಚಿಟ್ಟರು. ತಕ್ಷಣ ನಾವು ಮಕ್ಕಳು ಹಕ್ಕುಗಳ ರಕ್ಷಣಾ ಕೇಂದ್ರದವರಿಗೆ ವಿಚಾರ ತಲುಪಿಸಿದೆವು. ಅವರೂ ಸಹ ಕೌನ್ಸೆಲಿಂಗ್ ಮಾಡಿ ಮಕ್ಕಳ ಹೇಳಿಕೆಯಲ್ಲಿ ಸತ್ಯಾಂಶವಿದೆ ಎಂದು ಖಚಿತವಾದ ನಂತರ‌ ನಿನ್ನೆ ರಾತ್ರಿ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ" ಎಂದು ಮೈಸೂರಿನಲ್ಲಿ ಒಡನಾಡಿ ಸಂಸ್ಥೆ ಮುಖ್ಯಸ್ಥ ಪರಶು ಹೇಳಿದ್ದಾರೆ.

ಸ್ವಾಮೀಜಿ ಬೆನ್ನು ಉಜ್ಜಲು, ಮಂಚ ಸರಿ ಮಾಡಲು ಬಳಕೆ:
"ಸ್ವಾಮೀಜಿಗೆ ಬೆನ್ನು ಉಜ್ಜಲು ಕಳುಹಿಸುತ್ತಿದ್ದವರು, ನೀರು ತೋಡಲು ಹೇಳುತ್ತಿದ್ದವರು, ಮಂಚ ಸರಿಪಡಿಸಲು ಹೋದವರು, ಡ್ರಿಂಕ್ಸ್ ಹಾಕುತ್ತಿದ್ದವರ ಮೇಲೆ ಸಹ ದೌರ್ಜನ್ಯವಾಗಿದೆ. ಇದಕ್ಕೆ ಸಹಕಾರ ಕೊಟ್ಟವರ ವಿರುದ್ದವು ಪ್ರಕರಣ ದಾಖಲು ಮಾಡಲಾಗಿದೆ ಸ್ವಾಮೀಜಿಯವರಿಗೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಅತ್ಯಂತ ಪ್ರಭಾವಿಗಳಾಗಿದ್ದಾರೆ. ಮಕ್ಕಳು ಅಷ್ಟು ದೂರದಿಂದ ಇಲ್ಲಿಗೆ ಬಂದಿರೋದೆ‌ ನ್ಯಾಯ ಸಿಗುತ್ತೆ ಎಂಬ ಭರವಸೆಯಿಂದೆ. ಹಾಗಾಗಿ‌ ಮಕ್ಕಳಿಗೆ ನ್ಯಾಯ ಸಿಗಬೇಕಾದರೆ ನ್ಯಾಯಾಂಗ ತನಿಖೆಯೇ ಆಗಬೇಕು"
ಎಂದು ಮೈಸೂರಿನಲ್ಲಿ ಒಡನಾಡಿ ಸಂಸ್ಥೆ ಮುಖ್ಯಸ್ಥ ಪರಶು ಹೇಳಿದ್ದಾರೆ.

POSCO case file Against Muruga Mutt Swamiji: Mysuru Odanadi organization reaction

ಮುರುಘಾ ಶ್ರೀಗಳು ಮಕ್ಕಳ ಮೇಲೆ ಬಕಾಸುರನಂತೆ ಎರಗಿದ್ದಾರೆ:
"ಮಕ್ಕಳು ಯಾರನ್ನು ಅಪ್ಪಾ, ಅಣ್ಣಾ, ದೇವರು ಎಂದು ಪೂಜಿಸುತ್ತಿದ್ದರೋ ಅವರೇ ಮಕ್ಕಳ ಮೇಲೆ ಎರಗಿದರೇ ಮಕ್ಕಳು ಏನು ಮಾಡುತ್ತಾರೆ. ಯಾರನ್ನು ನಂಬುತ್ತಾರೆ. ಮುರುಘಾ ಮಠದ ಶರಣರು ಬಕಾಸುರರಂತೆ ವರ್ತಿಸಿದ್ದಾರೆ. ಬಕಾಸುರ ಸರದಿ ಪ್ರಕಾರ ಎಲ್ಲರನ್ನೂ ಭಕ್ಷಿಸುತ್ತಿದ್ದಂತೆ ಮಠದಲ್ಲಿ ಓದುತ್ತಿದ್ದ ಮಕ್ಕಳ ಮೇಲೆ ಸರದಿ ಪ್ರಕಾರ ದೌರ್ಜನ್ಯ ಎಸಗಿದ್ದಾರೆ. ಇದು ಇಬ್ಬರು ಮಕ್ಕಳಿಗೆ ಅಗಿರುವ ತೊಂದರೆಯಲ್ಲ. ಮಠದಲ್ಲಿ ಓದುತ್ತಿರುವ ಬಹುತೇಕ ಹೆಣ್ಣು‌ ಮಕ್ಕಳಿಗೆ ಸ್ಚಾಮೀಜಿ ಹೀಗೆ ಕಿರುಕುಳ ಕೊಡುತ್ತಾ ಬಂದಿದ್ದಾರೆ. ಇದು ನಿನ್ನೆಯಿಂದ ಆಗಿರುವ ಕಿರುಕುಳವಲ್ಲ. ಅನೇಕ ವರ್ಷಗಳಿಂದ ನಡೆಯುತ್ತಾ ಬಂದಿದೆ. ಆದರೆ ಮಕ್ಕಳು ಭಯದಿಂದ ಈ ವಿಚಾರವನ್ನು ಬಹಿರಂಗಗೊಳಿಸಿಲ್ಲ ಎಂಬುದು ನಮ್ಮ‌‌ ಗಮನಕ್ಕೆ ಬಂದಿದೆ. ನಾವು ಯಾವುದೇ ಒತ್ತಡ, ಬೆದರಿಕೆಗೆ ಬಗ್ಗುವುದಿಲ್ಲ. ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ಇಡೀ ಸಮಾಜದ ಕರ್ತವ್ಯ. ಇದಕ್ಕೆ ನಾವು ಬದ್ದರಾಗಿದ್ದೇವೆ" ಎಂದು ಒಡನಾಡಿ ಸಂಸ್ಥೆಯ ಮುಖ್ಯಸ್ಥ ಸ್ಟ್ಯಾನ್ಲಿ ಹೇಳಿಕೆ ನೀಡಿದ್ದಾರೆ.

English summary
A case under the POCSO Act has been registered against Shivamurthy Sharan of Chitradurga Muruga Matt for sexually harassing female students of the hostel. What did the children say to the head of the Odanadi organization that protected the children? What did the head of the Odanadi organization say about this. Here is the full report,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X