• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್ ನಡುವೆ ಮೈಸೂರಿನಲ್ಲಿ ರಾಜಕೀಯ ಚಟುವಟಿಕೆ ಆರಂಭ!

By C. Dinesh
|
Google Oneindia Kannada News

ಮೈಸೂರು, ಜೂನ್ 02; ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೊನಾ ಆತಂಕದ ಬೆನ್ನಲ್ಲೇ ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಗೆ ತೆರೆಮರೆಯ ಕಸರತ್ತು ಶುರುವಾಗಿದೆ. ಮೂರು ಪಕ್ಷಗಳಲ್ಲೂ ರಾಜಕೀಯ ಚಟುವಟಿಕೆ ಆರಂಭವಾಗಿದೆ.

ಕಳೆದ ಕೆಲವು ತಿಂಗಳ ಹಿಂದಷ್ಟೇ ಮೂರು ಪಕ್ಷಗಳ ಭಾರೀ ಪೈಪೋಟಿ ನಡುವೆ ನಡೆದಿದ್ದ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಮೈತ್ರಿಯೊಂದಿಗೆ ಜೆಡಿಎಸ್ ಪಾಲಿಕೆ ಸದಸ್ಯೆ ರುಕ್ಮಿಣಿ ಮಾದೇಗೌಡಗೆ ಮೇಯರ್ ಗದ್ದುಗೆ ಏರುವ ಅವಕಾಶ ಒಲಿದು ಬಂದಿತ್ತು.

ಮೈಸೂರು ಮೇಯರ್ ಚುನಾವಣೆ ದಿನಾಂಕ ಫಿಕ್ಸ್ಮೈಸೂರು ಮೇಯರ್ ಚುನಾವಣೆ ದಿನಾಂಕ ಫಿಕ್ಸ್

ರಾಜ್ಯಮಟ್ಟದಲ್ಲಿ ಗಮನ ಸೆಳೆದಿದ್ದ ಮೈಸೂರು ಮೇಯರ್ ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡಮಟ್ಟದ ಸಂಚಲನವನ ಸೃಷ್ಟಿಸಿತ್ತು. ಆದರೆ ನಂತರದಲ್ಲಿ ಎದುರಾದ ಕೊರೊನಾ ಸಂಕಷ್ಟದಿಂದಾಗಿ ಮೇಯರ್ ಚುನಾವಣೆ ಹಾಗೂ ನಂತರ ನಡೆದ ಎಲ್ಲಾ ಬೆಳವಣಿಗೆಗಳು ತಣ್ಣಗಾಗಿತ್ತು.

ಮೈಸೂರು ಮೇಯರ್ ಚುನಾವಣೆ: ದೋಸ್ತಿಗೆ 'ಕೈ' ನಾಯಕರ ಭಿನ್ನರಾಗ! ಮೈಸೂರು ಮೇಯರ್ ಚುನಾವಣೆ: ದೋಸ್ತಿಗೆ 'ಕೈ' ನಾಯಕರ ಭಿನ್ನರಾಗ!

ಮೇಯರ್ ಸದಸ್ಯತ್ವ ರದ್ದತಿಗೆ ಕಾರಣವೇನು?

ಮೇಯರ್ ಸದಸ್ಯತ್ವ ರದ್ದತಿಗೆ ಕಾರಣವೇನು?

ಮೈಸೂರು ಮಹಾನಗರ ಪಾಲಿಕೆ ಚುನಾವಣೆ ವೇಳೆ ಸೂಕ್ತ ಆದಾಯ ಪ್ರಮಾಣ ಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ 36ನೇ ವಾರ್ಡ್ ಸದಸ್ಯೆ ಹಾಗೂ ಹಾಲಿ ಮೇಯರ್ ರುಕ್ಮಿಣಿ ಮಾದೇಗೌಡ ಪಾಲಿಕೆ ಸದಸ್ಯತ್ವ ರದ್ದು ಮಾಡಿ ಹೈಕೋರ್ಟ್ ಆದೇಶಿಸಿತ್ತು. ಪಾಲಿಕೆ ಸದಸ್ಯತ್ವ ರದ್ದಾಗಿರುವ ಬೆನ್ನಲ್ಲೇ ಮೇಯರ್ ಸ್ಥಾನಕ್ಕೆ ಕಂಟಕ ಎದುರಾಗಿದೆ. ರುಕ್ಮಿಣಿ ಮಾದೇಗೌಡ ಸದಸ್ಯತ್ವ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದ ಪರಾಜಿತ ಅಭ್ಯರ್ಥಿ ರಜನಿ ಅಣ್ಣಯ್ಯಗೆ ಗೆಲುವು ಸಿಕ್ಕಿದೆ.

ಮೇಯರ್ ಸ್ಥಾನ ಖಾಲಿಯಾಗಿದೆ

ಮೇಯರ್ ಸ್ಥಾನ ಖಾಲಿಯಾಗಿದೆ

ಇದೀಗ ಮೈಸೂರು ಮಹಾನಗರ ಪಾಲಿಕೆ ಮೇಯರ್ ಆಗಿದ್ದ ರುಕ್ಮಿಣಿ ಮಾದೇಗೌಡ ಸದಸ್ಯತ್ವ ರದ್ದಾಗಿರುವ ಪರಿಣಾಮ ಮೇಯರ್ ಸ್ಥಾನ ಸಹ ಖಾಲಿಯಾಗಿದೆ. ಹೀಗಾಗಿ ಕೊರೊನಾ ನಡುವೆಯೇ ಮೈಸೂರಿನಲ್ಲಿ ಮೇಯರ್ ಚುನಾವಣೆಯ ಕಾವು ಶುರುವಾಗಿದ್ದು, ಕಳೆದ ಬಾರಿ ಅಧಿಕಾರ ಕಳೆದುಕೊಂಡಿದ್ದ ಬಿಜೆಪಿ ಜೊತೆಗೆ ದೋಸ್ತಿ ಮಾಡಿಕೊಂಡಿದ್ದ ಕಾಂಗ್ರೆಸ್-ಜೆಡಿಎಸ್‌ನಲ್ಲಿ ಮೇಯರ್ ಸ್ಥಾನದ ಆಕಾಂಕ್ಷಿಗಳಲ್ಲಿ ಗದ್ದುಗೆ ಏರುವ ಆಸೆ ಚಿಗುರಿದೆ.

ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ

ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ

ರುಕ್ಮಿಣಿ ಮಾದೇಗೌಡ ಸದಸ್ಯತ್ವ ರದ್ದಾದ ಬೆನ್ನಲ್ಲೇ ಮೂರು ಪಕ್ಷದಲ್ಲೂ ಮೇಯರ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಪ್ರಮುಖವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಲ್ಲಿ ಮೇಯರ್ ಸ್ಥಾನಕ್ಕೆ ಪೈಪೋಟಿ ಜೋರಾಗಿದ್ದು, ಕಳೆದ ಬಾರಿ ಮೇಯರ್ ಆಗುವ ಕನಸು ಕಂಡಿದ್ದ ಅಭ್ಯರ್ಥಿಗಳು ಇದೀಗ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆ ನಡೆಸಲು ಸಜ್ಜಾಗಿದ್ದಾರೆ.

ಜೂ.11ಕ್ಕೆ ಚುನಾವಣೆ ಫಿಕ್ಸ್

ಜೂ.11ಕ್ಕೆ ಚುನಾವಣೆ ಫಿಕ್ಸ್

ಮೇಯರ್ ಸದಸ್ಯತ್ವ ರದ್ದತಿಗೆ ಸಂಬಂಧಿಸಿದಂತೆ ಅಧಿಕೃತ ಆದೇಶ ಬಂದ ಹಿನ್ನೆಲೆಯಲ್ಲಿ ಬುಧವಾರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಹಾಗೂ ಪ್ರಾದೇಶಿಕ ಆಯುಕ್ತರೊಂದಿಗೆ ಸಭೆ ನಡೆಸಿದ್ದು, ಜೂ.11ಕ್ಕೆ ಮೇಯರ್ ಸ್ಥಾನದ ಚುನಾವಣೆಗೆ ದಿನಾಂಕ ಸಹ ನಿಗದಿಯಾಗಿದೆ. ಈ ಹಿಂದಿ ನಡೆದ ಮೇಯರ್ ಚುನಾವಣೆಯಲ್ಲಿ ಮೇಯರ್ ಸ್ಥಾನ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಉಪ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಹೀಗಾಗಿ ಜೂ.11ರಂದು ನಡೆಯುವ ಮೇಯರ್ ಚುನಾವಣೆಗೂ ಇದೇ ಮೀಸಲಾತಿ ಮುಂದುವರಿಯಲಿದೆ.

English summary
Political activity began in Mysuru after date announce to elect new mayor. Mayor election date announced after high court to disqualify mayor Rukmini Made Gowda as a member of the MCC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X