ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊಲೀಸ್ ಪೇದೆಗಳಿಗೆ ಮದುವೆ ಮಾಡಿಸಿದ ಮೈಸೂರಿನ ಒಡನಾಡಿ ಸಂಸ್ಥೆ

|
Google Oneindia Kannada News

ಮೈಸೂರು, ಫೆಬ್ರವರಿ 12: ಪ್ರೇಮಿಗಳ ದಿನಾಚರಣೆಗೆ ಎರಡು ದಿನ ಇರುವಾಗಲೇ ನಗರದ ಒಡನಾಡಿ ಸಂಸ್ಥೆಯು ಪ್ರೇಮಿಗಳ ವಿವಾಹಕ್ಕೆ ವೇದಿಕೆ ಕಲ್ಪಿಸಿದೆ. ಹೌದು, ಬೇರೆ ಬೇರೆ ಜಾತಿಗೆ ಸೇರಿದ ಇಬ್ಬರು ಪೊಲೀಸ್ ಕಾನ್‌ಸ್ಟೇಬಲ್ ಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ತಿ.ನರಸೀಪುರ ಸಿದ್ದರಾಮಯ್ಯನ ಹುಂಡಿ ಗ್ರಾಮದ ಎಂ.ಸಿದ್ಧರಾಜು ಹಾಗೂ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ತಾತನಹಳ್ಳಿಯ ಟಿ.ಜಿ.ಶ್ವೇತರಾಣಿ ಬೆಂಗಳೂರಿನ ವಿವೇಕಾನಂದನಗರ ಠಾಣೆಯಲ್ಲಿ ಕಾನ್‌ಸ್ಟೇಬಲ್ ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವೈರಲ್ ಆಯ್ತು ಹಿಂದೂ ಯುವತಿ‌, ಮುಸ್ಲಿಂ ಯುವಕನ ಪ್ರೇಮ ವಿವಾಹದ ಲಗ್ನ ಪತ್ರಿಕೆ ವೈರಲ್ ಆಯ್ತು ಹಿಂದೂ ಯುವತಿ‌, ಮುಸ್ಲಿಂ ಯುವಕನ ಪ್ರೇಮ ವಿವಾಹದ ಲಗ್ನ ಪತ್ರಿಕೆ

ಮೂರು ವರ್ಷಗಳ ಹಿಂದೆ ಇವರಿಬ್ಬರ ಮಧ್ಯೆ ಪ್ರೀತಿ ಚಿಗುರೊಡೆದಿತ್ತು. ಆದರೆ, ಶ್ವೇತರಾಣಿ ಪೋಷಕರು ವಿವಾಹಕ್ಕೆ ಒಪ್ಪದೆ, ಇದೇ ತಿಂಗಳು ಬೇರೊಬ್ಬ ಯುವಕನ ಜತೆ ಮದುವೆಗೆ ನಿಶ್ಚಯಿಸಿದ್ದರು.

Police constable simple marriage in Mysuru odanadi committee

ಆದರೆ ಈಗ ಇವರಿಬ್ಬರೂ ನಾಡಿ ಸಂಸ್ಥೆಯಲ್ಲಿ ಕೊಳ್ಳೇಗಾಲದ ಬೌದ್ಧಿಪೀಠದ ಬಂತೇಜಿ ರತ್ನ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗಿದ್ದಾರೆ. ನಾವಿಬ್ಬರೂ ಸರಳವಾಗಿ ಇದ್ದೆವು. ಹೀಗಾಗಿ ಇಬ್ಬರು ಪರಸ್ಪರ ಇಷ್ಟಪಟ್ಟಿದ್ದು, ಸರಳವಾಗಿ ಮದುವೆಯಾಗಿದ್ದೇವೆ ಎಂದು ವರ ಸಿದ್ದರಾಜು ಸಂತಸದಿಂದ ಹೇಳಿದರು.

Police constable simple marriage in Mysuru odanadi committee

 ಮೈಸೂರಿನಲ್ಲಿ ಹಿಂದೂ ಪದ್ಧತಿಯಲ್ಲಿ ಮದುವೆಯಾದ ಬ್ರಿಟನ್ ವಧು-ವರ ಮೈಸೂರಿನಲ್ಲಿ ಹಿಂದೂ ಪದ್ಧತಿಯಲ್ಲಿ ಮದುವೆಯಾದ ಬ್ರಿಟನ್ ವಧು-ವರ

ಇದೊಂದು ಮಾನವೀಯ ಮದುವೆಯಾಗಿದೆ. ಮದುವೆಗೆ ಯಾವುದೇ ಜಾತಿ ಮುಖ್ಯವಲ್ಲ, ಬದಲಿಗೆ ಪ್ರೀತಿ ಮುಖ್ಯ. ಆದರೆ ಇನ್ನೂ ಈ ಸಮಾಜದಲ್ಲಿ ಜಾತಿ ವಿಚಾರ ಇರುವುದನ್ನು ಕಂಡು ಬೇಸರವಾಗುತ್ತದೆ. ನಾವು ನೂರಾರು ಜೋಡಿಯ ಮದುವೆಯನ್ನು ಮಾಡಿಸಿದ್ದೇವೆ ಎಂದು ಒಡನಾಡಿ ಸಂಸ್ಥೆ ಸಂಚಾಲಕ ಸ್ಟ್ಯಾನ್ಲಿ ನವ ವಧು ವರರಿಗೆ ಶುಭ ಕಾಮನೆ ತಿಳಿಸಿದ್ದಾರೆ.

English summary
Police constables are loved each other and married as simple type at Mysuru Odanadi Committee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X