• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಮೋದಿ

By Manjunatha
|

ಮೈಸೂರು, ಫೆಬ್ರವರಿ 19: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೈಸೂರಿನ ಮಹಾರಾಜ ಮಹಾರಾಜ ಕಾಲೇಜಿನಲ್ಲಿ ಬಿಜೆಪಿಯ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ.

ಎರಡು ದಿನಗಳ ರಾಜ್ಯ ಪ್ರವಾಸಕ್ಕೆ ಆಗಮಿಸಿರುವ ಪ್ರಧಾನಿ ಅವರು ಇಂದು ಶ್ರವಣಬೆಳಗೊಳದ ಮಹಾಮಸ್ತಾಭಿಷೇಕ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದಾರೆ. ಆ ನಂತರ ಮೈಸೂರಿನಲ್ಲಿ 'ಹಮ್ ಸಫರ್' ರೈಲಿಗೆ ಚಾಲನೆ ನೀಡಿದ್ದಾರೆ.

ಇದೀಗ ಮಹಾರಾಜ ಕಾಲೇಜಿನಲ್ಲಿ ಆಯೋಜಿಸಿರುವ ಬೃಹತ್ ಸಮಾವೇಶದಲ್ಲಿ ಹಲವು ರಾಜ್ಯ ಬಿಜೆಪಿ ಮುಖಂಡರೊಂದಿಗೆ ಮೋದಿ ಅವರು ಪಾಲ್ಗೊಂಡಿದ್ದಾರೆ.

PM Narendra Modi participated in BJP Rally in Mysuru

Newest First Oldest First
5:09 PM, 19 Feb
'ಭಾರತ ಮಾತಾ ಕೀ ಜೈ' ಎಂದು ಘೋಷಣೆ ಮೂಲಕ ಭಾಷಣ ಅಂತ್ಯ ಮಾಡಿದ ಮೋದಿ, ಜನರಿಂದ 'ಮೋದಿ, ಮೋದಿ' ಘೋಷಣೆ
5:08 PM, 19 Feb
'ನವಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನೆ ಮಾಡಿರಿ, ಈ ಬಾರಿ ಬಿಜೆಪಿ ಗೆಲ್ಲಿಸಿರಿ' ಎಂದು ಕನ್ನಡದಲ್ಲಿ ಹೇಳಿದ ಮೋದಿ
5:07 PM, 19 Feb
ಕರ್ನಾಟಕಕ್ಕೆ ಕಮಿಷನ್ ಸರ್ಕಾರ ಬೇಕಿಲ್ಲ, ಮಿಷನ್ (ಗುರಿ) ಸರ್ಕಾರ ಬೇಕಿದೆ: ಮೋದಿ
5:07 PM, 19 Feb
ಬಿಜೆಪಿಗೆ ದೇಶವನ್ನು ಹೊರತುಪಡಿಸಿ ಇನ್ನಾವುದರ ಮೇಲೂ ವ್ಯಾಮೋಹ ಇಲ್ಲ, ಹಾಗಾಗಿ ದೇಶದ ಅಭಿವೃದ್ಧಿಗೆ ಬಿಜೆಪಿಯನ್ನು ಬೆಂಬಲಿಸಿ: ಮೋದಿ
5:06 PM, 19 Feb
ಮುಂಚೆ ಸರ್ಕಾರದ 3 ಮತ್ತು 4 ನೇ ದರ್ಜೆಯ ಉದ್ಯೋಗಗಳು ಶಿಫಾರಸ್ಸು, ಲಂಚ ಇಲ್ಲದೆ ಆಗುತ್ತಿರಲಿಲ್ಲ. ಆದರೆ ನಾವು ಈ ವರ್ಗದ ಉದ್ಯೋಗಗಳಿಗೆ ಸಂದರ್ಶನವನ್ನೇ ತೆಗೆದು ಹಾಕಿಬಿಟ್ಟೆವು:ಮೋದಿ
5:01 PM, 19 Feb
'ಪ್ರತಿ ಬಾರಿ ಸುಳ್ಳು ಹೇಳೋಣ, ಪ್ರತಿ ಬಾರಿ ಸುಳ್ಳು ಹೇಳೋಣ ಎಂದು ಕೆಲವರು ಅಂದುಕೊಂಡಿದ್ದಾರೆ' ಆದರೆ ಅವರನ್ನು ದೇಶ ನಂಬುವುದಿಲ್ಲ ಎಂದು ಕಾಂಗ್ರೆಸ್ ಅವರ ಮೇಲೆ ವಾಗ್ದಾಳಿ ನಡೆಸಿದ ಮೋದಿ
4:59 PM, 19 Feb
ಪರಿಣಾಮಕಾರಿಯಾದ ಅಭಿವೃದ್ಧಿಗೆ ಈ ಬಾರಿ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ: ಮೋದಿ
4:58 PM, 19 Feb
ಕೇಂದ್ರ ಮಾಡುವ ಅಭಿವೃದ್ಧಿಗೆ ರಾಜ್ಯ ಸರ್ಕಾರ ಅಡ್ಡಗಾಲು ಹಾಕುತ್ತಿದೆ, ಮುಂದಿನ ಬಾರಿ ಇದೇ ಸರ್ಕಾರ ಇದ್ದರೆ ನಮ್ಮ ಯೋಜನೆಗಳು ನಿಮ್ಮನ್ನು ತಲುಪುತ್ತವೆಯಾ?: ಮೋದಿ
4:58 PM, 19 Feb
2025 ಸ್ವಾತಂತ್ರದ 75 ನೇ ವರ್ಷಾಚರಣೆ ಅಷ್ಟೊತ್ತಿಗೆ ದೇಶದ ಎಲ್ಲಾ ಕುಟುಂಬಗಳಿಗೂ ಮನೆ ಇರಲೇಬೇಕು ಎಂಬ ಕನಸನ್ನು ನಾವು ಕಂಡಿದ್ದೇವೆ: ಮೋದಿ
4:54 PM, 19 Feb
3 ಕೋಟಿಗೂ ಹೆಚ್ಚು ನವೋದ್ಯಮಿಗಳು ದೇಶದಲ್ಲಿ ಇದ್ದಾರೆ, ಎಲ್ಲರೂ ಹಲವರಿಗೆ ಉದ್ಯೋಗ ನೀಡಿದ್ದಾರೆ: ಮೋದಿ
4:53 PM, 19 Feb
ಪ್ರಧಾನ ಮಂತ್ರಿ ಮುದ್ರಾ ಯೋಜನೆ ಮೂಲಕ ಯುವಕರಿಗೆ ಸಹಾಯ ಮಾಡಿದ್ದೇವೆ, 10 ಕೋಟಿ ಯುವಜನ ಈ ಯೋಜನೆಯ ಲಾಭ ಪಡೆದಿದ್ದಾರೆ: ಮೋದಿ
4:52 PM, 19 Feb
ರಾಜ್ಯ ಸರ್ಕಾರಕ್ಕೆ ಇಲ್ಲಿನ ಜನರ ಭಾವನೆ, ಜೀವನಗಳ ಮೇಲೆ ಗೌರವೇ ಇಲ್ಲ, ಒಂದು ರಾಜ್ಯ ಹೀಗೆ ನಡೆಯಲು ಸಾಧ್ಯವಿಲ್ಲ: ಮೋದಿ
4:51 PM, 19 Feb
ಕೇಂದ್ರ ಸರ್ಕಾರ ಬಡವರ ಉದ್ಧಾರಕ್ಕಾಗಿ ಕೊಡುತ್ತಿರುವ ಅನುದಾನವನ್ನು ಕರ್ನಾಟಕ ಸರ್ಕಾರ ಬಳಸುತ್ತಲೇ ಇಲ್ಲ, ಅವರು ತಮ್ಮ ಹೈಕಮಾಂಡ್‌ ಅನ್ನು ಕ್ಷೇಮವಾಗಿ ಇಡಲು ಅದನ್ನು ಬಳಸುತ್ತಿದ್ದಾರೆ: ಮೋದಿ
4:50 PM, 19 Feb
ಇಲ್ಲಿಂದ ಆರಿಸಿ (ಸಿದ್ದರಾಮಯ್ಯ) ಹೋಗಿರುವವರು ನಿಮ್ಮ ಮಾನ ತೆಗೆಯುವ ಕಾರ್ಯ ಮಾಡುತ್ತಿದ್ದಾರೆ: ಮೋದಿ
4:48 PM, 19 Feb
ಡೈರಿ ವಿಷಯ ಪ್ರಸ್ತಾಪ ಮಾಡಿದ ಮೋದಿ, ವ್ಯಂಗ್ಯವಾಗಿ ಅಭಿನಯ ಸಹ ಮಾಡಿ ತೋರಿಸಿದರು
4:47 PM, 19 Feb
ಕರ್ನಾಟಕದಲ್ಲಿ ಕಮಿಷನ್ ಸರ್ಕಾರ ಬೇಕೆ ಅಥವಾ ಮಿಷನ್ (ಯೋಜನೆ) ಇರುವ ಸರ್ಕಾರ ಬೇಕಾ ಎಂದು ಮೋದಿ ಪ್ರಶ್ನೆ
4:46 PM, 19 Feb
ಕರ್ನಾಟದಲ್ಲಿರುವುದು 10 ಪರ್ಸೆಂಟ್ ಕಮಿಷನ್ ಸರ್ಕಾರ ಅಲ್ಲ, ಇದು ಇನ್ನೂ ಹೆಚ್ಚು ಕಮಿಷನ್ ಪಡೆಯುವ ಸರ್ಕಾರ: ಮೋದಿ
4:46 PM, 19 Feb
10 ಪರ್ಸೆಂಟ್ ಕಮಿಷನ್ ಸರ್ಕಾರ ಎಂದಾಗ ಕೆಲವರು ಬೇಸರ ಮಾಡಿಕೊಂಡರು, ನನ್ನ ಬಗ್ಗೆ ಕೋಪಗೊಂಡರು: ಮೋದಿ
4:45 PM, 19 Feb
ಸಿದ್ದರಾಮಯ್ಯಗೆ ತಮ್ಮ ಕುರ್ಚಿಯ ಮೇಲೆ ವ್ಯಾಮೋಹ ಇದೆಯೆ ಹೊರತು, ಕರ್ನಾಟಕದ ಮೇಲೆ ಪ್ರೀತಿ ಅಥವಾ ಗೌರವ ಇಲ್ಲ: ಮೋದಿ
4:44 PM, 19 Feb
ಕಾಂಗ್ರೆಸ್ ಪಕ್ಷವು ಅಭಿವೃದ್ಧಿ ಮರೆತು ಜನರನ್ನು ಒಡೆದು ಆಳುವ ನೀತಿಗೆ ಮೊರೆ ಹೋಯಿತು, ತನ್ನ ಲಾಭಕ್ಕಾಗಿ ಜನರ ನಡುವೆ ಕಂದಕಗಳನ್ನು ಸೃಷ್ಠಿಸಿತು: ಮೋದಿ
4:44 PM, 19 Feb
50 ವರ್ಷಕ್ಕಿಂತಲೂ ಹೆಚ್ಚು ಕಾಲ ಅಧಿಕಾರದಲ್ಲಿದ್ದು ಅಭಿವೃದ್ಧಿ ಮಾಡದೇ, ಈಗ ನಮ್ಮನ್ನು ಟೀಕೆ ಮಾಡುತ್ತಿರುವುದು ರಾಜಕೀಯವಷ್ಟೆ: ಮೋದಿ
4:40 PM, 19 Feb
ನಿನ್ನೆ ವಿಧಿವಶರಾದ ಕೆಎಸ್ ಪುಟ್ಟಣ್ಣಯ್ಯ ಅವರನ್ನು ನೆನೆಸಿಕೊಂಡ ಮೋದಿ, ಅವರಿಗೆ ಆತ್ಮಕ್ಕೆ ಶಾಂತಿ ಸಿಗಲೆಂದು ಕೋರಿದರು
4:38 PM, 19 Feb
ಮೈಸೂರಿಗಾಗಿ ನಾಗೇನಹಳ್ಳಿಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಸ್ಯಾಟೆಲೈಟ್ ರೈಲ್ವೆ ನಿಲ್ದಾಣ. 1000 ಕೋಟಿ ವೆಚ್ಚದಲ್ಲಿ ಕಾಮಗಾರಿ: ಮೋದಿ
4:37 PM, 19 Feb
ಬೆಂಗಳೂರು-ಮೈಸೂರು ನಡುವೆ 6400 ಕೋಟಿ ವೆಚ್ಚದಲ್ಲಿ 6 ಪಥದ ರಸ್ತೆ ಮಾಡುವುದಾಗಿ ಘೋಷಿಸಿದ ಮೋದಿ
4:36 PM, 19 Feb
ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರನ್ನು ಹೊಗಳಿದ ಮೋದಿ, ಸದಾ ಚಟುವಟಿಕೆಯಿಂದ ಕೆಲಸ ಮಾಡುವ ಸಂಸದರನ್ನು ನೀವು ಆರಿಸಿ ಕಳಿಸಿದ್ದೀರಿ: ಮೋದಿ
4:35 PM, 19 Feb
ಪ್ರವಾಸೋದ್ಯಮ ಅತಿ ಹೆಚ್ಚು ಜನರಿಗೆ ಉದ್ಯೋಗ ಕೊಡಿಸುತ್ತದೆ. ಟ್ಯಾಕ್ಸಿ, ಗೆಸ್ಟ್‌ಹೌಸ್, ದೇವಸ್ಥಾನದ ಬಳಿ ಹೂವು ಮಾರುವವನು, ಗೈಡ್‌, ಹೋಟೆಲ್‌ನವನು ಹೀಗೆ ಸಾಕಷ್ಟು ಉದ್ಯೋಗ ಒದಗಿಸುತ್ತದೆ: ಮೋದಿ
4:33 PM, 19 Feb
ಮೈಸೂರು-ಉದಯಪುರ ರೈಲ್ವೆ ಹಮ್‌ ಸಫರ್‌ ಮೂಲಕ, ಕರ್ನಾಟಕ ಮತ್ತು ರಾಜಸ್ಥಾನವನ್ನು ಪ್ರವಾಸೋದ್ಯಮವನ್ನು ಮೂಲಕ ಒಂದು ಮಾಡುವ ಐತಿಹಾಸಿಕ ಕಾರ್ಯ ಇಂದಾಗಿದೆ: ಮೋದಿ
4:32 PM, 19 Feb
ಕಾದದ ಮೇಲೆ ಉಳಿದಿದ್ದ ಹಳೆಯ ಘೋಷಣೆಗಳನ್ನು ನಾವು ಕಾರ್ಯರೂಪಕ್ಕೆ ತರುತ್ತಿದ್ದೇವೆ, ಕೋಟ್ಯಾಂತರ ಹಣ ನಾವು ರೈಲ್ವೆ ಮೇಲೆ ವಿನಿಯೋಗಿಸಿದ್ದೇವೆ: ಮೋದಿ
4:31 PM, 19 Feb
ರೈಲ್ವೆ ಕುರಿತು 1500 ಕ್ಕೂ ಹೆಚ್ಚು ಘೋಷಣೆಗಳು ಕೇವಲ ಸಂಸತ್‌ನಲ್ಲಿ ಹೇಳಲಾಗುತ್ತಿತ್ತು, ಆದರೆ ಅನುಷ್ಠಾನಕ್ಕೆ ಬರಲೇ ಇಲ್ಲ, ಇದು ಈ ಹಿಂದಿನ ಸರ್ಕಾರಗಳ ಕಾರ್ಯ ಪದ್ಧತಿ: ಮೋದಿ
4:29 PM, 19 Feb
ಕರ್ನಾಟಕದಲ್ಲಿ ಮೊದಲಿಗಿಂತಲೂ ರೈಲ್ವೆ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ ಆಗಿದೆ, ವಿದ್ಯುತ್ ರೈಲು, ಹಳಿ ಹೆಚ್ಚಳ, ಹಳಿ ಆಧುನಿಕರಣ ಕಾರ್ಯಗಳು ಆಗಿವೆ: ಮೋದಿ
READ MORE

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
PM Narendra Modi addressing BJP rallu in Mysuru's Maharaja college ground.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more