ಅರಣ್ಯದಲ್ಲಿ ಫೋಟೋಶೂಟ್ ಮಾಡಿದ್ರೆ ಬೀಳುತ್ತೆ ಭಾರೀ ದಂಡ!
ಮೈಸೂರು, ಜೂನ್ 28: ಅರಣ್ಯ ಪ್ರದೇಶದಲ್ಲಿ ವಾಹನಗಳಲ್ಲಿ ಸಂಚರಿಸುವ ಪ್ರವಾಸಿಗರು ಮಾರ್ಗ ಮಧ್ಯೆ ವಾಹನಗಳನ್ನು ನಿಲ್ಲಿಸಿ ಪ್ರಾಣಿಗಳಿಗೆ ತಿಂಡಿ ತಿನಿಸು ಹಾಕುವುದಾಗಲೀ, ಹಣ್ಣುಗಳನ್ನು ನೀಡುವುದಾಗಲೀ, ಫೋಟೋಶೂಟ್‌ಗಳನ್ನಾಗಲೀ ಮಾಡುವಂತಿಲ್ಲ. ಇದೆಲ್ಲವನ್ನು ಅರಣ್ಯ ಕಾಯ್ದೆಯಡಿ ನಿರ್ಬಂಧಿಸಲಾಗಿದೆ. ಆದರೆ ಇದರ ಬಗ್ಗೆ ಅರಿವಿದ್ದರೂ ಕೆಲವು ಪ್ರವಾಸಿಗರು ಅರಣ್ಯ ಕಾಯ್ದೆಯನ್ನು ಉಲ್ಲಂಘನೆ ಮಾಡುತ್ತಿರುವುದು ಎದ್ದು ಕಾಣಿಸುತ್ತಿದೆ. ಅದರಂತೆ ಉಲ್ಲಂಘನೆ ಮಾಡಿದ ಯುವಕರಿಗೆ ಅರಣ್ಯ ಇಲಾಖೆ ದಂಡದ ಬಿಸಿ ಮುಟ್ಟಿಸಿದೆ.
ಸದ್ಯ ಅರಣ್ಯ ಇಲಾಖೆ ದಂಡ ವಿಧಿಸಿರುವುದು ಇತರೆ ಪ್ರವಾಸಿಗರಿಗೆ ಪಾಠವಾಗ ಬೇಕಾಗಿದ್ದು, ಆ ಮೂಲಕ ಇನ್ನು ಮುಂದೆಯಾದರೂ ವಾಹನದಲ್ಲಿ ಅರಣ್ಯದ ನಡುವೆ ತೆರಳುವಾಗ ತಮ್ಮ ಪಾಡಿಗೆ ತಾವು ಸಾಗಬೇಕು ಎನ್ನುವುದಕ್ಕೆ ಇದು ಎಚ್ಚರಿಕೆಯ ಗಂಟೆಯಾಗ ಬೇಕಿದೆ. ಈಗ ಮುಂಗಾರು ಮಳೆ ಸುರಿಯುತ್ತಿರುವುದರಿಂದ ಇಡೀ ಅರಣ್ಯ ಹಸಿರಿನಿಂದ ಕಂಗೊಳಿಸುತ್ತಿದೆ. ಇಂತಹ ಅರಣ್ಯದ ನಡುವೆ ಹೋಗುವಾಗ ಮೈಪುಳಕಗೊಳ್ಳುವುದು ಸಾಮಾನ್ಯ. ಆದರೆ ಹುಚ್ಚೆದ್ದು ವಾಹನಗಳಿಂದ ಕೆಳಗಿಳಿದರೆ ಅಂಥವರಿಗೆ ಬೀಳಲಿದೆ ದಂಡ ಎನ್ನುವುದನ್ನು ನೆನಪಿನಲ್ಲಿಟ್ಟು ಕೊಳ್ಳಬೇಕಾಗಿದೆ.

ಮೈಸೂರಿನಿಂದ ಕೊಡಗಿನ ಕಡೆಗೆ ಹುಣಸೂರು ಮಾರ್ಗವಾಗಿ ನಾಗರಹೊಳೆ ಹಾಗೂ ಪಂಚವಳ್ಳಿ ಮೂಲಕ ತೆರಳುವಾಗ ನಾಗರಹೊಳೆ ಅಭಯಾರಣ್ಯದ ಮೂಲಕ ಹಾದು ಹೋಗಬೇಕಾಗುತ್ತದೆ. ಹೀಗೆ ಹಾದುಹೋಗುವಾಗ ನಾಗರಹೊಳೆ ಅರಣ್ಯದ ಸೊಬಗು ಕಣ್ಮುಂದೆ ಬರುತ್ತದೆ. ಅರಣ್ಯದ ನಡುವೆ ಖುಷಿ ಖುಷಿಯಾಗಿ ಓಡಾಡುವ ಜಿಂಕೆಗಳು ಸೇರಿದಂತೆ ಹಲವು ಪ್ರಾಣಿಗಳು ಕಣ್ಮನ ಸೆಳೆಯುತ್ತದೆ. ಇನ್ನು ಅರಣ್ಯದ ಹಾದಿಯಲ್ಲಿ ವಾಹನಗಳು ಹೇಗೆ ಸಾಗಬೇಕು ಎಂಬುದರ ಮಾಹಿತಿ ಅಲ್ಲಲ್ಲಿದೆ. ಆದರೂ ಕೆಲವರು ಅದನ್ನು ಲೆಕ್ಕಿಸದ ಹುಚ್ಚಾಟವಾಡುವುದು ನಡೆಯುತ್ತಲೇ ಇರುತ್ತದೆ.
ಅರಣ್ಯದಲ್ಲಿ ಫೋಟೋ ಶೂಟ್‌ಗೆ ದಂಡ
ಈ ನಡುವೆ ವಿರಾಜಪೇಟೆ ಸಿದ್ದಾಪುರ ವಲಯದ ಹಳೆ ಸಿದ್ದಾಪುರ, ಇಂಜಿಲಗೆರೆ ನಿವಾಸಿಗಳಾದ ಸುರೇಶ್ ಎಸ್, ತಮ್ಮು ಅಲಿಯಾಸ್ ಗಣೇಶ್, ಸಜೀ, ರಾಜೇಶ್ ಸಿದ್ದಾಪುರ ಮಾರುಕಟ್ಟೆ ನಿವಾಸಿ ಮಹೇಶ್ ಎಸ್. ಮೊದಲಾದವರು ಅರಣ್ಯದಲ್ಲಿ ಫೋಟೋ ಶೂಟ್ ಮಾಡಲು ಹೋಗಿ ದಂಡ ಹಾಕಿಸಿಕೊಂಡಿದ್ದಾರೆ. ಈ ಯುವಕರ ತಂಡ ಕುಟ್ಟದಲ್ಲಿರುವ ಸ್ನೇಹಿತರ ಮನೆಗೆ ಸಿದ್ದಾಪುರದಿಂದ ಮೂರು ವಾಹನಗಳಲ್ಲಿ ತೆರಳಿದ್ದಾರೆ.
ವಾಹನದಲ್ಲಿ ತೆರಳಿದ್ದ ಈ ಯುವಕರು ಕಾಫಿ ತೋಟಗಳಲ್ಲಿ ಸಾಂದರ್ಭಿಕ ಕೂಲಿ ಕಾರ್ಮಿಕರಾಗಿ ದುಡಿಯುತಿದ್ದಾರೆ. ತಮ್ಮ ಸ್ನೇಹಿತನ ಮನೆಗೆ ಒಟ್ಟಿಗೆ ಹೋಗುವ ಕಾರ್ಯಕ್ರಮ ರೂಪಿಸಿ ಮಾರ್ಗದ ಮಧ್ಯೆ ತಿತಿಮತಿಯ ರಕ್ಷಿತ ಅರಣ್ಯ ಪ್ರದೇಶದ ವ್ಯಾಪ್ತಿಗೆ ಬರುವ ಆನೆಚೌಕೂರ್ ಹಾಗೂ ಮಜ್ಜಿಗೆಹಳ್ಳ ಎಂಬಲ್ಲಿ ಫೋಟೋ ಶೂಟ್ ಮಾಡುವ ಮನಸ್ಸಾಗಿ ರಾಜ್ಯ ಹೆದ್ದಾರಿಯಲ್ಲಿ ಪರಿಸರದ ಮಧ್ಯೆ ಮೊಬೈಲ್ ಚಿತ್ರಣ ಮಾಡುತ್ತಾ ಇದು ಅರಣ್ಯ ಎಂಬುದನ್ನೇ ಮರೆತಿದ್ದಾರೆ. ಹೀಗೆ ಫೋಟೋ ಶೂಟ್ ಮಾಡುತ್ತಿದ್ದ ವೇಳೆ ಅಲ್ಲಿಗೆ ಅರಣ್ಯ ಇಲಾಖೆಯ ಗಸ್ತು ವಾಹನ ಬಂದಿದೆ.

ಇನ್ನಾದರೂ ಎಚ್ಚರಿಕೆಯಿಂದ ಸಂಚಾರ ಮಾಡಿ
ಯುವಕರ ಚಲನವಲನಗಳನ್ನು ಗಮನಿಸಿದ ಅರಣ್ಯ ಇಲಾಖಾ ಸಿಬ್ಬಂದಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ, ಮತ್ತು ಹುಲಿ ಸಂರಕ್ಷಣಾ ವಲಯದ ಕಾಯ್ದೆ ಕಾನೂನುಗಳನ್ನು ಉಲ್ಲಂಘನೆ ಮಾಡಿದ್ದಲ್ಲದೆ, ನಿಯಮವನ್ನು ಮೀರಿ ಅರಣ್ಯದಲ್ಲಿ ಚಿತ್ರೀಕರಣ ಮಾಡಿರುವ ಹಿನ್ನೆಲೆಯಲ್ಲಿ ಯುವಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಕಾನೂನು ಉಲ್ಲಂಘನೆ ಮಾಡಿದ್ದರಿಂದ ಮೂರು ವಾಹನಗಳ ಮೇಲೆ ತಲಾ 1185 ರೂ.ಗಳಂತೆ ದಂಡ ವಿಧಿಸಿ ಎಚ್ಚರಿಕೆ ನೀಡಿ ಕಳಿಸಿದ್ದಾರೆ.
ರಕ್ಷಿತಾ ಅರಣ್ಯದ ವ್ಯಾಪ್ತಿಯಲ್ಲಿ ಫೋಟೋ ತೆಗೆಯುವ ಸಾಹಸಕ್ಕೆ ಕೈ ಹಾಕಿದರೆ ಅರಣ್ಯ ಇಲಾಖೆ ದಂಡ ವಿಧಿಸುವುದು ಗ್ಯಾರಂಟಿ. ಇದುವರೆಗೆ ನಿಯಮವಿದ್ದರೂ ಕೂಡ ಅನುಷ್ಠಾನಕ್ಕೆ ತಂದಿಲ್ಲ ಆದರೆ ಇದೀಗ ವನ್ಯಜೀವಿಗಳ ಹಾಗೂ ಪರಿಸರ ರಕ್ಷಣೆಗಾಗಿ ಅರಣ್ಯ ಇಲಾಖೆ ಕಾನೂನು ಕ್ರಮಕ್ಕೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಅಲ್ಲದೇ ಈ ಬಗ್ಗೆ ಪ್ರವಾಸಿಗರಿಗೆ ಅರಿವು ಮೂಡಿಸಿ ಎಚ್ಚರಿಕೆಯನ್ನು ನೀಡುವುದು ಅಗತ್ಯವಾಗಿದೆ. ಅರಣ್ಯದ ನಡುವೆ ವಾಹನಗಳನ್ನು ನಿಲ್ಲಿಸಿ ಫೋಟೋ ಶೂಟ್ ಮಾಡುವುದು ಅಪಾಯಕಾರಿಯಾಗಿದೆ. ಯಾವಾಗ ಯಾವ ಪ್ರಾಣಿ ದಾಳಿ ಮಾಡುತ್ತೋ ಎಂಬುದನ್ನು ಹೇಳಲಾಗದು. ಇನ್ನಾದರೂ ಅರಣ್ಯದ ನಡುವೆ ಸಾಗುವವರು ಈ ಬಗ್ಗೆ ಗಮನಹರಿಸಿದರೆ ಒಳ್ಳೆಯದು.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications