Get Updates
Get notified of breaking news, exclusive insights, and must-see stories!

ಪೇಜಾವರ ಶ್ರೀಗಳಿಂದ ಪ್ರೊ.ಎಸ್‌.ಎಲ್ ಭೈರಪ್ಪ ಮೆಚ್ಚುಗೆ

ಮೈಸೂರು, ಜೂನ್ 1: ನನ್ನನ್ನು ಗೊಡ್ಡು ಭಾರತೀಯನೆಂದು ಕರೆದಿದ್ದನ್ನು ನಾನೆಂದಿಗೂ ಮರೆಯಲಾರೆ. ಎಡಪಂಥೀಯರು ಹಾಗೂ ನವ್ಯರು ನನ್ನ ಸಾಹಿತ್ಯದ ಮೇಲೆ ಗೊಡ್ಡು ಭಾರತೀಯ ಲೇಖಕನೆಂದು ದಾಳಿ ಮಾಡಿದರು ಎಂದರು ಸಾಹಿತಿ ಎಸ್.ಎಲ್. ಭೈರಪ್ಪ.

ಮೈಸೂರಿನಲ್ಲಿ ಕೃಷ್ಣಾನುಗ್ರಹ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಅಂದಿನ ಪತ್ರಿಕೆಗಳು ಕೂಡ ಎಡಪಂಥೀಯರು ಹಾಗೂ ನವ್ಯರ ಪರವಾಗಿಯೇ ಇದ್ದವು. ಆದರೆ ನಾನು ಯಾವುದಕ್ಕೂ ಎದೆಗುಂದಲಿಲ್ಲ. ಅದರ ನಡುವೆಯೇ ನಾನು ಉತ್ತಮ ಲೇಖಕನಾಗಿ ಹೊರಹೊಮ್ಮಿದೆ. ಐದಾರು ವರ್ಷಗಳಲ್ಲಿ ದೇಶದ ಹಲವು ಭಾಷೆಗಳಲ್ಲಿ ನನ್ನ ಕಾದಂಬರಿಗಳು ಭಾಷಾಂತರಗೊಂಡು ಅತ್ಯುತ್ತಮ ಕಾದಂಬರಿಗಳು ಮಾರಾಟಗೊಂಡ ಲೇಖಕನೆಂದು ಹೆಸರು ಗಳಿಸಿದೆ. ನಾನು ಸಾಹಿತಿ ಆಗಬೇಕೆಂದು ಮನಸ್ಸು ಮಾಡಿರಲಿಲ್ಲ. ಬೆಳೆಯುತ್ತ ಅದೆಲ್ಲ ಸಾಗಿತು ಎಂದರು.

ಶ್ರೀಗಳು ಪರಂಪರೆ ಹಾಗೂ ಆಧುನಿಕತೆಯನ್ನು ಚೆನ್ನಾಗಿ ಅಧ್ಯಯನ ಮಾಡಿದ್ದಾರೆ. ಅವರು ಸಮರ್ಥವಾಗಿ ಚರ್ಚೆ ಮಾಡುವುದರಿಂದ ಅವರ ಬಳಿ ಯಾರೂ ಹೋಗುವುದಿಲ್ಲ ಎಂದು ಪೇಜಾವರ ಶ್ರೀಗಳ ಬಗ್ಗೆ ಮಾತನಾಡಿದರು.

Pejawara shree grant Krishnanugraha Award for Writer SL Bhyrappa

ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಮಾತನಾಡಿ, ಸಾಹಿತಿ ಪ್ರೊ.ಎಸ್‌.ಎಲ್‌.ಭೈರಪ್ಪ ಅವರು ತಮ್ಮ ಸಾಹಿತ್ಯದ ಮೂಲಕ ಭಾರತದ ಇತಿಹಾಸ ದುರಂತಗಳನ್ನು ಪಾರದರ್ಶಕವಾಗಿ ಚಿತ್ರಿಸಿದ್ದಾರೆ. ಭಾರತೀಯತೆಯನ್ನು ಧೈರ್ಯವಾಗಿ ಬರೆದ ಸಾಹಿತಿ ಭೈರಪ್ಪ. ಇದಕ್ಕೆ 'ಬುದ್ಧಿಜೀವಿ' ಸಾಹಿತಿಗಳಿಂದ ವಿರೋಧವೂ ವ್ಯಕ್ತವಾಯಿತು. ಯಾರು ಎಷ್ಟೇ, ಏನೇ ಹೇಳಿದರೂ ನಾನು ಬರೆದೇ ಬರೆಯುತ್ತೇನೆ ಎಂದು ಭೈರಪ್ಪ ತಮ್ಮ ಕರ್ತವ್ಯ ನಿರ್ವಹಿಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನನಗೆ ಕಾದಂಬರಿಗಳನ್ನು ಓದುವ ಹವ್ಯಾಸವಿದೆ. ಭೈರಪ್ಪ ರಚಿಸಿರುವ ಕಾದಂಬರಿಗಳನ್ನು ಹೆಚ್ಚು ಓದಿದ್ದೇನೆ. ಅವರ 'ಪರ್ವ' ಕಾದಂಬರಿಯಲ್ಲಿ ನಾನು ಭಗವಂತನನ್ನು ಕಂಡಿರುವೆ ಎಂದು ಅವರು ವಿವರಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+