ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿಗರನ್ನು ಸಂಭ್ರಮದಲ್ಲಿ ತೇಲಿಸಿದ ಓಪನ್ ಸ್ಟ್ರೀಟ್ ಫೆಸ್ಟಿವಲ್

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಸೆಪ್ಟೆಂಬರ್ 27: ಆ ರಸ್ತೆಯಲ್ಲಿ ಪ್ರತಿದಿನ ನೂರಾರು ವಾಹನಗಳು, ಸಾವಿರಾರು ಜನರು ಸಂಚರಿಸುತ್ತಿದ್ದರು. ಆದರೆ ಇಂದು ಸಂಪೂರ್ಣ ಮನೋರಂಜನೆಗೆ ಸೀಮಿತವಾಗಿತ್ತು. ಕೆಲವರು ಯೋಗ ಮಾಡುವಲ್ಲಿ ನಿರತರಾದರೆ, ಇನ್ನು ಕೆಲವರು ಸ್ಕೇಟಿಂಗ್ ಮೂಲಕ ಜನರನ್ನ ರಂಜಿಸುತ್ತಿದ್ದರು. ಇನ್ನೊಂದೆಡೆ ಚಿಣ್ಣರು, ಪುಟ್ಟ ಪುಟ್ಟ ಮಕ್ಕಳು ತಾವೇನು ಕಡಿಮೆ ಎಂಬಂತೆ ಗೊಂಬೆ ಆಡಿಸುತ್ತಿ ಎಲ್ಲರ ಗಮನ ಸೆಳೆಯುತ್ತಿದ್ದರು. ಇದಕ್ಕೆಲ್ಲಾ ಸಾಕ್ಷಿಯಾಗಿದ್ದು ಮೈಸೂರಿನ ದೇವರಾಜು ಅರಸ್ ರಸ್ತೆಯ ಓಪನ್ ಸ್ಟ್ರೀಟ್ ಫೆಸ್ಟಿವಲ್.

ಮೈಸೂರಲ್ಲಿ ಟ್ರಿಣ್ ಟ್ರಿಣ್ ಸೈಕಲ್ ಏರಿ ಪಾರಂಪರಿಕ ಕಟ್ಟಡ ವೀಕ್ಷಣೆ ಮೈಸೂರಲ್ಲಿ ಟ್ರಿಣ್ ಟ್ರಿಣ್ ಸೈಕಲ್ ಏರಿ ಪಾರಂಪರಿಕ ಕಟ್ಟಡ ವೀಕ್ಷಣೆ

ದಸರಾ ಸಂದರ್ಭದಲ್ಲಿ ಮೈಸೂರು ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಸಂಯುಕ್ತವಾಗಿ ಇಂದು ದೇವರಾಜ ಅರಸ್ ರಸ್ತೆಯಲ್ಲಿ ಆಯೋಜಿಸಿದ್ದ ಓಪನ್ ಸ್ಟ್ರೀಟ್ ಫೆಸ್ಟ್, ವಿದೇಶಿ ಮಾದರಿಯ ಕಾರ್ನಿವಲ್ ಪೆಸ್ಟಿವಲ್ ಅನ್ನೂ ನಾಚಿಸುವಂತೆ ಕಂಗೊಳಿಸಿತು.

ಮೈಸೂರು: ಪಾರಂಪರಿಕ ಹಾದಿ ಹಾದುಬಂದ ಜಾವಾ ಬೈಕ್ ಗಳುಮೈಸೂರು: ಪಾರಂಪರಿಕ ಹಾದಿ ಹಾದುಬಂದ ಜಾವಾ ಬೈಕ್ ಗಳು

ಜಿಲ್ಲಾಧಿಕಾರಿ ಡಿ.ರಂದೀಪ್ ಅವರು ಓಪನ್ ಫೆಸ್ಟ್ ಅನ್ನು ಉದ್ಘಾಟಿಸಿದರು. ನಂತರ ಕಾಲ್ನಡಿಗೆಯಲ್ಲಿ ಓಪನ್ ಸ್ಟ್ರೀಟ್ ಫೆಸ್ಟ್ ಗೆ ಒಂದು ಸುತ್ತು ಹಾಕಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಅತ್ಯಂತ ಯಶಸ್ವಿಯಾದ ಓಪನ್ ಸ್ಟ್ರೀಟ್ ಫೆಸ್ಟ್ ಅನ್ನು ಮೈಸೂರು ದಸರಾ ಸಂದರ್ಭದಲ್ಲಿ ಆಯೋಜಿಸಿ ಪ್ರವಾಸಿಗರನ್ನು ಸೆಳೆಯುವ ಮೂಲಕ ಹೊಸತನವನ್ನು ನೀಡಲಾಗಿದೆ. ಸಾರ್ವಜನಿಕರ ಉತ್ಸಾಹದಿಂದ ಪಾಲ್ಗೊಂಡಿದ್ದು, ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ವರ್ಷಕ್ಕೊಂದು ದಿನವನ್ನು ಇದಕ್ಕಾಗಿ ಮೀಸಲಿರಿಸಲು ನಿರ್ಧರಿಸಲಾಗುವುದು ಎಂದು ತಿಳಿಸಿದರು.

ಜನಸಾಗರ

ಜನಸಾಗರ

ಮೈಸೂರು ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಈ ವಿನೂತನ ಪ್ರಯೋಗ ಮಾಡಲಾಗಿದ್ದು, ಕಲೆ,ಸಾಹಿತ್ಯದ ಅನಾವರಣದ ಜೊತೆ ಜೊತೆಗೆ ಶಾಂಪಿಂಗ್ ಮಾಡುವ ಅವಕಾಶವನ್ನೂ ಕಲ್ಪಿಸಲಾಗಿತ್ತು. ಓಪನ್ ಸ್ಟ್ರೀಟ್ ಫೆಸ್ಟಿವಲ್ ನಲ್ಲಿ ದೇಶ ವಿದೇಶಿಗರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರಗು ತಂದರು.

ಅದ್ಭುತ ಕ್ಷಣ ಕಣ್ತುಂಬಿಸಿಕೊಂಡ ಜನ

ಅದ್ಭುತ ಕ್ಷಣ ಕಣ್ತುಂಬಿಸಿಕೊಂಡ ಜನ

ಹಲವರು ನೃತ್ಯದಲ್ಲಿ ವೀಕ್ಷರಕರ ಮನ ತಣಿಸಿದರೆ, ಮತ್ತಷ್ಟು ಜನ ರಸ್ತೆಯಲ್ಲಿ ರೋಲರ್ ಸ್ಕೇಟಿಂಗ್ ನಡೆಸುವ ಮೂಲಕ ಪ್ರವಾಸಿಗರನ್ನ ತಮ್ಮತ್ತ ಸೆಳೆಯುತ್ತಿದ್ದರು . ಇನ್ನೊಂದೆಡೆ ಚಿಣ್ಣರು ತಾವೇನೂ ಕಡಿಮೆ ಇಲ್ಲದಂತೆ ಗೊಂಬೆಯಾಡಿಸುತ್ತ ಮೈಮರೆತ್ತಿದ್ದರು. ಈ ಅದ್ಭುತ ಕ್ಷಣಗಳನ್ನ ಕಣ್ತುಂಬಿಕ್ಕೊಳ್ಳಲು ಜನ ಸಾಗರವೇ ಅಲ್ಲಿ ಸೇರಿತ್ತು.

ರಸ್ತೆಯಲ್ಲಿ ಬಣ್ಣ – ಬಣ್ಣದ ಚಿತ್ತಾರ:

ರಸ್ತೆಯಲ್ಲಿ ಬಣ್ಣ – ಬಣ್ಣದ ಚಿತ್ತಾರ:

ಕಾವಾ ಕಾಲೇಜಿನ ವಿದ್ಯಾರ್ಥಿಗಳು ರಂಗೋಲಿ ಪುಡಿಯಲ್ಲಿ ಜಂಬೂ ಸವಾರಿ, ಮಹಿಷಾಸುರ, ಆನೆ, ಪ್ರಕೃತಿ, ವಿವಿಧ ಚಿತ್ತಾರಗಳು ಸೇರಿದಂತೆ ಹಲವಾರು ಚಿತ್ರಕಲೆ, ಕುಂಬಾರಿಕೆ ಮಳಿಗೆಗಳು ಪ್ರೇಕ್ಷಕರ ಮನೋಲ್ಲಾಸಗೊಳಿಸಿ ಸೆಳೆದವು.

ಜೀವಂತಿಕೆ ಪಡೆದ ಕಾರ್ಟೂನ್ ಕ್ಯಾರೆಕ್ಟರ್!

ಜೀವಂತಿಕೆ ಪಡೆದ ಕಾರ್ಟೂನ್ ಕ್ಯಾರೆಕ್ಟರ್!

ಕೇರಳದ ಅಲಂಕಾರಿ ಒಣ ಹೂವುಗಳು, ಮೈಸೂರು ತಂಜಾವೂರ ಚಿತ್ರಕಲೆ, ತೆರಾಕೋಟಾ ಒಡವೆಗಳು, ಕಾಟನ್ ಸೀರೆಗಳು, ಸಿದ್ಧ ಉಡುಪುಗಳು, ಯುವ ಸಮೂಹದ ಪ್ರಿಯವಾದ ರೆಡಿ ಟ್ಯಾಟ್ಯೂಗಳು ಹೆಚ್ಚಿನ ಆಕರ್ಷಣೆಗೊಳಗಾದವು. ಮಿಕ್ಕಿಮೌಸ್, ಛೋಟಾಭೀಮ್, ಡೋನಾಲ್ಡ್ ಸೇರಿದಂತೆ ಮಕ್ಕಳ ಪ್ರಿಯವಾದ ಕಾರ್ಟನ್ ಕ್ಯಾರೆಕ್ಟರ್ ಗಳು ಜೀವಂತಿಕೆ ಪಡೆದಿದ್ದವು. ಇವುಗಳ ಮುಂದೆ ಸೆಲ್ಫಿ ತೆಗೆಸಿಕೊಳ್ಳಲು ಮಕ್ಕಳು ಸೇರಿದಂತೆ ದೊಡ್ಡವರು ಮುಗಿ ಬಿದ್ದಿದ್ದು ಕಂಡು ಬಂತು.

ಜಾನಪದ ಕಲೆ

ಜಾನಪದ ಕಲೆ

ಡೊಳ್ಳು, ಕಂಸಾಳೆ, ಮರಗಾಲು ಗೊಂಬೆ ಮೊದಲಾದ ಜಾನಪದ ಕಲಾತಂಡಗಳ ಪ್ರದರ್ಶನ, ವಿದೇಶಿಗರ ಯೋಗ, ಸಂಗೀತ ಕಾರ್ಯಕ್ರಮ, ನೃತ್ಯ ಮೊದಲಾದವರು ಓಪನ್ ಸ್ಟ್ರೀಟ್ ಫೆಸ್ಟ್ ಗೆ ಮೆರಗು ನೀಡಿದ್ದವು. ಕಿಕ್ಕಿರಿದ್ದು ತುಂಬಿದ್ದ ಯುವ ಸಮೂಹವೂ ಸೆಲ್ಫಿಗೆ ಮೊರೆ ಹೋದಂತೆ ಕಂಡ ಬಂದರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಅತ್ಯಂತ ಖುಷಿಯಿಂದ ಆಸ್ವಾಧಿಸಿದರು. ವಿದೇಶಿಗರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದರು. ಬೆಳಗಿನಿಂದಲೇ ಆರಂಭವಾದ ಹಲವಾರು ಕಾರ್ಯಕ್ರಮಗಳಿಗೆ ಮಧ್ಯಾಹ್ನದ ಮಳೆಯು ಕೊಂಚ ಅಡ್ಡಿಯುಂಟು ಮಾಡಿದಂತೆ ಕಂಡು ಬಂದರೂ ಮಳೆ ನಿಂತ ಮೇಲೆ ಯಾಥಾಸ್ಥಿತಿಯಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿತು.

ಪ್ರವಾಸೋದ್ಯಮ ದಿನಕ್ಕೂ ಮೆರಗು

ಪ್ರವಾಸೋದ್ಯಮ ದಿನಕ್ಕೂ ಮೆರಗು

ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಇದೇ ಮೊಟ್ಟಮೊದಲ ಬಾರಿಗೆ ಮೈಸೂರು ದೇವರಾಜ ಅರಸ್ ರಸ್ತೆಯಲ್ಲಿ ಇಂದು ಆಯೋಜಿಸಿದ್ದ ಓಪನ್ ಸ್ಟ್ರೀಟ್ ಫೆಸ್ಟ್ ಗೆ ಅತ್ಯಂತ ಯಶಸ್ವಿಯಾಯಿತು ಎನ್ನುವುದಕ್ಕೆ ಸೇರಿದ ಜನಸ್ತೋಮವೇ ಸಾಕ್ಷಿಯಾಯಿತು.

English summary
Open Street Festival’ was organised in the heritage city for the first time on the Devaraj Urs Road , Mysuru. The event is organised by district administration and tourism department. The event is on the same lines of those held in Bengaluru to mark the World Tourism Day
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X