• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರು ಅರಮನೆಯ ಕ್ಯಾಂಡಲ್ ಹೋಲ್ಡರ್ ಗಳ ಅನ್ ಲೈನ್ ಹರಾಜು

By Coovercolly Indresh
|

ಮೈಸೂರು, ಜನವರಿ 28: ಅರಮನೆಯ ಮುದ್ರೆ ಹೊಂದಿರುವ ಗುಮ್ಮಟ ವಿನ್ಯಾಸದ ಓಸ್ಲರ್ ಫ್ಲೋರ್ ಕ್ಯಾಂಡೆಲಾಬ್ರಮ್ (ಕ್ಯಾಂಡಲ್ ಹೋಲ್ಡರ್) ನ್ನು ಆನ್ಲೈನ್ ಹರಾಜಿಗೆ ಇಡಲಾಗಿದೆ ಎಂದು ತಿಳಿದು ಬಂದಿದೆ.

ಪ್ರಮುಖ ಆಂಟಿಕ್ ಹರಾಜು ಸಂಸ್ಥೆ ʻಅಷ್ಟಗುರುʼ ತನ್ನ ತಾಣದಲ್ಲಿ ಹರಾಜು ನಡೆಸುತ್ತಿದೆ. ಈ ಹರಾಜು ನಿನ್ನೆಯಿಂದ ಆರಂಭಗೊಂಡಿದ್ದು, ಗುರುವಾರ ರಾತ್ರಿ 9 ಗಂಟೆಗೆ ಕೊನೆಗೊಳ್ಳಲಿದೆ.

ಟಾಟಾ ಗ್ರೂಪ್‌ ಆಫ್ ಕಂಪನಿ ತೆಕ್ಕೆಗೆ ಪ್ರತಿಷ್ಠಿತ ಲಲಿತ್ ಮಹಲ್ ಪ್ಯಾಲೇಸ್ ಹೋಟೆಲ್?ಟಾಟಾ ಗ್ರೂಪ್‌ ಆಫ್ ಕಂಪನಿ ತೆಕ್ಕೆಗೆ ಪ್ರತಿಷ್ಠಿತ ಲಲಿತ್ ಮಹಲ್ ಪ್ಯಾಲೇಸ್ ಹೋಟೆಲ್?

ಈ ಕ್ಯಾಂಡಲ್ ಹೋಲ್ಡರ್ ಸ್ಫಟಿಕದಿಂದ ಮಾಡಲ್ಪಟ್ಟಿದೆ. ಹೋಲ್ಡರ್ ನ ಪ್ರತಿ ಕ್ಯಾಂಡಲ್ ಬಲ್ಬ್ ನಲ್ಲೂ ಅರಮನೆ ಮುದ್ರೆಯಿದೆ. 19 ಮತ್ತು 20ನೇ ಶತಮಾನಗಳಿಂದ ಸಂಗ್ರಹಿಸಲಾಗಿರುವ ಹೋಲ್ಡರ್ '50 ಲಾಟ್ಸ್' ಹೊಂದಿದೆ. ಇದು 19ನೇ ಶತಮಾನದ ಉತ್ತರಾರ್ಧದ್ದಾಗಿದೆ.

ಇದನ್ನು ಲಂಡನ್ನಿನ ಬರ್ಮಿಂಗ್ ಹ್ಯಾಮ್ ನಲ್ಲಿ ಎಫ್ ಅಂಡ್ ಸಿ ಓಸ್ಲರ್ ಸಂಸ್ಥೆ ತಯಾರಿಸಿತ್ತು. ನಂತರ ಮೈಸೂರು ಅರಮನೆಯ ಸಂಗ್ರಹ ಇದಾಗಿದ್ದು, ಸೊಗಸಾದ ಕಲಾತ್ಮಕತೆ, ಕರಕುಶಲತೆ ಮತ್ತು ವಿನ್ಯಾಸಕ್ಕೆ ಉತ್ತಮ ಉದಾಹರಣೆಯಾಗಿದೆ. ಇದರ ಅಂದಾಜು ಬೆಲೆ 25 ಲಕ್ಷದಿಂದ 30 ಲಕ್ಷ ರೂ. ಆಗಿದೆ.

ʻಪುರಾತನ ಮತ್ತು ಕಲಾ ಖಜಾನೆ ಕಾಯ್ದೆ, 1972ರ ಪ್ರಕಾರ ಇದು ನೂರು ವರ್ಷಗಳಷ್ಟು ಹಳೆಯದುʼ ಎಂದು ಅಷ್ಟಗುರು ಹರಾಜು ವೇದಿಕೆ ಉಲ್ಲೇಖಿಸಿದೆ

1807ರಲ್ಲಿ ಬರ್ಮಿಂಗ್ ಹ್ಯಾಮ್ ನಲ್ಲಿ ಥಾಮಸ್ ಓಸ್ಲರ್ ಮತ್ತು ಅವರ ಇಬ್ಬರು ಗಂಡು ಮಕ್ಕಳಾದ ಫೋಲೆಟ್ ಮತ್ತು ಕ್ಲಾರ್ಟ್ಸನ್ ಸ್ಥಾಪಿಸಿದ ಎಫ್ & ಸಿ ಓಸ್ಲರ್ ಸಂಸ್ಥೆಯು ಶುದ್ಧ ಮತ್ತು ಅತ್ಯಂತ ಸೂಕ್ಷ್ಮ ಗುಣಮಟ್ಟದ ಸ್ಫಟಿಕ ಗೊಂಚಲುಗಳನ್ನು ತಯಾರಿಸಿತು. ವರ್ಷದಲ್ಲಿ ಈ ಸಂಸ್ಥೆಯು ಜಾಗತಿಕವಾಗಿ ಅತ್ಯುತ್ತಮ ಗಾಜಿನ ತಯಾರಿಕೆ ಸಂಸ್ಥೆಯಾಗಿ ಗುರುತಿಸಿಕೊಂಡಿತು.

ಸ್ಪಟಿಕ ಗೊಂಚಲಿನ ಕ್ಯಾಂಡಲ್ ಹೋಲ್ಡರ್ ಅನ್ನು ಭಾರತದ ಅನೇಕ ಮಹಾರಾಜರು ಮೆಚ್ಚಿದ್ದರು. ಅಷ್ಟೇ ಅಲ್ಲದೇ, ತಮ್ಮ ಅರಮನೆಗಳಲ್ಲಿ ಅವುಗಳನ್ನು ಹೊಂದಿದ್ದರು. ನಂತರ 1920ರಲ್ಲಿ ನಷ್ಟದಿಂದಾಗಿ ಸಂಸ್ಥೆ ಮುಚ್ಚಿ ಹೋಯಿತು.

ಈ ತಾಣದಲ್ಲಿ ಹರಾಜಾಗುತ್ತಿರುವ ಮತ್ತೊಂದು ಕ್ಯಾಂಡಲ್‌ ಹೋಲ್ಡರ್‌ ಲಂಡನ್‌ ನಲ್ಲಿ 1841 ರಲ್ಲಿ ತಯಾರಿಸಲ್ಪಟ್ಟಿದ್ದು, ಇದಕ್ಕೆ 10.786 ಕೆಜಿಯಷ್ಟು ಬೆಳ್ಳಿ ಬಳಕೆ ಮಾಡಲಾಗಿದೆ. ಇದು ಲಂಡನ್‌ ನ ಹಾಲ್‌ ಮಾರ್ಕ್‌ ಕೂಡ ಹೊಂದಿದೆ. ಇದಕ್ಕೆ ಈವರೆಗೂ 17.10 ಲಕ್ಷ ರೂಪಾಯಿಗಳ ಬಿಡ್ ಬಂದಿದ್ದು, 19 ರಿಂದ 22 ಲಕ್ಷ ರೂಪಾಯಿಗಳ ಬೆಲೆಯನ್ನು ಅಷ್ಟಗುರು ಅಂದಾಜಿಸಿದೆ.

ಈ ಕುರಿತು ಮುಂಬೈನ ಅಷ್ಟಗುರು ತಾಣವನ್ನು ಒನ್ ಇಂಡಿಯಾ ಕನ್ನಡ ಸಂಪರ್ಕಿಸಿದಾಗ ಕರೆ ಸ್ವೀಕರಿಸಿದ ಅವರು, ಮೈಸೂರು ಅರಮನೆಯ ಕ್ಯಾಂಡಲ್‌ ಹೋಲ್ಡರ್‌ ಗಳೆಂದು ಖಚಿತ ಪಡಿಸಿದ್ದಲ್ಲದೆ, ಇವುಗಳನ್ನು 6-7 ಲಾಟ್ ಗಳ ಮೂಲಕ ಹರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಹೆಚ್ಚಿನ ಮಾಹಿತಿಯನ್ನು ಕೋರಿದಾಗ ಮಾಧ್ಯಮದವರು ಎಂದ ಕೂಡಲೇ ಮತ್ತೋರ್ವ ವ್ಯಕ್ತಿಯು ಮೈಸೂರು ಅರಮನೆಯ ಯಾವುದೇ ವಸ್ತುಗಳನ್ನು ಹರಾಜು ಮಾಡುತ್ತಿಲ್ಲವೆಂದೂ, ಕಣ್ತಪ್ಪಿನಿಂದ ಈ ಮೊದಲು ಮೈಸೂರು ಅರಮನೆ ಎಂದು ನಮೂದಿಸಿದ್ದು, ನಂತರ ಅದನ್ನು ಸರಿಪಡಿಸಲಾಗಿದೆ ಎಂದರು.

ಈ ಜಾಲತಾಣದಲ್ಲಿ ನಡೆಯುತ್ತಿರುವ ಹರಾಜಿನಲ್ಲಿ ಒಟ್ಟು 7 ಲಾಟ್ ಗಳಲ್ಲಿ ಕ್ಯಾಂಡಲ್‌ ಹೋಲ್ಡರ್‌ ಗಳಿದ್ದು, ಗುರುವಾರ ಸಂಜೆ 6 ಗಂಟೆವರೆಗೆ ಒಟ್ಟು 70 ಲಕ್ಷ ರೂಪಾಯಿಗಳ ಬಿಡ್ ಸಲ್ಲಿಕೆ ಆಗಿದೆ.

English summary
The Osler Floor Candelabram (Candle Holder), a dome design with a mysuru palace seal, has been put up for auction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X