ಮೈಸೂರಿನ ಕಮಿಷನರ್ ಕಚೇರಿ ಉದ್ಘಾಟನೆಗೆ ದೂರುದಾರರ ಆಕ್ಷೇಪ

ಮೈಸೂರು, ನವೆಂಬರ್ 21: ಸಾರ್ವಜನಿಕ ಉದ್ಯಾನದ ಜಾಗದಲ್ಲಿ ನಗರ ಪೊಲೀಸ್​ ಕಮಿಷನರ್ ಕಚೇರಿ ನಿರ್ಮಾಣಕ್ಕೆ ಈ ಹಿಂದೆ ರಾಜ್ಯ ಹೈಕೋರ್ಟ್ ನಿಂದ ತಡೆಯಾಜ್ಞೆ ನೀಡಿದ್ದರೂ ಸಿಎಂ ಯಡಿಯೂರಪ್ಪ ಅವರಿಂದ ಉದ್ಘಾಟನೆಗೆ ದಿನಾಂಕ ನಿಗದಿ ಮಾಡಿರುವುದು ಸರಿಯಲ್ಲ ಎಂದು ದೂರುದಾರ ಅಶೋಕ್ ಕುಮಾರ್ ಆರೋಪಿಸಿದ್ದಾರೆ.

ನಗರದ ನಜರ್​ಬಾದ್​ನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಪೊಲೀಸ್​ ಕಮಿಷನರ್ ಕಚೇರಿ ಉದ್ಯಾನವನಕ್ಕೆ ಸೇರಿದ ಜಾಗದಲ್ಲಿದ್ದು, ಯಾವುದೇ ಅನುಮತಿ ಪಡೆಯದೇ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿ ನಜರ್ ಬಾದ್ ನಿವಾಸಿ ಅಶೋಕ್ ಕುಮಾರ್ ಹೈಕೋರ್ಟ್​ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಈ ತಡೆಯಾಜ್ಞೆ ಲೆಕ್ಕಿಸದೆ ಪೊಲೀಸ್ ಕಮಿಷನರ್ ಕಚೇರಿ ನಿರ್ಮಾಣವಾಗಿದೆ. ಇದನ್ನು ಸಿದ್ದರಾಮಯ್ಯ ಸಿಎಂ ಆಗಿದ್ದ ಕಾಲದಲ್ಲಿ ಉದ್ಘಾಟನೆ ಮಾಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆಗ ದೂರುದಾರ ಅಶೋಕ್ ಕುಮಾರ್ ಪ್ರತಿಕಾ ಹೇಳಿಕೆ ನೀಡಿದ್ದರು. ಇದನ್ನು ಗಮನಿಸಿದ ಸಿದ್ದರಾಮಯ್ಯ ಕೋರ್ಟ್​ನ ತಡೆಯಾಜ್ಞೆಯ ಉಲ್ಲಂಘನೆ ಆಗುತ್ತದೆ ಎಂದು ಉದ್ಘಾಟನೆಗೆ ಬರಲಿಲ್ಲ. ಆದರೆ, ಮಂಗಳವಾರ ನ.24ರಂದು ಸಿಎಂ ಯಡಿಯೂರಪ್ಪ ಈ ಕಟ್ಟಡ ಉದ್ಘಾಟನೆ ಮಾಡುತ್ತಾರೆ ಎಂದು ದಿನಾಂಕ ನಿಗದಿ ಮಾಡಲಾಗಿದೆ.

Mysuru: Objection To Inauguration Of New Police Commissioner Office

ತಡೆಯಾಜ್ಞೆ ಇದ್ದರೂ ಯಡಿಯೂರಪ್ಪ ಈ ನೂತನ ಪೊಲೀಸ್ ಕಮಿಷನರ್ ಕಚೇರಿ ಉದ್ಘಾಟನೆಗೆ ಬರುತ್ತಿರುವುದು ಸರಿಯಲ್ಲ. ಇದು ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ಅಶೋಕ್​ ಕುಮಾರ್​ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+