• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರು; ಎಲೆಕ್ಟ್ರಿಕ್ ವಾಹನದ ಚಾರ್ಜಿಂಗ್ ಆರಂಭ, 3 ತಿಂಗಳು ಉಚಿತ

By ಮೈಸೂರು ಪ್ರತಿನಿಧಿ
|

ಮೈಸೂರು, ಜನವರಿ 28; ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪೆಟ್ರೋಲ್ ಹಾಗೂ ‌ಡೀಸೆಲ್ ಬೆಲೆಯಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ. ಗಗನಕ್ಕೇರುತ್ತಿರುವ ತೈಲ ಬೆಲೆಯಿಂದ ವಾಹನಗಳ ಬಳಕೆಗೆ ಹಲವರು ‌ಹಿಂದೇಟು ಹಾಕುತ್ತಿದ್ದರೆ.‌ ಇನ್ನೂ ಕೆಲವರು ಪರ್ಯಾಯ ಮಾರ್ಗ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಇದಕ್ಕೆ ಪೂರಕವೆಂಬಂತೆ‌ ಮೈಸೂರು ನಗರದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ‌ ಹೆಚ್ಚಾಗುತ್ತಿದೆ.

ನಗರದಲ್ಲಿ 300ಕ್ಕೂ ಹೆಚ್ಚು ವಿದ್ಯುತ್ ಚಾಲಿತ ವಾಹನಗಳಿವೆ. ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ಭವಿಷ್ಯದಲ್ಲಿ ವಿದ್ಯುತ್ ಚಾಲಿತ ವಾಹನ ಸವಾರರ ಸಂಖ್ಯೆ ಹೆಚ್ಚಾಗುವ ಸಾಧ್ಯಯಿದೆ. ಈ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ವಾಹನ ಸವಾರರ‌ ಅನುಕೂಲಕ್ಕೆ ನಗರದಲ್ಲಿ ಚಾರ್ಜಿಂಗ್ ಕೇಂದ್ರ ಆರಂಭಿಸಲಾಗಿದೆ.

 ಬೆಂಗಳೂರು ವಿದ್ಯುತ್ ವಿತರಣಾ ವ್ಯವಸ್ಥೆ ಉನ್ನತೀಕರಣಕ್ಕೆ, ಏಷ್ಯಾ ಅಭಿವೃದ್ಧಿ ಬ್ಯಾಂಕ್‌ನಿಂದ 0 ಮಿಲಿಯನ್ ಸಾಲ ಬೆಂಗಳೂರು ವಿದ್ಯುತ್ ವಿತರಣಾ ವ್ಯವಸ್ಥೆ ಉನ್ನತೀಕರಣಕ್ಕೆ, ಏಷ್ಯಾ ಅಭಿವೃದ್ಧಿ ಬ್ಯಾಂಕ್‌ನಿಂದ 0 ಮಿಲಿಯನ್ ಸಾಲ

ವಿಜಯನಗರ ಒಂದನೇ ಹಂತದ ಸೆಸ್ಕ್‌ ಕೇಂದ್ರ ಕಚೇರಿಯಲ್ಲಿ ವಿದ್ಯುತ್ ವಾಹನಗಳ ಚಾರ್ಜಿಂಗ್ ಕೇಂದ್ರವಿದೆ. "ಸದ್ಯ ಕೇಂದ್ರ ಕಚೇರಿ ಆವರಣದಲ್ಲಿ ಒಂದು ಚಾರ್ಜಿಂಗ್ ಕೇಂದ್ರ ಕಾರ್ಯಾರಂಭಿಸಿದ್ದು, ವಿದ್ಯುತ್ ವಾಹನ ಸವಾರರ ಅನುಕೂಲಕ್ಕಾಗಿ ಮತ್ತೆ ಎರಡು ಕೇಂದ್ರಗಳನ್ನು ಆರಂಭಿಸಲಿದ್ದೇವೆ" ಎಂದು ಸೆಸ್ಕ್‌ನ ವ್ಯವಸ್ಥಾಪಕ ನಿರ್ದೇಶಕ ಮನೋಹರ ಎಂ.ಬೇವಿನಮರ ಹೇಳಿದ್ದಾರೆ.

ಬಜೆಟ್‌ 2021: ಎಲೆಕ್ಟ್ರಿಕ್ ವಾಹನ ಕೈಗಾರಿಕೆಗಳ ನಿರೀಕ್ಷೆಗಳೇನು?ಬಜೆಟ್‌ 2021: ಎಲೆಕ್ಟ್ರಿಕ್ ವಾಹನ ಕೈಗಾರಿಕೆಗಳ ನಿರೀಕ್ಷೆಗಳೇನು?

ವಿದ್ಯುತ್ ಚಾರ್ಜಿಂಗ್ ಕೇಂದ್ರಕ್ಕೆ ವಿದ್ಯುತ್ ಪೂರೈಕೆಗಾಗಿ ಬುಧವಾರ (ಜ.27ರಂದು) ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದಾರೆ. ವಿದ್ಯುತ್ ಚಾಲಿತ ವಾಹನ ಹೊಂದಿರುವವರು ಇಲ್ಲಿ ಚಾರ್ಜ್ ಮಾಡಬಹುದು.

 ವಾಹನ ಸವಾರರಿಗೆ ಗುಡ್‌ನ್ಯೂಸ್: ಫಾಸ್ಟ್‌ಟ್ಯಾಗ್‌ ಡೆಡ್‌ಲೈನ್ ವಿಸ್ತರಣೆ, ಫೆಬ್ರವರಿ 15ರವರೆಗೆ ಅವಕಾಶ ವಾಹನ ಸವಾರರಿಗೆ ಗುಡ್‌ನ್ಯೂಸ್: ಫಾಸ್ಟ್‌ಟ್ಯಾಗ್‌ ಡೆಡ್‌ಲೈನ್ ವಿಸ್ತರಣೆ, ಫೆಬ್ರವರಿ 15ರವರೆಗೆ ಅವಕಾಶ

ಘಟಕಕ್ಕೆ 8 ಲಕ್ಷ ವೆಚ್ಚ

ಘಟಕಕ್ಕೆ 8 ಲಕ್ಷ ವೆಚ್ಚ

"ವಿದ್ಯುತ್ ವಾಹನ ಚಾರ್ಜಿಂಗ್ ಕೇಂದ್ರ ಸ್ಥಾಪಿಸಲು ಖಾಸಗಿ ಅವರಿಗೂ ಅವಕಾಶವಿದೆ. 10*10 ಅಡಿ ಸ್ಥಳಾವಕಾಶವಿದ್ದರೆ ಸಾಕು. ಚಾರ್ಜಿಂಗ್ ಮಾಡುವ ಉಪಕರಣವನ್ನು ಅವರೇ ಅಳವಡಿಸಿಕೊಳ್ಳಬೇಕು. ನಾವು ಆ ಕೇಂದ್ರಕ್ಕೆ ಪ್ರತಿ ಯುನಿಟ್‌ಗೆ 5ರ ದರದಲ್ಲಿ ವಿದ್ಯುತ್ ಪೂರೈಸುತ್ತೇವೆ. ಒಂದು ಘಟಕ ಸ್ಥಾಪನೆಗೆ 8 ಲಕ್ಷ ರೂ. ವೆಚ್ಚ ವಾಗಲಿದೆ. ಖಾಸಗಿ ಸಂಸ್ಥೆಗಳಿಗೆ ಇದೇನು ಬಾರಿ ಹೊರೆಯಲ್ಲ" ಎಂದು ಸೆಸ್ಕ್‌ನ ವ್ಯವಸ್ಥಾಪಕ ನಿರ್ದೇಶಕ ಮನೋಹರ ಎಂ.ಬೇವಿನಮರ ಹೇಳಿದ್ದಾರೆ.

ವಿದ್ಯುತ್ ಆಪ್‌ನಲ್ಲಿ ಮಾಹಿತಿ ಲಭ್ಯ

ವಿದ್ಯುತ್ ಆಪ್‌ನಲ್ಲಿ ಮಾಹಿತಿ ಲಭ್ಯ

ವಿದ್ಯುತ್ ಚಾರ್ಜಿಂಗ್ ಕೇಂದ್ರಗಳಲ್ಲಿ ನೇರ ಮತ್ತು ಎಸಿ ಎಂಬ 2 ವಿಭಾಗಗಳಿವೆ. ನೇರ ಚಾರ್ಜಿಂಗ್ ಘಟಕದಲ್ಲಿ ನಾಲ್ಕು ಚಕ್ರದ ವಾಹನಕ್ಕೆ ಮಾತ್ರ ಅವಕಾಶವಿದ್ದು, ಒಂದೂವರೆ ತಾಸಿನೊಳಗೆ 12 ರಿಂದ 20 ಯುನಿಟ್ ಚಾರ್ಚ್ ಆಗಲಿದೆ. ಅಂದಾಜು ಮೊತ್ತ 120 ರಿಂದ 150 ರೂ. ತಗುಲಲಿದ್ದು, ಬ್ಯಾಟರಿ ಸಾಮರ್ಥ್ಯದ ಅನುಸಾರ 120 ರಿಂದ 260 ಕಿ.ಮೀ. ದೂರದವರೆಗೂ ಸಂಚರಿಸಬಹುದು.

ಅಪ್ಲಿಕೇಶನ್ ಆರಂಭ

ಅಪ್ಲಿಕೇಶನ್ ಆರಂಭ

ಒಮ್ಮೆ ಚಾರ್ಜ್ ಮಾಡಿಸಿಕೊಂಡ ಬಳಿಕ ಬ್ಯಾಟರಿ ಸಾಮರ್ಥ್ಯದ ಅನುಸಾರ 120 ರಿಂದ 260 ಕಿ.ಮೀ. ದೂರದವರೆಗೂ ಸಂಚರಿಸಬಹುದು. ಮಾರ್ಗ ಮಧ್ಯೆ ಚಾರ್ಜ್ ಮಾಡಿಸಿಕೊಳ್ಳಲು ಇದೀಗ ಅಲ್ಲಲ್ಲೇ ಚಾರ್ಜಿಂಗ್ ಕೇಂದ್ರಗಳು ಆರಂಭವಾಗಿವೆ. ಸೆಸ್ಕ್ ಅಭಿವೃದ್ಧಿಪಡಿಸಿರುವ ವಿದ್ಯುತ್ ಅಪ್ಲಿಕೇಶನ್‌ನಲ್ಲಿ ಇದರ ಸಂಪೂರ್ಣ ಮಾಹಿತಿ ಲಭ್ಯವಿದೆ.

3 ತಿಂಗಳು ಉಚಿತ

3 ತಿಂಗಳು ಉಚಿತ

ಎಸಿ ಘಟಕವಾದರೆ ಏಕ ಕಾಲಕ್ಕೆ 3 ವಿದ್ಯುತ್ ವಾಹನಗಳ ಚಾರ್ಜಿಂಗ್ ಮಾಡಿಕೊಳ್ಳಬಹುದು. ದ್ವಿಚಕ್ರ ವಾಹನವಾದರೆ 3 ರಿಂದ 4 ತಾಸು, ತ್ರಿಚಕ್ರ, ನಾಲ್ಕು ಚಕ್ರದ ವಾಹನಗಳಾದರೆ 6 ರಿಂದ 8 ತಾಸಿನ ಸಮಯಬೇಕು. ನೇರ ಚಾರ್ಜಿಂಗ್ ಘಟಕದಲ್ಲಿ ಒಂದರಿಂದ ಒಂದೂವರೆ ತಾಸು ಸಾಕಾಗಲಿದೆ. ಸದ್ಯಕ್ಕೆ 3 ತಿಂಗಳು ಉಚಿತವಾಗಿ ಸೇವೆ ಲಭ್ಯವಿದೆ.

English summary
The Chamundeshwari Electricity Supply Corporation Limited set up the electric vehicle charging station in Mysuru. Two more station to come up in the city soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X