• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಥೀಮ್ ಪಾರ್ಕ್ ನಿರ್ಮಾಣಕ್ಕೆ ಸಜ್ಜಾದ ಮೈಸೂರು ಪಾಲಿಕೆ

|

ಮೈಸೂರು, ಏಪ್ರಿಲ್ 25:ಮಳೆ ನೀರು ಸಂಗ್ರಹದ ಬಗ್ಗೆ ಸಮಗ್ರ ಮಾಹಿತಿಯನ್ನು ಒಂದೇ ಸೂರಿನಡಿ ಕಲ್ಪಿಸುವ ಉದ್ದೇಶದಿಂದ ಮೈಸೂರು ನಗರದಲ್ಲಿ ಥೀಮ್‌ ಪಾರ್ಕ್‌ ನಿರ್ಮಿಸಲು ಮಹಾನಗರ ಪಾಲಿಕೆ ಚಿಂತನೆ ನಡೆಸಿದೆ.

ಎಲ್ಲವೂ ಅಂದುಕೊಂಡಂತೆ ಆದರೆ ಬೆಂಗಳೂರಿನಲ್ಲಿರುವ ಥೀಮ್‌ ಪಾರ್ಕ್‌ ರೀತಿಯಲ್ಲೇ ಮೈಸೂರಿನಲ್ಲೂ ವಿಶಾಲ ಜಾಗದಲ್ಲಿ ಮಳೆ ನೀರು ಸಂಗ್ರಹ ಪಾರ್ಕ್‌ ತಲೆಎತ್ತಲಿದೆ.

ಬೆಂಗಳೂರು ಜಲಮಂಡಳಿ 2011ರಲ್ಲಿ ಜಯನಗರ ಐದನೇ ಬ್ಲಾಕ್‌ನಲ್ಲಿ ಸರ್‌ ಎಂ.ವಿಶ್ವೇಶ್ವರಯ್ಯ 'ಮಳೆ ನೀರು ಸುಗ್ಗಿ ಕೇಂದ್ರ'ಎಂಬ ಹೆಸರಿನಲ್ಲಿ ಮಳೆ ನೀರು ಸಂಗ್ರಹದ 'ಥೀಮ್‌ ಪಾರ್ಕ್‌' ಸ್ಥಾಪಿಸಿತ್ತು. ಭಾರತದ ಮೊದಲ ಮಳೆ ನೀರು ಸಂಗ್ರಹ ಪಾರ್ಕ್‌ ಎಂಬ ಹೆಗ್ಗಳಿಕೆ ಈ ಕೇಂದ್ರಕ್ಕಿದೆ.

ಮಳೆಯಾಗದಿದ್ದರೆ ಮಂಗಳೂರಿಗೆ ಎದುರಾಗಲಿದೆ ನೀರಿನ ಸಂಕಷ್ಟ

ಒಂದೂವರೆ ಎಕರೆ ಜಾಗದಲ್ಲಿ ಮಳೆ ನೀರು ಸಂಗ್ರಹದ ಮಾದರಿಗಳನ್ನು ನಿರ್ಮಿಸಲಾಗಿದೆ. ಕಳೆದ ಏಳು ವರ್ಷಗಳ ಅವಧಿಯಲ್ಲಿ 40 ಸಾವಿರಕ್ಕೂ ಅಧಿಕ ಮಂದಿ ಇಲ್ಲಿಗೆ ಭೇಟಿ ನೀಡಿ ಮಳೆ ನೀರು ಸಂಗ್ರಹದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಹೊರ ರಾಜ್ಯಗಳ ಪ್ರವಾಸಿಗರನ್ನೂ ಇದು ಆಕರ್ಷಿಸಿದೆ. ಮಳೆ ನೀರು ಸಂಗ್ರಹ ಘಟಕ ಸ್ಥಾಪಿಸುವ ಸಾವಿರಾರು ಗುತ್ತಿಗೆದಾರರು ಇಲ್ಲಿ ತರಬೇತಿ ಪಡೆದುಕೊಂಡಿದ್ದಾರೆ.

ಬೆಂಗಳೂರಿನಲ್ಲಿರುವ ಥೀಮ್‌ ಪಾರ್ಕ್‌ ಮಾದರಿಯಲ್ಲಿ ನಗರದಲ್ಲೂ ಪಾರ್ಕ್‌ ನಿರ್ಮಿಸಲು ಯೋಜನೆ ಸಿದ್ಧವಾಗುತ್ತಿದೆ. ಮೈಸೂರು ಹಾಗೂ ಸಮೀಪದ ಜಿಲ್ಲೆಗಳ ಜನರಿಗೆ ಮಳೆ ನೀರು ಸಂಗ್ರಹದ ಬಗ್ಗೆ ಜಾಗೃತಿ ಮೂಡಿಸಲು ಸಹಾಯಕವಾಗಲಿದೆ.

ಈ ಬಾರಿ ಕೆಆರ್ ಎಸ್‌ನಲ್ಲಿ ನೀರಿಗಿಲ್ಲ ಬರ, ಭಯಪಡಬೇಕಾಗಿಲ್ಲ ಜನ

ಪಾಲಿಕೆಯು ಥೀಮ್‌ ಪಾರ್ಕ್‌ ನಿರ್ಮಿಸಲು ಕಾರ್ಪೊರೇಟ್ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದ (ಸಿಎಸ್‌ಆರ್) ಹಣ ಪಡೆಯಲು ಚಿಂತಿಸಲಾಗಿದೆ..

 ಪ್ರವಾಸಿ ತಾಣವಾಗಿ ರೂಪುಗೊಳ್ಳಲಿದೆ

ಪ್ರವಾಸಿ ತಾಣವಾಗಿ ರೂಪುಗೊಳ್ಳಲಿದೆ

ಥೀಮ್‌ ಪಾರ್ಕ್‌ ಮಾಹಿತಿ ಕೇಂದ್ರದಂತೆ ಕಾರ್ಯನಿರ್ವಹಿಸಲಿದ್ದು, ಪ್ರವಾಸಿ ತಾಣವಾಗಿಯೂ ರೂಪುಗೊಳ್ಳಲಿದೆ. ಮಳೆ ನೀರು ಸಂಗ್ರಹಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿ ಇಲ್ಲಿ ದೊರೆಯುತ್ತದೆ. ಮಳೆ ನೀರು ಸಂಗ್ರಹ ಘಟಕಗಳ ಮಾದರಿಗಳು, ಒಳಚರಂಡಿ ನೀರು ಸಂಸ್ಕರಣಾ ವಿಧಾನಗಳು, ತ್ಯಾಜ್ಯ ಸಂಸ್ಕರಣೆ ಘಟಕಗಳು ಇಲ್ಲಿರಲಿವೆ. ಅವುಗಳು ಕೆಲಸ ನಿರ್ವಹಿಸುವ ವಿಧಾನವನ್ನು ನೋಡಬಹುದು. ಮಾದರಿ ಕಟ್ಟಡಗಳು ಇರಲಿದ್ದು, ಕಟ್ಟಡದ ಮೇಲೆ ಬೀಳುವ ಪ್ರತಿಯೊಂದು ಹನಿ ನೀರನ್ನೂ ಸಂಗ್ರಹಿಸುವ ವ್ಯವಸ್ಥೆಯ ಬಗ್ಗೆ ಇಲ್ಲಿ ತೋರಿಸಲಾಗುತ್ತದೆ.

 ಮಳೆ ನೀರು ಸಂಗ್ರಹದ ಬಗ್ಗೆ ಸಹಾಯ ಕೇಂದ್ರ

ಮಳೆ ನೀರು ಸಂಗ್ರಹದ ಬಗ್ಗೆ ಸಹಾಯ ಕೇಂದ್ರ

ಮಳೆ ನೀರನ್ನು ಹೇಗೆ ಉಳಿಸಬೇಕು ಎಂಬುದನ್ನು ಹಲವು ಪ್ರಾತ್ಯಕ್ಷಿಕೆಗಳ ಮೂಲಕ ತೋರಿಸಲಾಗುತ್ತದೆ. ಸಮತಟ್ಟಾದ ಚಾವಣಿ, ಇಳಿಜಾರಿನ ಚಾವಣಿಯಿಂದ ಹರಿಯುವ ನೀರನ್ನು ಹಿಡಿದಿಡುವ ಬಗೆಯನ್ನು ಮಾದರಿಗಳ ಮೂಲಕ ತಿಳಿಸಿಕೊಡಲಾಗುತ್ತದೆ. ಮಳೆ ನೀರು ಸಂಗ್ರಹದ ಬಗ್ಗೆ ಸಹಾಯ ಕೇಂದ್ರ ಇರಲಿದ್ದು, ಮನೆಗಳಲ್ಲಿ ಯಾವ ರೀತಿ ಮಳೆ ನೀರು ಸಂಗ್ರಹ ಘಟಕ ಸ್ಥಾಪಿಸಬೇಕು ಎಂಬ ಪ್ರಶ್ನೆಗಳಿಗೆ ತಜ್ಞರಿಂದ ಉತ್ತರ ಪಡೆದುಕೊಳ್ಳಬಹುದು.

ನೀರಿಗಾಗಿ ಪರಿತಪಿಸುತ್ತಿದ್ದಾರೆ ಮೈಸೂರು ವಿವಿ ಹಾಸ್ಟೆಲ್ ವಿದ್ಯಾರ್ಥಿನಿಯರು

 ಉಪಕರಣಗಳ ಪ್ರದರ್ಶನ

ಉಪಕರಣಗಳ ಪ್ರದರ್ಶನ

ಮಳೆ ನೀರು ಸಂಗ್ರಹ ಘಟಕದ ಯೋಜನಾ ನಕ್ಷೆ ತಂದರೆ ಹೆಚ್ಚಿನ ಸಲಹೆಗಳು ಎಷ್ಟು ವೆಚ್ಚವಾಗಲಿದೆ? ಎಂಬ ಮಾಹಿತಿ ಪಡೆದುಕೊಳ್ಳಬಹುದು. ಮಳೆ ನೀರು ಸಂಗ್ರಹ ಘಟಕ ಅಳವಡಿಸಿಕೊಳ್ಳಲು ಬೇಕಾದ ಉಪಕರಣಗಳ ಪ್ರದರ್ಶನವೂ ಇರಲಿದೆ.

 ಏನೆಲ್ಲಾ ಸೌಲಭ್ಯಗಳಿವೆ?

ಏನೆಲ್ಲಾ ಸೌಲಭ್ಯಗಳಿವೆ?

ಬೆಂಗಳೂರಿನ ಥೀಮ್‌ ಪಾರ್ಕ್‌ನ ಕಿರು ಸಭಾಂಗಣದಲ್ಲಿ ನೀರಿಗೆ ಸಂಬಂಧಿಸಿದ ಕಿರುಚಿತ್ರಗಳ ಪ್ರದರ್ಶನ ಇದೆ. ವಿವಿಧ ವಯೋವರ್ಗದವರಿಗೆ ಭಿನ್ನ ರೀತಿಯ ಸಿನಿಮಾ ಪ್ರದರ್ಶನ ಮಾಡಲಾಗುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಕ್ಕೆ ಬಯಲು ರಂಗಮಂದಿರ ಕೂಡಾ ಇದೆ. ನಗರದಲ್ಲಿ ತಲೆ ಎತ್ತಲಿರುವ ಪಾರ್ಕ್‌ ಕೂಡಾ ಈ ಸೌಲಭ್ಯಗಳನ್ನು ಒಳಗೊಂಡಿರಲಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
New Theme park will set up in Mysuru about rain harvesting. Mysuru corporation members planned this concept to give a awareness to society.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more