ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಚಿವ ಮುರುಗೇಶ್ ನಿರಾಣಿ ಪ್ರಕಾರ ಹಿಂದಿ ರಾಷ್ಟ್ರೀಯ ಭಾಷೆಯಂತೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಏಪ್ರಿಲ್ 28: ಕನ್ನಡ ಭಾಷೆ ಅಸ್ಮಿತೆಯನ್ನು ಎತ್ತಿಹಿಡಿದಿದ್ದ ನಟ ಸುದೀಪ್ ಟ್ವೀಟ್‌ಗೆ ಇದೀಗ ಸಚಿವ ಮುರುಗೇಶ್ ನಿರಾಣಿ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಹಿಂದಿ ರಾಷ್ಟ್ರೀಯ ಭಾಷೆ ಎಂಬ ಹೇಳಿಕೆ ನೀಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮುರುಗೇಶ್ ನಿರಾಣಿ, ನಾವು ಕನ್ನಡಿಗರು, ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ಆ ಬಳಿಕ ಬೇರೆ ಬೇರೆ ಭಾಷೆಗಳನ್ನು ಕಲಿಯಬೇಕು. ನಾನು ಗ್ರಾಮೀಣ ಪ್ರದೇಶದವನಾಗಿರುವುದರಿಂದ ಕನ್ನಡವನ್ನು ಪ್ರೀತಿಸುತ್ತೇನೆ. ಇತರ ಭಾಷೆಗಳನ್ನೂ ಪ್ರೀತಿಸುತ್ತೇನೆ ಎಂದು ತಿಳಿಸಿದರು.

ಭಾಷಾ ಸಮರ: ಸುದೀಪ್ ಹೇಳಿದ್ದು ಸರಿ ಇದೆ, ಅಜಯ್ ದೇವಗನ್‌ದು ಅಧಿಕ ಪ್ರಸಂಗತನ: ಎಚ್‌ಡಿಕೆಭಾಷಾ ಸಮರ: ಸುದೀಪ್ ಹೇಳಿದ್ದು ಸರಿ ಇದೆ, ಅಜಯ್ ದೇವಗನ್‌ದು ಅಧಿಕ ಪ್ರಸಂಗತನ: ಎಚ್‌ಡಿಕೆ

ಕನ್ನಡ ಪ್ರಾದೇಶಿಕ ಭಾಷೆ, ಹಿಂದಿ ರಾಷ್ಟ್ರೀಯ ಭಾಷೆ. ಹಿಂದಿ ಭಾಷೆಯೂ ನಮಗೆ ಬೇಕು. ಬೇರೆ ಭಾಷೆ ಕಲಿಯುವುದರಲ್ಲಿ ತಪ್ಪೇನಿಲ್ಲ. ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಮಾಡಬೇಕು ಎಂಬುದು ಮೊದಲಿನಿಂದಲೂ ಇದೆ, ಇದರಲ್ಲಿ ತಪ್ಪೇನಿಲ್ಲ. ಹೆಚ್ಚು ಭಾಷೆ ಕಲಿಯುವುದರಿಂದ ನಾವು ಶ್ರೀಮಂತರಾಗುತ್ತೇವೆ ಎಂದರು.

National Language Controversy: Hindi Is Our National Language Says Minister Murugesh Nirani

ಹಿಂದಿ ರಾಷ್ಟ್ರೀಯ ಭಾಷೆ ವಿಚಾರಕ್ಕೆ ಸಂಬಂಧಿಸಿದಂತೆ ನಟ ಸುದೀಪ್ ಮತ್ತು ನಟ ಅಜಯ್ ದೇವಗನ್ ನಡುವಿನ ಟ್ವೀಟ್ ವಾರ್ ಬೆನ್ನಲ್ಲೇ ಕರ್ನಾಟಕದ ಸಚಿವ ಮುರುಗೇಶ್ ನಿರಾಣಿ ಹಿಂದಿ ರಾಷ್ಟ್ರೀಯ ಭಾಷೆ ಎಂದು ಹೇಳಿಕೆ ನೀಡಿದ್ದಾರೆ.

ಇನ್ನು ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಮುರುಗೇಶ್ ನಿರಾಣಿ, ನಮ್ಮಲ್ಲಿ 121 ಜನ ಶಾಸಕರಿದ್ದಾರೆ, ಅದರಲ್ಲಿ ಹೆಚ್ಚಿನ ಜನಕ್ಕೆ ಮಂತ್ರಿಯಾಗುವ ಸಾಮರ್ಥ್ಯ ಇದೆ. ಜಿಲ್ಲಾವಾರು ಹಾಗೂ ಜಾತಿವಾರು ಅಳೆದು ತೂಗಿ ಸ್ಥಾನ ನೀಡುತ್ತಾರೆ. ಅದನ್ನು ನಡೆಸಿಕೊಂಡು ಹೋಗುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು.

Recommended Video

ಪುಷ್ಪಾ ಸಿನಿಮಾದ ಹೂಂ ಅಂಟಾವ ಹಾಡಿಗೆ ಸಖತ್ ಸ್ಟೆಪ್ ಹಾಕಿ ಮಿಂಚಿದ Virat Kohli ವಿಡಿಯೋ ವೈರಲ್ | Oneindia Kannada
National Language Controversy: Hindi Is Our National Language Says Minister Murugesh Nirani

ಸಚಿವ ಸಂಪುಟ ವಿಸ್ತರಣೆ ಸಿಎಂ ಬಸವರಾಜ ಬೊಮ್ಮಾಯಿಯವರ ಪರಮಾಧಿಕಾರ. ರಾಜ್ಯ ಬಿಜೆಪಿ ಅಧ್ಯಕ್ಷರು, ಕೇಂದ್ರದ ನಾಯಕರು ಈ ಬಗ್ಗೆ ತೀರ್ಮಾನ ಮಾಡುತ್ತಾರೆ. ಈಗಾಗಲೇ ನಮಗೆ ಜವಾಬ್ದಾರಿ ನೀಡಿದ್ದಾರೆ. ಸಂಪುಟ ವಿಸ್ತರಣೆ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.

English summary
Minister Murugesh Nirani Supports to Actor Sudeepa Tweet over National Language issue and He also stated that Hindi is the national language.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X