ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅ.7ರಂದು ವಿಚಾರಣೆ ಹೋಗಲು ಸಾಧ್ಯವಿಲ್ಲ, ಕಾಲಾವಕಾಶ ಕೇಳುವೆ: ಡಿಕೆ ಶಿವಕುಮಾರ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಅಕ್ಟೋಬರ್ 3: ಅಕ್ಟೋಬರ್ 7ರಂದು ಯಂಗ್ ಇಂಡಿಯಾ ಹಾಗೂ ನ್ಯಾಷನಲ್ ಹೆರಾಲ್ಡ್ ಪ್ರಕರಣ ವಿಚಾರವಾಗಿ ವಿಚಾರಣೆಗೆ ಬರುವಂತೆ ಜಾರಿ ನಿರ್ದೇಶನಾಲಯದಿಂದ ನೋಟಿಸ್ ಬಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಮೈಸೂರಿನ ವಿಮಾನನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, " ವಿಚಾರಣೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಅಕ್ಟೋಬರ್ 7ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯೊಂದಿಗೆ ಆದಿಚುಂಚನಗಿರಿ ಮಠಕ್ಕೆ ತೆರಳಿ ಸ್ವಾಮೀಜಿ ಭೇಟಿ ನೀಡಬೇಕಿದೆ. ಹೀಗಾಗಿ, ಕೆಲವು ದಿನಗಳ ಕಾಲಾವಕಾಶ ಕೇಳುತ್ತೇನೆ" ಎಂದು ಹೇಳಿದ್ದಾರೆ.

ಭಾರತ್‌ ಜೋಡೋ ಯಾತ್ರೆ: ಕೊರೆಯುವ ಚಳಿಯ ಮಧ್ಯೆಯೂ ಮಂಡ್ಯದತ್ತ ಹೊರಟ ರಾಹುಲ್‌ ಪಾದಯಾತ್ರೆಭಾರತ್‌ ಜೋಡೋ ಯಾತ್ರೆ: ಕೊರೆಯುವ ಚಳಿಯ ಮಧ್ಯೆಯೂ ಮಂಡ್ಯದತ್ತ ಹೊರಟ ರಾಹುಲ್‌ ಪಾದಯಾತ್ರೆ

"ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ಕಿರುಕುಳ ನೀಡಿದ ನಂತರ ನನ್ನನ್ನು ವಿಚಾರಣೆಗೆ ಕರೆದಿದ್ದಾರೆ. ಬೇರೆ ಪ್ರಕರಣಗಳೊಂದಿಗೆ ಇದನ್ನೂ ಸೇರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಯಾತ್ರೆ ನಡುವಯೇ ನನಗೆ ಹಾಗೂ ಸಹೋದರ ಡಿ.ಕೆ.ಸುರೇಶ್‌ಗೆ ನೋಟೀಸ್ ನೀಡಿದ್ದಾರೆ " ಎಂದು ದೂರಿದರು.

ನ್ಯಾಷನಲ್ ಹೆರಾಲ್ಡ್ ಪತ್ರಿಕೆ ವಿಚಾರವಾಗಿ ನಮ್ಮ ಪಾತ್ರ ಇಲ್ಲ ಎಂದು ನಾನು ಎಂದು ಹೇಳುವುದಿಲ್ಲ. ನಮ್ಮ ಸಿದ್ದಾಂತಕ್ಕೆ ಒಪ್ಪಿದ ಪತ್ರಿಕೆ ಇದಕ್ಕಾಗಿ ಅದನ್ನು ಬೆಂಬಲಿಸಿದ್ದೇವೆ. ನಮಗೂ ಅದಕ್ಕೂ ಸಂಬಂಧ ಇಲ್ಲ ಎಂದು ಹೇಳಲು ಸಿದ್ದನಿಲ್ಲ ಎಂದರು.

 ಬಿಜೆಪಿದು ಆರು ತಿಂಗಳ ಆಟ

ಬಿಜೆಪಿದು ಆರು ತಿಂಗಳ ಆಟ

ಡಿಕೆಶಿ ಸಿದ್ದರಾಮಯ್ಯ ಒಂದಾಗಲಿ ಎಂಬ ಬಿಜೆಪಿ ಟೀಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಅವರು, ನಾವು ಒಂದಾಗಿಯೇ ಇದ್ದೇವೆ. ನಮ್ಮ ಮೇಲೇಕೆ ಬಿಜೆಪಿಗೆ ಅತಿಯಾದ ಪ್ರೀತಿ. ನಾವು ವಿರೋಧ ಪಕ್ಷದಲ್ಲಿದ್ದೇವೆ, ಒಂದಾಗಿ ಕೆಲಸ ಮಾಡುತ್ತಿದ್ದೇವೆ.‌ ಮೊದಲು ನೀವು ನಿಮ್ಮ‌ ಪಕ್ಷವನ್ನು ನೋಡಿಕೊಳ್ಳಿ. ನಿಮ್ಮ‌ ಪಕ್ಷದಲ್ಲಿ ಎಷ್ಟು ಗುಂಪಿದೆ. ಯಾವ್ಯಾವ ಸಚಿವರನ್ನ ಒಂದು ಮಾಡಬೇಕಿದೆ ಅದನ್ನು‌‌ನೋಡಿ. ಈಶ್ವರಪ್ಪ ಸಚಿವನಾಗಿಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ. ಈಶ್ವರಪ್ಪ ಬಿ ರಿಪೋರ್ಟ್ ಬೇರೆ ಬರೆಸಿಕೊಂಡು ಕಾಯುತ್ತಿದ್ದಾರೆ. ಮೊದಲು ಅವರನ್ನು ಸಮಾಧಾನ ಮಾಡಿಕೊಳ್ಳಿ. ನಿಮ್ಮದು ಇನ್ನೇನಿದ್ದರು 6 ತಿಂಗಳ ಆಟ ನಡೆಸಿ ಎಂದು ತಿರುಗೇಟು ನೀಡಿದರು.

Sonia Gandhi Karnataka Visit : ಕರ್ನಾಟಕಕ್ಕೆ ಇಂದು ಸೋನಿಯಾಗಾಂಧಿ; ಅ.6ರಂದು ಭಾರತ್ ಜೋಡೊ ಯಾತ್ರೆಯಲ್ಲಿ ಭಾಗಿSonia Gandhi Karnataka Visit : ಕರ್ನಾಟಕಕ್ಕೆ ಇಂದು ಸೋನಿಯಾಗಾಂಧಿ; ಅ.6ರಂದು ಭಾರತ್ ಜೋಡೊ ಯಾತ್ರೆಯಲ್ಲಿ ಭಾಗಿ

 ಅಪರೇಷನ್ ಕಮಲದಿದಿಂದ ಬಿಜೆಪಿಗೆ ಅಧಿಕಾರ

ಅಪರೇಷನ್ ಕಮಲದಿದಿಂದ ಬಿಜೆಪಿಗೆ ಅಧಿಕಾರ

ರಾಹುಲ್ ಗಾಂಧಿ ಬಂದ ಕಡೆ ಕಾಂಗ್ರೆಸ್ ಗೆಲ್ಲಲ್ಲ ಎಂಬ ಬಿಜೆಪಿ ಟೀಕೆ ವಿಚಾರದ ಬಗ್ಗೆ ಮಾತನಾಡಿದ ಡಿಕೆಶಿ, ಬಿಜೆಪಿ ಮುಖಂಡರು ಯಾವಾಗ ಭವಿಷ್ಯ ಹೇಳುವುದನ್ನು ಕಲಿತರು ಗೊತ್ತಿಲ್ಲ. ಯೋಗಕ್ಕಿಂತ ಯೋಗಕ್ಷೇಮ ಮುಖ್ಯ. ಅಪರೇಷನ್ ಕಮಲದ ಯೋಗದಿಂದ ಅಧಿಕಾರಕ್ಕೆ ಬಂದವರು ಕೊರೊನಾ ಸಂದರ್ಭದಲ್ಲಿ ಜನರ ಯೋಗಕ್ಷೇಮ ವಿಚಾರಿಸಲಿಲ್ಲ. ಇನ್ನಾರು ತಿಂಗಳು ಅವರು ಸುಖವಾಗಿರಲಿ ಎಂದರು.

 ಮಡಿಕೇರಿಯಲ್ಲಿ ವಿಶ್ರಾಂತಿ

ಮಡಿಕೇರಿಯಲ್ಲಿ ವಿಶ್ರಾಂತಿ

ರಾಹುಲ್ ಗಾಂಧಿಯವರ ಸಾರಥ್ಯದ ಕಾಂಗ್ರೆಸ್‌ನ ಭಾರತ ಐಕ್ಯತಾ ಯಾತ್ರೆ ಕರ್ನಾಟಕದಲ್ಲಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಸೋಮವಾರ ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿದೆ. ಸೋಮವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಆಗಮಿಸಿದ್ದಾರೆ. ಆದರೆ, ಸೋನಿಯಾ ಗಾಂಧಿ ಸುದ್ದಿಗಾರರೊಂದಿಗೆ ಮಾತನಾಡಲಿಲಿಲ್ಲ. ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಇಲ್ಲಿನ ವಾತಾವರಣನ ನಂತರ ಸೋನಿಯಾ ಗಾಂಧಿ ಅವರ ಹೆಲಿಕಾಪ್ಟರ್ ಪ್ರಯಾಣ ನಿರ್ಧಾರವಾಗುತ್ತದೆ. ಇಲ್ಲಿಂದ‌ ಮಡಿಕೇರಿಗೆ ರಸ್ತೆ ಮೂಲಕವೋ ಅಥವಾ ಹೆಲಿಕಾಪ್ಟರ್ ಮೂಲಕ ಹೋಗಬೇಕೋ ಎಂಬುದರ ಬಗ್ಗೆ ಇನ್ನೂ ಚರ್ಚೆ ಆಗಿಲ್ಲ, ಸದ್ಯ ಮೈಸೂರಿನ‌ ವಿಂಡ್ ಫ್ಲವರ್ ರೆಸಾರ್ಟ್ ನಲ್ಲಿ ಸೋನಿಯಾಗಾಂಧಿ ಇರಲು ಸಿದ್ದತೆ‌ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.

 ಪಾದಯಾತ್ರೆಯಲ್ಲಿ ಭಾಗಿ

ಪಾದಯಾತ್ರೆಯಲ್ಲಿ ಭಾಗಿ

ಮೈಸೂರಿಗೆ ಆಗಮಿಸಿರುವ ಸೋನಿಯಾ ಎರಡು ದಿನ ಮಡಿಕೇರಿಯಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ. ಅಲ್ಲಿಗೆ ಯಾವ ಕಾರ್ಯಕರ್ತ ಮುಖಂಡರು ಹೋಗಬೇಡಿ. ಯಾವುದೇ ಹಾರಗಳನ್ನು ಹಾಕಲು ಅವಕಾಶ ಇಲ್ಲ. ಅಲ್ಲಿ ಪಕ್ಷದ ಯಾವುದೇ ಸಭೆ ಇರುವುದಿಲ್ಲ. ಹಬ್ಬದ ಹಿನ್ನೆಲೆ ರಾಹುಲ್ ಗಾಂಧಿ ತಮ್ಮ ಕುಟುಂಬದ ಜೊತೆ ಸಮಯ ಕಳೆಯಲು ಮಡಿಕೇರಿಗೆ ಹೋಗುತ್ತಾರೆ. ಪ್ರಿಯಾಂಕಾ ಗಾಂಧಿ ಪಾದಯಾತ್ರೆಗೆ ಭಾಗಿಯಾಗುತ್ತಾರೆ ದಿನಾಂಕ ನಿಗಧಿಯಾಗಿಲ್ಲ. ಅಕ್ಟೋಬರ್ 5 ರಂದು ಮೈಸೂರಿಗೆ ಮಲ್ಲಿಕಾರ್ಜುನ ಖರ್ಗೆ ಬರುತ್ತಾರೆ. 6 ರಿಂದ ಅವರು ಪಾದಯಾತ್ರೆಯಲ್ಲಿ ಭಾಗಿಯಾಗುತ್ತಾರೆ ಎಂದು ತಿಳಿಸಿದರು.

English summary
KPCC president DK Shivakumar said that the Enforcement Directorate sent a notice for a hearing on the National Herald case on October 7, but I will ask more time to appear to ED,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X