• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಒಂದು ತಿಂಗಳಲ್ಲೇ ಕೋಟ್ಯಾಧೀಶ್ವರನಾದ ನಂಜುಂಡೇಶ್ವರ

By ಮೈಸೂರು ಪ್ರತನಿಧಿ
|

ಮೈಸೂರು, ಮಾರ್ಚ್ 3: ಕೊರೊನಾ ಲಾಕ್‌ ಡೌನ್‌ ನಂತರ ನಂಜನಗೂಡಿನ ನಂಜುಂಡೇಶ್ವರ ದೇವಾಲಯಕ್ಕೆ ಆಗಮಿಸುವ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಭಕ್ತರು ನಂಜುಂಡೇಶ್ವರನಿಗೆ ನೀಡುತ್ತಿರುವ ಕಾಣಿಕೆ ಮೊತ್ತದಲ್ಲೂ ಏರಿಕೆ ದಾಖಲಾಗಿದ್ದು, ಒಟ್ಟು 1,11,64,033 ಕೋಟಿ ರೂಪಾಯಿ ಸಂಗ್ರಹಿಸುವ ಮೂಲಕ ನಂಜುಂಡೇಶ್ವರ ಒಂದೇ ತಿಂಗಳಿನಲ್ಲಿ ಮತ್ತೆ ಕೋಟ್ಯಧಿಪತಿಯಾಗಿದ್ದಾನೆ.

ಮಂಗಳವಾರ (ಮಾ.2) ರಂದು ನಂಜನಗೂಡಿನ ತಹಶೀಲ್ದಾರ್ ಶರ್ಮಿಳಾ ದತ್ತಿ ಅವರ ಸಮ್ಮುಖದಲ್ಲಿ ನಂಜುಂಡೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಸಿಬ್ಬಂದಿ, ನಂಜನಗೂಡಿನ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಿಬ್ಬಂದಿಗಳು 24 ಹುಂಡಿಗಳಲ್ಲಿನ ಹಣವನ್ನು ಎಣಿಕೆ ಮಾಡಿದ್ದಾರೆ.

ನಂಜುಡೇಶ್ವರನಿಗೆ ಒಂದು ತಿಂಗಳಲ್ಲೇ ಕೋಟಿ ರುಪಾಯಿಗೂ ಹೆಚ್ಚು ಕಾಣಿಕೆನಂಜುಡೇಶ್ವರನಿಗೆ ಒಂದು ತಿಂಗಳಲ್ಲೇ ಕೋಟಿ ರುಪಾಯಿಗೂ ಹೆಚ್ಚು ಕಾಣಿಕೆ

ವಿವಿಧ ಮುಖಬೆಲೆಯ 3,24,550 ರೂ‌.ನಾಣ್ಯ ಸೇರಿದಂತೆ 1,11,64,033 ಕೋಟಿ ರೂಪಾಯಿ, ಅಲ್ಲದೇ 105 ಗ್ರಾಂ ಚಿನ್ನ, 2 ಕೆಜಿ 250 ಗ್ರಾಂ ಬೆಳ್ಳಿ, 6 ವಿದೇಶಿ ಕರೆನ್ಸಿಗಳು,‌ ನಿಷೇಧಿತ ನೋಟುಗಳಾದ 1 ಸಾವಿರ ಮುಖಬೆಲೆಯ 11 ನೋಟು, 500 ಮುಖಬೆಲೆ 87 ನೋಟುಗಳನ್ನು ಭಕ್ತರು ಹಾಕಿದ್ದಾರೆ.

ಕಳೆದು ತಿಂಗಳು ಹುಂಡಿ ಏಣಿಕೆ ಮಾಡಿದಾಗಲೂ ನಂಜುಂಡೇಶ್ವರನ ಹುಂಡಿಯಲ್ಲಿ ಒಂದು ಕೋಟಿಗೂ ಮಿಕ್ಕಿದ ಹಣ ಸಂಗ್ರಹವಾಗಿತ್ತು. ಮುಜರಾಯಿ ಇಲಾಖೆಗೆ ಈ ದೇವಾಲಯ ಒಳಪಟ್ಟಿದೆ. ತಹಶೀಲ್ದಾರ ಅವರ ನೇತೃತ್ವದಲ್ಲಿ ಹುಂಡಿ ಕಾಣಿಕೆ ಎಣಿಕಾ ಮಾಡಲಾಯಿತು.

English summary
The number of devotees arriving at Nanjundeshwara Temple in Nanjanagud after the Corona lockdown is increasing day by day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X