ನಂಜನಗೂಡಲ್ಲಿ ಗೊಂದಲ ಮೂಡಿಸಿದ ಚುನಾವಣಾ ಆಯೋಗದ ಸುತ್ತೋಲೆ
ನಂಜನಗೂಡು, ಏಪ್ರಿಲ್ 9: ಇವಿಎಂ ಯಂತ್ರವಿದ್ದರೂ ವೋಟಿನ ಕಾಗದವನ್ನು ವೋಟಿನ ಪೆಟ್ಟಿಗೆಯಲ್ಲೇ ಹಾಕಿ ಎಂಬ ಚುನಾವಣಾ ಆಯೋಗದ ಎಚ್ಚರಿಕೆಯ ಫಲಕ ಮತದಾರರಲ್ಲಿ ಗೊಂದಲ ಮೂಡಿಸಿದೆ.
ದೇವನೂರು ಹಾಗೂ ಗೋಳೂರು ಗ್ರಾಮಗಳಲ್ಲಿನ ಮತಗಟ್ಟೆಗಳಲ್ಲಿ ಚುನಾವಣಾ ಆಯೋಗದ ಈ ಎಚ್ಚರಿಕೆಯ ನೋಟೀಸ್ ಕಂಡು ಬಂದಿದ್ದು, ಚುನಾವಣಾ ಆಯೋಗವೇ ಖುದ್ದು ಗೊಂದಲದಲ್ಲಿರುವಂತೆ ಕಂಡು ಬರುತ್ತದೆ. ನೋಟೀಸ್ ನಲ್ಲಿ ಏ.9ರ ತಾರೀಕಿನ ಸೀಲ್ ಜತೆ ಸಹಿಯೂ ಕಂಡು ಬಂದಿದ್ದು, ಗ್ರಾಮಸ್ಥರಲ್ಲಿ ಗೊಂದಲ ಮೂಡಿಸಿದೆ.[LIVE ಗುಂಡ್ಲುಪೇಟೆ: ಮತದಾರರಲ್ಲಿ ಉತ್ಸಾಹ, ಶೇಕಡಾ 17 ಮತದಾನ]

ಮತಗಟ್ಟೆಗೆ ಆಗಮಿಸಿದ ಮತದಾರರು ಈ ಸುತ್ತೋಲೆಯನ್ನು ನೋಡಿ ಒಮ್ಮೆ ಗೊಂದಲಕ್ಕೆ ಒಳಗಾದರು. ಬಳಿಕ ಇವಿಎಂ ಯಂತ್ರವಿದೆ ಅದರ ಮೂಲಕವೇ ಮತ ಚಲಾಯಿಸಿ ಎಂದು ತಿಳಿಸಿದಾಗ ಗೊಂದಲ ನಿವಾರಣೆಯಾಗಿದೆ.[LIVE ಗುಂಡ್ಲುಪೇಟೆ: ಮತದಾರರಲ್ಲಿ ಉತ್ಸಾಹ, ಶೇಕಡಾ 17 ಮತದಾನ]
ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸುವ ಚುನಾವಣಾ ಆಯೋಗ ಈಗ ಯಾಕೆ ಎಡವಟ್ಟು ನೋಟೀಸು ಲಗತ್ತಿಸಿದೆ, ಖುದ್ದು ಚುನಾವಣಾ ಆಯೋಗವೇ ಗೊಂದಲದಲ್ಲಿ ಬಿದ್ದಿದೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.












Click it and Unblock the Notifications