Get Updates
Get notified of breaking news, exclusive insights, and must-see stories!

Nanjangud Constituency: ದಿವಂಗತ ಆರ್‌. ಧ್ರುವನಾರಾಯಣ್‌ ಪುತ್ರ ದರ್ಶನ್‌ಗೆ ಟಿಕೆಟ್ ಸಾಧ್ಯತೆ- ಇನ್‌ಸೈಡ್‌ ರಿಪೋರ್ಟ್

ಮೈಸೂರು, ಮಾರ್ಚ್‌ 13: ಅಕಾಲ ಮರಣ ಹೊಂದಿದ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಕಾರ್ಯಾಧ್ಯಕ್ಷ ಆರ್‌ ಧ್ರುವನಾರಾಯಣ ಅವರ ಸಾವು ಮೈಸೂರು, ಚಾಮರಾಜನಗರದ ಕಾಂಗ್ರೆಸ್‌ ಕಾರ್ಯಕರ್ತರಿಗೆ ಬಹುದೊಡ್ಡ ಆಘಾತ ನೀಡಿದೆ. ನಂಜನಗೂಡು ವಿಧಾನಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಆರ್ ಧ್ರುವನಾರಾಯಣ ಅವರ ನಿಧನದಿಂದ ಈಗ ಕ್ಷೇತ್ರದಲ್ಲಿ ಅವರ ಪುತ್ರ ದರ್ಶನಗೆ ಕಾಂಗ್ರೆಸ್‌ ಟಿಕೆಟ್‌ ಘೋಷಣೆ ಮಾಡಬೇಕು ಎಂಬ ಆಗ್ರಹಗಳು ಹೆಚ್ಚಾಗಿದ್ದು, ಟಿಕೆಟ್‌ ದರ್ಶನ್‌ಗೆ ಸಿಗುವ ಸಾಧ್ಯತೆ ಇದೆ.

ಇನ್ನೇನು ಕೆಲವೇ ದಿನಗಳಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ನಿಂದ ಅಭ್ಯರ್ಥಿಗಳ ಘೋಷಣೆಯಾಗುವ ಸಾಧ್ಯತೆ ಇದೆ. ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ತರಲೇಬೇಕೆಂಬ ಕಾಂಗ್ರೆಸ್‌ ನಾಯಕರ ಹಠದಿಂದ ಪ್ರಚಾರದ ಭರಾಟೆಯೂ ಜೋರಾಗಿದೆ. ಈಗಾಗಲೇ ಪೋಲ್‌ ಸಮೀಕ್ಷೆಗಳು ಕಾಂಗ್ರೆಸ್‌ಗೆ ಬಹುಮತ ಬರುತ್ತವೆ ಎಂದು ಅಂದಾಜಿಸಿವೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿದ್ದ ಆರ್‌ ಧ್ರುವನಾರಾಯಣ ಅವರು ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಪ್ರಚಾರ ಆರಂಭಿಸಿದ್ದರು. ನಿರ್ಣಯ ತೆಗೆದುಕೊಳ್ಳುವ ಸ್ಥಾನದಲ್ಲಿದ್ದ ಅವರಿಗೆ ಹೈಕಮಾಂಡ್‌ ಟಿಕೆಟ್‌ ಇಲ್ಲ ಎಂದು ಹೇಳುವ ಸಾಧ್ಯತೆಯೂ ಇರಲಿಲ್ಲ.

ಮಾರ್ಚ್‌ 11ರಂದು ಆರ್‌. ಧ್ರುವನಾರಾಯಣ್‌ ನಿಧನ

ಮಾರ್ಚ್‌ 11ರಂದು ಆರ್‌. ಧ್ರುವನಾರಾಯಣ್‌ ನಿಧನ

ಶನಿವಾರ ಮಾರ್ಚ್‌ 11ರಂದು ಬೆಳಗ್ಗೆ ಹೃದಯಾಘಾತದಿಂದ ಮಾಜಿ ಸಂಸದರೂ ಆಗಿದ್ದ ಆರ್‌ ಧ್ರುವನಾರಾಯಣ ಅವರು ನಿಧನರಾದರು. ಇದು ಕಾಂಗ್ರೆಸ್‌ ಕಾರ್ಯಕರ್ತರಿಗೆ ಬಹುದೊಡ್ಡ ಆಘಾತವನ್ನು ನೀಡಿತು. ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಾಜಿ ಲೋಕೋಪಯೋಗಿ ಸಚಿವ ಎಚ್‌.ಸಿ. ಮಹದೇವಪ್ಪ ಅವರೂ ಕೂಡ ತಮ್ಮ ಪ್ರಯತ್ನವನ್ನು ಮುಂದುವರೆಸಿದ್ದರು. ಅವರು ತಮ್ಮ ಸ್ವಂತ ಕ್ಷೇತ್ರವಾದ ಟಿ ನರಸೀಪುರ ವಿಧಾನಸಭಾ ಕ್ಷೇತ್ರವನ್ನು ತಮ್ಮ ಪುತ್ರ ಸುನೀಲ್‌ ಬೋಸ್‌ಗೆ ಬಿಟ್ಟುಕೊಟ್ಟು ತಾವು ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಟಿಕೆಟ್‌ ಬಯಸಿದ್ದರು. ಈಗ ಧ್ರುವನಾರಾಯಣ ಅವರ ನಿಧನದಿಂದ ಅವರಿಗೆ ಟಿಕೆಟ್‌ ಸಿಗಬಹುದಿತ್ತು.

ವರಿಷ್ಠರಿಗೆ ಕಾರ್ಯಕರ್ತರಿಂದ ಆಪಾರ ಒತ್ತಡ

ವರಿಷ್ಠರಿಗೆ ಕಾರ್ಯಕರ್ತರಿಂದ ಆಪಾರ ಒತ್ತಡ

ಆದರೆ ಆರ್‌. ಧ್ರುವನಾರಾಯಣ ಅವರ ನಿಧನದಿಂದ ಮುಂದಿನ ಅಭ್ಯರ್ಥಿಯಾಗಿ ಅವರ ಪುತ್ರನೇ ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ನಿಲ್ಲಬೇಕು ಎಂದು ಕಾರ್ಯಕರ್ತರು ಆಪಾರ ಒತ್ತಡ ತಂದಿದ್ದಾರೆ. ಹೀಗಾಗಿ ದರ್ಶನ್‌ಗೆ ಟಿಕೆಟ್ ನಿಖರವಾಗಿ ಸಿಗುತ್ತದೆ ಎಂದು ಹೇಳಲಾಗಿದೆ. ಆರ್‌. ಧ್ರುವನಾರಾಯಣ್ ಅವರ ನಿಧನ ಸಂದರ್ಭದಲ್ಲಿ ಸ್ಥಳಕ್ಕೆ ಹೋಗಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್‌, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಧ್ರುವನಾರಾಯಣ ಅವರ ಮೈಸೂರಿನ ವಿಜಯನಗರದ ನಿವಾಸ ಹಾಗೂ ಅವರ ಸ್ವಗ್ರಾಮ ಹೆಗ್ಗವಾಡಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಬಹಿರಂಗವಾಗಿ ಧ್ರುವನಾರಾಯಣ ಅವರ ಪುತ್ರ ದರ್ಶನ್‌ಗೆ ಟಿಕೆಟ್‌ ನೀಡಬೇಕು ಎಂದು ಕೂಗಿ ಹಾಕಿ ಆಗ್ರಹಪಡಿಸುತ್ತಲೇ ಇದ್ದರು.

ದರ್ಶನ್‌ಗೆ ಕಾಂಗ್ರೆಸ್‌ ಟಿಕೆಟ್‌ ಪಕ್ಕ

ದರ್ಶನ್‌ಗೆ ಕಾಂಗ್ರೆಸ್‌ ಟಿಕೆಟ್‌ ಪಕ್ಕ

ಎಚ್‌ಸಿ ಮಹದೇವಪ್ಪ ಟಿಕೆಟ್‌ ಆಕಾಂಕ್ಷಿಯಾಗಿದ್ದರೂ ಈಗ ಕಾಂಗ್ರೆಸ್‌ ವರಿಷ್ಠರಿಗೂ ಬೇರೆ ದಾರಿ ಕಂಡಂತೆ ಇಲ್ಲ. ಹೀಗಾಗಿ ದರ್ಶನ್‌ಗೆ ಕಾಂಗ್ರೆಸ್‌ ಟಿಕೆಟ್‌ ಘೋಷಣೆ ಮಾಡುವ ಸಾಧ್ಯತೆ ಇದೆ. ಈಗಾಗಲೇ ಕಾಂಗ್ರೆಸ್‌ ಕಾರ್ಯಕರ್ತರು ದರ್ಶನ್‌ ಪರ ಪ್ರಚಾರಕ್ಕೂ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಎರಡು ದಿನಗಳ ಹಿಂದೆ ಕಾಂಗ್ರೆಸ್‌ ಕಾರ್ಯಕರ್ತರು ಮಾತನಾಡುತ್ತಾ ಆರ್ ಧ್ರುವನಾರಾಯಣ ಅವರ ನಿಧನದಿಂದ ನಮಗೆ ತೀವ್ರ ದುಃಖವಾಗಿದೆ. ಈಗ ಕಾಂಗ್ರೆಸ್‌ ಕಾರ್ಯಕರ್ತರು ಧ್ರುವನಾರಾಯಣ್‌ ಅವರ ಮಗ ದರ್ಶನ್‌ಗೆ ಟಿಕೆಟ್‌ ಕೊಡಲೇಬೇಕು ಇಲ್ಲದಿದ್ದರೆ ಕಾಂಗ್ರೆಸ್‌ ಅನ್ನು ಚಾಮರಾಜನಗರ ಹಾಗೂ ಮೈಸೂರು ಈ ಎರಡು ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಅನ್ನು ಸೋಲಿಸಲು ಮುಂದಾಗುತ್ತೇವೆ ಎಂದು ಕೂಡ ಹೇಳಿಕೆ ನೀಡಿದ್ದಾರೆ.

ದರ್ಶನ್‌ ಹಾಗೂ ಧೀರನ್‌ ಎಂಬ ಇಬ್ಬರು ಗಂಡು ಮಕ್ಕಳು

ದರ್ಶನ್‌ ಹಾಗೂ ಧೀರನ್‌ ಎಂಬ ಇಬ್ಬರು ಗಂಡು ಮಕ್ಕಳು

ಆರ್‌ ಧ್ರುವನಾರಾಯಣ್‌ ಅವರಿಗೆ ದರ್ಶನ್‌ ಹಾಗೂ ಧೀರನ್‌ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಧೀರನ್‌ ಎಂಎಸ್‌ಸಿ ಮುಗಿಸಿದ್ದಾರೆ. ತಂದೆಯಂತೆ ಮೃಧುವ್ಯಕ್ತಿತ್ವದ ದರ್ಶನ್ ಲಂಡನ್‌ನಲ್ಲಿ ಎಲ್‌ಎಲ್‌ಬಿ ಮುಗಿಸಿದ್ದು, ಬೆಂಗಳೂರಿನಲ್ಲಿ ವಕೀಲಿ ವೃತ್ತಿ ಅಭ್ಯಾಸ ಮಾಡುತ್ತಿದ್ದಾರೆ. ರಾಜಕೀಯದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳದ ದರ್ಶನ್‌ ವಕೀಲಿ ವೃತ್ತಿಯನ್ನು ಕಲಿಯುತ್ತಿದ್ದಾರೆ. ಆದರೆ ತಾವು ರಾಜಕೀಯ ಪ್ರವೇಶ ಮಾಡುವುದರ ಕುರಿತು ಅವರು ಈವರೆಗೂ ತಿಳಿಸಿಲ್ಲ. ತಂದೆ ಆಕಾಲಿಕ ನಿಧನದಿಂದ ಮಾನಸಿಕವಾಗಿ ನೊಂದಿರುವ ಅವರು ಚೇತರಿಸಿಕೊಳ್ಳಲು ಸ್ವಲ್ಪ ಸಮಯಬೇಕಾಗುತ್ತದೆ. ಆದರೆ ಈಗ ಅವರಿಗೆ ಸಮಯ ಕಡಿಮೆ ಇದೆ ಎಂದು ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.

ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ ಪ್ರಸಾದ್‌

ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ ಪ್ರಸಾದ್‌

ಧ್ರುವನಾರಾಯಣ್ ಅವರು ಚಾಮರಾಜ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ವಿ ಶ್ರೀನಿವಾಸ್‌ ಪ್ರಸಾದ್‌ ಅವರ ಎದುರು ಅವರು ಸೋತಿದ್ದರು. ಪ್ರಸಾದ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರೊಂದಿಗಿನ ಜಗಳದಿಂದ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ನಿಂತು ಧ್ರುವನಾರಾಯಣ್‌ ಅವರನ್ನು ಸೋಲಿಸಿದ್ದರು. ಸಿದ್ದರಾಮಯ್ಯ ಸಂಪುಟದಲ್ಲಿ ಕಂದಾಯ ಸಚಿವರೂ ಆಗಿದ್ದ ಪ್ರಸಾದ್‌ ಅವರನ್ನು ಸಿದ್ದರಾಮಯ್ಯ ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂಬ ಮಾತು ಕೇಳಿ ಬಂದಿತ್ತು. ಹೀಗಾಗಿ ಕಾಂಗ್ರೆಸ್‌ ತೊರೆದು ಪ್ರಸಾದ್‌ ಬಿಜೆಪಿ ಸೇರಿ ಗೆದ್ದಿದ್ದರು.

ಆರ್‌ ಧ್ರುವನಾರಾಯಣ್ ಅವರಿಗೆ ಬೆಂಬಲ

ಆರ್‌ ಧ್ರುವನಾರಾಯಣ್ ಅವರಿಗೆ ಬೆಂಬಲ

ಆದರೆ ಆರ್‌ ಧ್ರುವನಾರಾಯಣ್‌ ಮೂಲ ಕಾಂಗ್ರೆಸ್ಸಿಗರಾಗಿದ್ದು, ಪ್ರಸಾದ್‌ ಅವರೊಂದಿಗೆ ಚೆನ್ನಾಗಿಯೇ ಇದ್ದರು. ಕಾಂಗ್ರೆಸ್‌ನಲ್ಲಿ ಧ್ರುವನಾರಾಯಣ್‌ ಅವರ ಬೆಳವಣಿಗೆಗೂ ಅವರು ಸಹಾಯ ಮಾಡಿದ್ದರು. ಈ ಮಾತನ್ನು ಸ್ವತಃ ಪ್ರಸಾದ್‌ ಅವರೇ ಹೇಳಿದ್ದರು. ಸದ್ಯ ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಶ್ರೀನಿವಾಸ್‌ ಪ್ರಸಾದ್‌ ಅವರ ಅಳಿಯ ಹರ್ಷವರ್ಧನ್‌ ಅವರು ಬಿಜೆಪಿಯಿಂದ ಶಾಸಕರಾಗಿದ್ದಾರೆ. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಅವರು ನಿಲ್ಲುವುದು ನಿಶ್ಚಿತವಾಗಿದೆ. ಆದರೆ ಕಾಂಗ್ರೆಸ್‌ ಕಾರ್ಯಕರ್ತರ ಭರ್ಜರಿ ಪ್ರಚಾರ ಅಲ್ಲದೆ ಕ್ಷೇತ್ರದಲ್ಲಿ ನಿರ್ಣಯಕ ಮತ ಸಮುದಾಯಗಳಾದ ದಲಿತ ಹಾಗೂ ಲಿಂಗಾಯತ ಸಮುದಾಯದ ಮತಗಳು ಆರ್‌ ಧ್ರುವನಾರಾಯಣ್ ಅವರಿಗೆ ಬೆಂಬಲ ಇತ್ತು ಎನ್ನಲಾಗಿದ್ದು, ಈಗ ಅವು ಮಗ ದರ್ಶನ್‌ ನಿಂತರೆ ಅವರಿಗೆ ಅಂದರೆ ಕಾಂಗ್ರೆಸ್‌ ಪಕ್ಷಕ್ಕೆ ಬರುವುದು ಸಹಜವೆಂದು ಭಾವಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+