ತುಂಬಿ ಹರಿದ ಕಬಿನಿ; ನಂಜನಗೂಡಿನ ಸುತ್ತೂರು ಸೇತುವೆ ಮುಳುಗಡೆ
ಮೈಸೂರು, ಆಗಸ್ಟ್ 07: ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯದಿಂದ ಕಬಿನಿ ನದಿಗೆ ಹೆಚ್ಚಿನ ನೀರು ಹರಿಬಿಟ್ಟಿದ್ದರಿಂದ ನಂಜನಗೂಡಿನ ಸುತ್ತೂರು ಸೇತುವೆ ಮುಳುಗಡೆಯಾಗಿದೆ.
ಸುತ್ತೂರು ಸೇತುವೆಯು ಇದೀಗ ಮುಳುಗಡೆಯಾಗಿದ್ದು, ಸೇತುವೆಯ ಮೇಲೆ ನೀರು ಹರಿಯುತ್ತಿದೆ. ಹೀಗಾಗಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಕೇರಳದ ವಯನಾಡಿನಲ್ಲಿ ಭಾರೀ ಮಳೆ ಬೀಳುತ್ತಿದ್ದು, ಇದರಿಂದಾಗಿ ಜಲಾಶಯಕ್ಕೆ 42 ಸಾವಿರ ಕ್ಯೂಸೆಕ್ ಗೂ ಅಧಿಕ ನೀರು ಹರಿದು ಬರುತ್ತಿದೆ. 50 ಸಾವಿರ ಕ್ಯೂಸೆಕ್ ಗೂ ಅಧಿಕ ನೀರನ್ನು ನದಿಗೆ ಬಿಡಲಾಗಿದೆ.
ಕರ್ನಾಟಕದಿಂದ ಹರಿದ ಕಾವೇರಿ, ಧರ್ಮಪುರಿಯಲ್ಲಿ ಪ್ರವಾಹ ಎಚ್ಚರಿಕೆ
ಜಲಾಶಯಕ್ಕೆ ಒಳ ಮತ್ತು ಹೊರ ಹರಿವು ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಗುಂಡ್ಲು ನದಿಯೂ ತುಂಬಿ ಹರಿಯುತ್ತಿದ್ದು ಹಳ್ಳದ ಕೇರಿಯ ಹತ್ತಾರು ಬಡಾವಣೆಗೆ ನೀರು ನುಗ್ಗಿದೆ. ಚಾಮರಾಜನಗರ ರಸ್ತೆಯಲ್ಲಿರುವ ಪರಶುರಾಮ ದೇವಾಲಯವು ಭಾಗಶಃ ಮುಳುಗಡೆಯಾಗಿದೆ.