• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರು-ವಾರಣಾಸಿ-ಮೈಸೂರು ರೈಲು ವೇಳಾಪಟ್ಟಿ

|

ಮೈಸೂರು, ಡಿ. 25 : ಮೈಸೂರು ಜನರ ಬಹುದಿನದ ಬೇಡಿಕೆ ಈಡೇರಿದೆ. ಮೈಸೂರು-ವಾರಣಾಸಿ-ಮೈಸೂರು ಬೈ-ವೀಕ್ಲಿ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ಸಿಕ್ಕಿದೆ. ಮಂಗಳವಾರ ಮತ್ತು ಗುರುವಾರ ಈ ರೈಲು ಸಂಚರಿಸಲಿದೆ.

ಮೈಸೂರು ರೈಲು ನಿಲ್ದಾಣದಲ್ಲಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಗುರುವಾರ ಬೆಳಗ್ಗೆ 7.20ಕ್ಕೆ ಮೈಸೂರು-ವಾರಣಾಸಿ ರೈಲಿಗೆ ಹಸಿರು ನಿಶಾನೆ ತೋರಿಸಿದ್ದಾರೆ. ಡಿ.25ರಿಂದ ಮೈಸೂರು ವಾರಣಾಸಿ ರೈಲು ಸೇವೆ ಆರಂಭವಾಗಿದ್ದು, ಡಿ.27ಕ್ಕೆ ವಾರಣಾಸಿ-ಮೈಸೂರು ರೈಲು ಸೇವೆ ಆರಂಭವಾಗಲಿದೆ.

ಪ್ರತಿ ಮಂಗಳವಾರ ಮತ್ತು ಗುರುವಾರ ಈ ನೂತನ ರೈಲು ಸಂಚಾರ ನಡೆಸಲಿದೆ. ಈ ಎಕ್ಸ್‌ಪ್ರೆಸ್‌ ರೈಲಿನಲ್ಲಿ 1 ಎಸಿ 2 ಟೈರ್, 1 ಎಸಿ 3 ಟೈರ್, 6 ದ್ವಿತೀಯ ದರ್ಜೆ ಸ್ಲೀಪರ್, 6 ಸಾಮಾನ್ಯ ದ್ವಿತೀಯ ದರ್ಜೆ, 2 ದ್ವಿತೀಯ ದರ್ಜೆ ಲಗೇಜ್ ಕಮ್ ಬ್ರೇಕ್ ವ್ಯಾನ್ಸ್ ಕಮ್ ಡಿಸೇಬಲ್ಡ್ ಸೇರಿ ಒಟ್ಟು 16 ಬೋಗಿಗಳಿವೆ. [ಹುಬ್ಬಳ್ಳಿ-ಮುಂಬೈ ನಡುವೆ ಪ್ರತಿದಿನ ರೈಲು ಸೇವೆ]

ರೈಲಿನ ವೇಳಾಪಟ್ಟಿ : ಮೈಸೂರು-ವಾರಣಾಸಿ ರೈಲು (16229) ಪ್ರತಿ ಮಂಗಳವಾರ ಮತ್ತು ಗುರುವಾರ ಬೆಳಗ್ಗೆ 7.20ಕ್ಕೆ ಮೈಸೂರಿನಿಂದ ಹೊರಟು ಮಂಡ್ಯ, ಕೆಂಗೇರಿ, ಬೆಂಗಳೂರು, ಯಶವಂತಪುರ, ತುಮಕೂರು, ಅರಸೀಕೆರೆ, ಕಡೂರು, ಬಳ್ಳಾರಿ, ಗುಂತಕಲ್, ಅದೋನಿ, ಮತ್ರಾಲಯಂ ರಸ್ತೆ, ರಾಯಚೂರು, ಕೃಷ್ಣಾ, ಯಾದಗಿರಿ, ವಾಡಿ, ಕಲಬುರಗಿ, ಸೊಲ್ಲಾಪುರ ವಾರ್ಗವಾಗಿ ವಾರಣಾಸಿಯನ್ನು ಗುರುವಾರ, ಶನಿವಾರ ಬೆಳಗ್ಗೆ 11.50ಕ್ಕೆ ತಲುಪಲಿದೆ.

ಅದೇರೀತಿ ವಾರಣಾಸಿ-ಮೈಸೂರು ರೈಲು (16230) ಡಿ.27ರಿಂದ ಪ್ರತಿ ಗುರುವಾರ, ಶನಿವಾರ ರಾತ್ರಿ 9ಗಂಟೆಗೆ ವಾರಣಾಸಿಯಿಂದ ಹೊರಟು ಪ್ರತಿ ಭಾನುವಾರ, ಮಂಗಳವಾರ ಬೆಳಗಿನ ಜಾವ 3 ಗಂಟೆಗೆ ಮೈಸೂರಿಗೆ ಆಗಮಿಸಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Services of the Mysuru–Varanasi biweekly express, which was running as a premium special train, has been regularized with effect from December 25. Mysuru–Varanasi–Mysuru biweekly, plying via Bengaluru city, will leave Mysuru at 7.20 a.m. on Tuesday and Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more