"ಇಂಡಿಯನ್ ಯೂನಿವರ್ಸಿಟಿ" ಶ್ರೇಣಿಪಟ್ಟಿಯಲ್ಲಿ ಮೈಸೂರು ವಿವಿಗೆ 21 ಸ್ಥಾನ

ಮೈಸೂರು, ಜುಲೈ 27: ಇಂಡಿಯನ್ ಯೂನಿವರ್ಸಿಟಿ ಶ್ರೇಣಿಯಲ್ಲಿ ಮೈಸೂರು ವಿಶ್ವವಿದ್ಯಾಲಯಕ್ಕೆ 21ನೇ ಸ್ಥಾನ ದೊರಕಿದೆ.

ಐಸಿಎಆರ್ ಇ ಹಾಗೂ ಔಟ್ ಲುಕ್ ನಡೆಸಿದ ಜಂಟಿ ಸಮೀಕ್ಷೆಯಲ್ಲಿ ಒಟ್ಟು 75 ವಿಶ್ವವಿದ್ಯಾಲಯಗಳು ಪಟ್ಟಿಯಲ್ಲಿ ಸ್ಥಾನ ಪಡೆದು, ಅದರಲ್ಲಿ ರಾಜ್ಯದ 8 ವಿಶ್ವವಿದ್ಯಾನಿಲಯಗಳು ಸ್ಥಾನ ಪಡೆದಿರುವುದು ಗಮನ ಸೆಳೆಯುವ ಸಂಗತಿಯಾಗಿದೆ. ಈ ವರ್ಷ ಶತಮಾನದ ಸಂಭ್ರಮದಲ್ಲಿರುವ ಮೈಸೂರು ವಿವಿ 67.88 ಅಂಕಗಳೊಂದಿಗೆ ಭಾರತದ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ 21ನೇ ಸ್ಥಾನ ಪಡೆದುಕೊಂಡಿದ್ದರೆ, ಮಂಗಳೂರು ವಿವಿ 24ನೇ ಸ್ಥಾನ ಪಡೆದುಕೊಂಡಿದೆ.

89.38 ಅಂಕ ಪಡೆದ ಕೋಲ್ಕತಾದ ಜಾದವ್ ಪುರ್ ವಿವಿ ಮೊದಲ ಸ್ಥಾನದಲ್ಲಿದೆ. ಚೆನ್ನೈನ ಅಣ್ಣಾ ವಿವಿ 85 ಅಂಕದೊಂದಿಗೆ ಎರಡನೇ ಸ್ಥಾನ ಪಡೆದುಕೊಂಡಿದೆ. ಬೆಂಗಳೂರು 29, ಕುವೆಂಪು ವಿವಿ 35, ಕರ್ನಾಟಕ ವಿವಿ - ಧಾರವಾಡ ಕೃಷಿ ವಿಜ್ಞಾನ ವಿವಿ 50, ಗುಲ್ಬರ್ಗ ವಿವಿ 60, ತುಮಕೂರು ವಿವಿ 72 ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ 75ನೇ ಸ್ಥಾನ ಪಡೆದುಕೊಂಡಿದೆ. ಇದೇ ಮೊದಲ ಬಾರಿ ವಿವಿ ಮೈಸೂರು ವಿಭಾಗ 21ನೇ ಸ್ಥಾನ ಪಡೆದುಕೊಂಡಿದೆ.

Mysuru University Ranked 21 In Indian University Ranking

"ವಿಶ್ವವಿದ್ಯಾಲಯದಲ್ಲಿನ ಸಂಶೋಧನಾ ವಿಷಯಗಳ ಮಂಡನೆ ಹಾಗೂ ಕಾರ್ಯವನ್ನು ಆಧರಿಸಿ ಈ ಸ್ಥಾನ ಸಿಕ್ಕಿದೆ. ನಮ್ಮ ಕಾರ್ಯವೈಖರಿಯನ್ನು ಮತ್ತಷ್ಟು ವೃದ್ಧಿಸಿಕೊಳ್ಳುವ ಗುರಿ ಇದೆ" ಎಂದು ಮೈಸೂರು ವಿವಿ ಕುಲಪತಿ ಹೇಮಂತ್ ಕುಮಾರ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+