ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರತಕ್ಕೆ ಬರದಂತೆ 18 ಚೀನಾ ವಿದ್ಯಾರ್ಥಿಗಳಿಗೆ ಸೂಚಿಸಿದ ಮೈಸೂರು ವಿವಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನವರಿ 30: ರಜೆಯ ಮೇಲೆ ಚೀನಾಗೆ ತೆರಳಿರುವ ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸದ್ಯಕ್ಕೆ ಭಾರತಕ್ಕೆ ವಾಪಾಸ್ ಆಗದಂತೆ ಮೈಸೂರು ವಿಶ್ವವಿದ್ಯಾನಿಲಯ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಚೀನಾದಲ್ಲಿ ಕಂಡುಬಂದಿರುವ ಮಾರಣಾಂತಿಕ ಕೊರೋನ್ ವೈರಸ್‍ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮೈಸೂರು ವಿವಿ ಈ ನಿರ್ಧಾರ ತೆಗೆದುಕೊಂಡಿದೆ.

ರಾಜ್ಯದ ಇತರೆ ವಿಶ್ವವಿದ್ಯಾಲಯಗಳಿಗೆ ಹೋಲಿಸಿದಲ್ಲಿ ಪ್ರತಿಷ್ಠಿತ ಮೈಸೂರು ವಿವಿಯಲ್ಲಿ ಚೀನಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಹಿನ್ನೆಲೆಯಲ್ಲಿ ವಿವಿಯು ಮುಂಜಾಗ್ರತ ಕ್ರಮ ಜರುಗಿಸಿದೆ.

ಕೊರೊನಾ ವೈರಸ್ ಎಂದರೇನು?: ಹೇಗೆ ಹರಡುತ್ತೆ, ಚಿಕಿತ್ಸೆ ಏನು?ಕೊರೊನಾ ವೈರಸ್ ಎಂದರೇನು?: ಹೇಗೆ ಹರಡುತ್ತೆ, ಚಿಕಿತ್ಸೆ ಏನು?

ಈ ತನಕ ಕೊರೋನಾ ವೈರಸ್ ಗೆ ಚೀನಾದಲ್ಲಿ ಬಲಿಯಾದವರ ಸಂಖ್ಯೆ 170ಕ್ಕೆ ಏರಿದ್ದು, ಜತೆಗೆ 7,700 ಮಂದಿಗೆ ಸೋಂಕು ತಗುಲಿರುವುದು ಖಚಿತಗೊಂಡಿದೆ. ಈ ನಡುವೆ ಚೀನಾದಲ್ಲಿ ಕಂಡುಬಂದಿರುವ ಮಾರಣಾಂತಿಕ ಕೊರೋನ್ ವೈರಸ್‍ ಇದೀಗ ಭಾರತದಲ್ಲೂ ಕಾಣಿಸಿಕೊಂಡಿದ್ದು, ಕೇರಳದಲ್ಲಿ ಒರ್ವ ವಿದ್ಯಾರ್ಥಿಯಲ್ಲಿ ಈ ವೈರಸ್ ಪತ್ತೆಯಾಗಿರುವುದು ಆತಂಕಕ್ಕೆ ಎಡೆ ಮಾಡಿದೆ.

Mysuru University Instructed 18 Chinese Students Not To Return

ಮೈಸೂರು ವಿಶ್ವವಿದ್ಯಾಲಯದಲ್ಲಿ ಚೀನಾ ಮೂಲದ ಒಟ್ಟು 120 ವಿದ್ಯಾರ್ಥಿಗಳು ಈ ವರ್ಷದ ಶೈಕ್ಷಣಿಕ ಸಾಲಿನಲ್ಲಿ ದಾಖಲಾಗಿ ವ್ಯಾಸಂಗ ಮಾಡುತ್ತಿದ್ದಾರೆ. ಇವರೆಲ್ಲಾ ಕಂಪ್ಯೂಟರ್ ಸೈನ್ಸ್ ವಿಭಾಗದ ಬಿ.ಟೆಕ್ ಹಾಗೂ ಎಂ.ಎಸ್.ಪ್ರೋಗ್ರಾಮಿಂಗ್ ನ ಇನ್ಫಾರ್ಮೇಷನ್ ಟೆಕ್ನಾಲಜಿ ಹಾಗೂ ಸಾಫ್ಟ್ ವೇರ್ ಎಂಜಿನಿಯರಿಂಗ್ ವಿಭಾಗಗಳಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. 120 ವಿದ್ಯಾರ್ಥಿಗಳ ಪೈಕಿ 18 ವಿದ್ಯಾರ್ಥಿಗಳು ಚೀನಾಗೆ ತೆರಳಿದ್ದು, ಅವರನ್ನು ಸದ್ಯಕ್ಕೆ ಅಲ್ಲಿಂದ ಹಿಂದಿರುಗದಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

ಕೊರೊನಾ ಸೋಂಕು:20 ಸಾವಿರ ಭಾರತೀಯರ ತಪಾಸಣೆ, 80 ಮಂದಿ ಮೇಲೆ ನಿಗಾಕೊರೊನಾ ಸೋಂಕು:20 ಸಾವಿರ ಭಾರತೀಯರ ತಪಾಸಣೆ, 80 ಮಂದಿ ಮೇಲೆ ನಿಗಾ

ಚೀನಾದಲ್ಲಿ ಹೊಸ ವರ್ಷ ಆಚರಣೆ ಬಹು ದೊಡ್ಡದು. ಈ ಹಿನ್ನೆಲೆಯಲ್ಲಿ ಮೈಸೂರು ವಿವಿಯಲ್ಲಿ ಅಧ್ಯಯನ ನಡೆಸುತ್ತಿದ್ದವರ ಪೈಕಿ 18ವಿದ್ಯಾರ್ಥಿಗಳು ಜನವರಿ 15 ರಂದು ಚೀನಾಗೆ ತೆರಳಿದರು. ಜನವರಿ 25 ರಂದು ಚೀನಾದಲ್ಲಿ ಹೊಸ ವರ್ಷಾಚರಣೆ ಮಾಡುತ್ತಾರೆ. ಇದನ್ನು ಮುಗಿಸಿಕೊಂಡು ಅವರು ಈಗಾಗಲೇ ವಾಪಸ್ ಆಗಬೇಕಿತ್ತು.

ಆದರೆ ಅಷ್ಟರಲ್ಲಿ ಚೀನಾದಲ್ಲಿ ಕಾಣಿಸಿಕೊಂಡ ಕರೋನಾ ವೈರಸ್ ಕಾರಣದಿಂದ ಅವರನ್ನು ಸದ್ಯಕ್ಕೆ ಹಿಂದಿರುಗದಂತೆ ಸೂಚಿಸಲಾಗಿದೆ. ಅವರೆಲ್ಲಾ ಚೀನಾದ ಝೂಮೇಡಿಯನ್ (zhumadian) ಪ್ರಾವೆನ್ಸಿಸ್ ನ ಹೊಂಗೈ ( Huanghai) ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು.

English summary
The University of Mysuru has instructed the students of chines students not return to India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X