ಮಹಿಳೆ ಗರ್ಭಾಶಯದಿಂದ 7 ಕಿಲೋ ಗಡ್ಡೆ ತೆಗೆದ ಮೈಸೂರಿನ ವೈದ್ಯರು
ಮೈಸೂರು, ಡಿಸೆಂಬರ್ 3: ಮೈಸೂರಿನ ಸಿದ್ದಾರ್ಥ ನಗರದ ಕಾವೇರಿ ಹಾರ್ಟ್ ಅಂಡ್ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯ ವೈದ್ಯರು ಮಹಿಳೆಯೊಬ್ಬರ ಗರ್ಭಾಶಯದಿಂದ 7 ಕಿಲೋ ತೂಕದ ಬೃಹತ್ ಗಡ್ಡೆಯನ್ನು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ.
45 ವರ್ಷ ವಯಸ್ಸಿನ ಶಿವಮ್ಮ ಎಂಬ ಮಹಿಳೆಯ ಹೊಟ್ಟೆ ಭಾಗದಲ್ಲಿ ಕಳೆದ ಒಂದು ವರ್ಷದಿಂದ ಗಡ್ಡೆಯ ತೊಂದರೆಯೊಂದಿಗೆ ಮೈಸೂರಿನ ಸಿದ್ದಾರ್ಥನಗರದ ಕಾವೇರಿ ಹಾರ್ಟ್ ಅಂಡ್ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆಕೆಯ ಗರ್ಭಾಶಯದಲ್ಲಿ ಬೃಹತ್ ಗಡ್ಡೆ ಬೆಳೆದಿರುವುದು ವೈದ್ಯಕೀಯ ತನಿಖೆಯಲ್ಲಿ ತಿಳಿದು ಬಂದಿತ್ತು. ಈ ಗಡ್ಡೆಯನ್ನು ತೆಗೆದುಹಾಕಲು ಟೋಟಲ್ ಅಬ್ಡಾಮಿನಲ್ ಹೆಸ್ಟೆರೆಕ್ಟೊಮಿ ಶಸ್ತ್ರಕ್ರಿಯೆ ನಡೆಸಲು ತೀರ್ಮಾನಿಸಲಾಗಿತ್ತು.

ಆಸ್ಪತ್ರೆಯ ವೈದ್ಯರ ತಂಡ ಈ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿತು. ಈ ತಂಡದಲ್ಲಿ ಹಿರಿಯ ಪ್ರಸೂತಿ ತಜ್ಞರು ಮತ್ತು ಮಹಿಳಾರೋಗ ಸಲಹಾ ತಜ್ಞರಾದ ಡಾ.ಎಂ.ಎಸ್.ಪ್ರಸಾದ್, ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರು, ಹಿರಿಯ ಪ್ರಸೂತಿ ತಜ್ಞರು ಮತ್ತು ಮಹಿಳಾ ರೋಗ ಸಲಹಾತಜ್ಞರಾದ ಡಾ.ಸರಳಾ ಚಂದ್ರಶೇಖರ್, ಅರಿವಳಿಕೆ ಸಲಹಾ ತಜ್ಞ ಡಾ.ಹರೀಶ್ ಕುಮಾರ್, ಶಸ್ತ್ರ ಚಿಕಿತ್ಸಾ ಸಿಬ್ಬಂದಿ ಇದ್ದರು.












Click it and Unblock the Notifications