ಯದುವೀರ್- ತ್ರಿಷಿಕಾ ದಂಪತಿ ಮಗ ಆದ್ಯವೀರ್ ತೊಟ್ಟಿಲು ಪೂಜೆ

ಮೈಸೂರು, ಮಾರ್ಚ್ 8 : ಮೈಸೂರಿನ ರಾಜ ವಂಶಸ್ಥ ಯದುವೀರ್ ಹಾಗೂ ತ್ರಿಷಿಕಾ ದಂಪತಿಯ ಮಗ ಆದ್ಯವೀರ್ ಗೆ ಚಾಮುಂಡಿ ಬೆಟ್ಟದಲ್ಲಿ ಗುರುವಾರ ತೊಟ್ಟಿಲ ಪೂಜೆ ನಡೆಸಲಾಯಿತು.

ಬೆಂಗಳೂರಿನಲ್ಲಿ ನಾಮಕರಣ ಕಾರ್ಯಕ್ರಮ ನೆರವೇರಿಸಿದ್ದ ಯದುವೀರ್ ದಂಪತಿ, ತಮ್ಮ ಮಗನನ್ನು ಕಳೆದ ಶುಭ ಶುಕ್ರವಾರದಂದು ಮೈಸೂರು ಅರಮನೆಗೆ ಕರೆತಂದಿದ್ದರು. ಆ ಬಳಿಕ ಮಾಧ್ಯಮಗಳ ಜತೆ ಯದುವೀರ್ ಮಾತನಾಡಿ, ಮಗ ಆದ್ಯವೀರ್ ತುಂಬಾ ಚೆನ್ನಾಗಿದ್ದು, ಶೀಘ್ರದಲ್ಲೇ ಚಾಮುಂಡಿ ಬೆಟ್ಟಕ್ಕೆ ಹೋಗಲಿದ್ದೇವೆ. ಅದು ಸರಿಯಾದ ಸಮಯ ನೋಡಿ ಹೋಗಬೇಕಿದೆ. ಮುಂದಿನ ಕಾರ್ಯಕ್ರಮಗಳೆಲ್ಲ ಅಮ್ಮನ ಸೂಚನೆಯಂತೆ ನಡೆಯಲಿದೆ ಎಂದು ತಿಳಿಸಿದ್ದರು.

ಇದೀಗ ಯದುವೀರ್ ದಂಪತಿ ಗುರುವಾರ ಚಾಮುಂಡಿ ಬೆಟ್ಟಕ್ಕೆ ತಮ್ಮ ಮಗ ಆದ್ಯವೀರ್ ಜತೆ ಭೇಟಿ ನೀಡಿ, ತೊಟ್ಟಿಲ ಪೂಜೆ ನೆರವೇರಿಸಿದ್ದಾರೆ. ಬುಧವಾರವಷ್ಟೇ ಯದುವೀರ್ ಪಂಚಾಂಗದ ಪ್ರಕಾರ ತಮ್ಮ ಜನ್ಮದಿನವನ್ನು ವಿವಿಧ ಪೂಜೆ ನೆರವೇರಿಸುವ ಮೂಲಕ ಆಚರಿಸಿಕೊಂಡಿದ್ದರು.

Mysuru royal family Yaduveer Wodeyar visits Chamundi temple for worship of cradle

ಪತ್ನಿ ತ್ರಿಷಿಕಾ, ರಾಜಮಾತೆ ಪ್ರಮೋದಾದೇವಿ ಒಡೆಯರ್ ಜೊತೆ ಗುರುವಾರದಂದು ಚಾಮುಂಡೇಶ್ವರಿ ಸನ್ನಿಧಾನಕ್ಕೆ ತೆರಳಿ, ತೊಟ್ಟಿಲು ಪೂಜೆ ನೆರವೇರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+