ಮೈಸೂರಿನಲ್ಲಿ ಇಬ್ಬರು ಚಾಲಾಕಿ ಕಳ್ಳರ ಬಂಧನ
ಮೈಸೂರು, ಜ. 19: ಜನರ ಗಮನವನ್ನು ಬೇರೆಡೆ ಸೆಳೆದು ಕಳವು ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಮೇಟಗಳ್ಳಿಯ ಕುಂಬಾಲಕೊಪ್ಪಲಿನ ಲಾಲ್ ಬಾಬು ಚೌಧರಿ ಬಿನ್ ಜೈ ಸಹನಿ (29) ಹಾಗೂ ಮೈಸೂರು ನಗರದ ಸಂದೀಪ ದೊರೈ ಸಾಹ (25) ಬಂಧಿತರು. ಬಂಧಿತರಿಂದ 6,000 ರು. ನಗದು ಹಾಗೂ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. [ತಾಯಿ ಹಾಲು ಸಿಗದೆ ಹುಲಿಮರಿಗಳ ಸಾವು]

ಆರೋಪವೇನು? : ನಗರ ಬಸ್ ನಿಲ್ದಾಣದ ಬಳಿ ಇರುವ ಎಸ್‌ಬಿಐ ಬ್ಯಾಂಕ್ ಶಾಖೆಯಲ್ಲಿ ಹಣ ತುಂಬಲು ಪ್ರದೀಪ್ ಧರ್ಮರಾಜ್ (೧೮) ಎಂಬುವರಲ್ಲಿ ಆರೋಪಿಗಳು ತಮ್ಮ ಬ್ಯಾಂಕ್ ಚಲನ್ ತುಂಬಿಕೊಡಲು ಕೋರಿದ್ದಾರೆ. ಅವರಿಗೆ ಸಹಾಯ ಮಾಡಲು ಪ್ರದೀಪ್ ಒಪ್ಪಿಕೊಂಡರು. ಆಗ ಪ್ರದೀಪ್ ಅವರಲ್ಲಿ ನಿಮ್ಮ ಹಣ ತಾವು ತುಂಬುವುದಾಗಿ ಹೇಳಿ ಹಣ ಮತ್ತು ಮೊಬೈಲ್ ಪಡೆದು ಪರಾರಿಯಾಗಿದ್ದರು. [ಗಜಪಡೆಗಳ ಪಟ್ಟಣಕ್ಕೆ ಸಾಕ್ಷಿಯಾಯ್ತು ಪಿರಿಯಾಪಟ್ಟಣ]











Click it and Unblock the Notifications