ಮೈಸೂರಲ್ಲಿ ಜನನ, ಮರಣ ನೋಂದಣಿ ಆನ್‌ಲೈನ್
ಮೈಸೂರು, ಫೆ. 9: ಆನ್‌ಲೈನ್‌ನಲ್ಲಿ ಜನನ ಮತ್ತು ಮರಣ ನೋಂದಣಿ ಸೌಲಭ್ಯವು ಇಷ್ಟು ದಿನ ನಗರದ ನಿವಾಸಿಗಳಿಗೆ ಮಾತ್ರ ಲಭ್ಯವಿತ್ತು. ಮಾರ್ಚ್ 1ರಿಂದ ಮೈಸೂರಿನ ಗ್ರಾಮೀಣ ಜನತೆಗೂ ಈ ಅವಕಾಶ ಸಿಗಲಿದೆ.
ರಾಜ್ಯದ ಒಟ್ಟು 11 ಜಿಲ್ಲೆಗಳಲ್ಲಿ ಫೆ. 1ರಿಂದಲೇ ಆನ್‌ಲೈನ್‌ನಲ್ಲಿ ಜನನ ಮತ್ತು ಮರಣ ನೋಂದಣಿಯ ಸೌಲಭ್ಯ ಒದಗಿಸಲಾಗಿದೆ. ಮೈಸೂರು ಸೇರಿದಂತೆ ಇನ್ನೂ 9 ಜಿಲ್ಲೆಗಳಲ್ಲಿ ಮಾರ್ಚ್ 1ರಿಂದ ಜಾರಿಗೆ ಬರಲಿದೆ. [ದಿ ಅದರ್ ಎಂಡ್ ಆಫ್ ದಿ ಕಾರಿಡಾರ್' ಲೋಕಾರ್ಪಣೆ]
ಈ ಕುರಿತು ಅಂಕಿ ಅಂಶಗಳ ನಿರ್ದೇಶನಾಲಯದ ಜಂಟಿ ನಿರ್ದೇಶಕ ಕೆ.ಎಸ್. ಶಂಕರ್ ಮಾಹಿತಿ ನೀಡಿದ್ದಾರೆ. ತಹಸೀಲ್ದಾರರು, ಉಪ ತಹಸೀಲ್ದಾರರು, ಗ್ರಾಮ ಲೆಕ್ಕಿಗರು, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಅಟಲ್‌ಜಿ ಜನಸ್ನೇಹಿ ಕೇಂದ್ರಗಳಲ್ಲಿನ ಡೇಟಾ ಎಂಟ್ರಿ ನಿರ್ವಾಹಕರಿಗೆ ಹಮ್ಮಿಕೊಂಡಿದ್ದ 'E-JanMa' ಕಾರ್ಯಕ್ರಮದ ತರಬೇತಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಅವರು ತಿಳಿಸಿದ್ದಾರೆ. [ವಾಹನದ ಟಿಂಟೆಡ್ ಗ್ಲಾಸ್ ಬದಲಾಯಿಸಿ]

ಆದ್ದರಿಂದ ಇನ್ನು ಮುಂದೆ ಮೈಸೂರು ಜಿಲ್ಲೆಯ ನಗರ ಹಾಗೂ ಗ್ರಾಮೀಣ ನಿವಾಸಿಗಳೆಲ್ಲರೂ ತಮ್ಮ ಕುಟುಂಬದ ಜನ್ಮ ಹಾಗೂ ಮರಣ ಮಾಹಿತಿಯನ್ನು ಮನೆಯಲ್ಲಿ ಕುಳಿತೇ ನೋಂದಣಿ ಮಾಡಬಹುದು. ನೋಂದಾವಣಿ ಆದ 21 ದಿನಗಳಲ್ಲಿ ಪ್ರಮಾಣಪತ್ರ ಸಿಗಲಿದೆ ಎಂದು ಕೆ.ಎಸ್. ಶಂಕರ್ ಹೇಳಿದ್ದಾರೆ. [ಬೆಂಗಳೂರು-ಮೈಸೂರು ಆರು ಪಥದ ರಸ್ತೆ ವಿಳಂಬ?]
ಜನನ ಪ್ರಮಾಣಪತ್ರವು ಶಾಲೆ ಪ್ರವೇಶಾತಿ, ಉದ್ಯೋಗ, ಸರ್ಕಾರಿ ಸೌಲಭ್ಯ ಪಡೆಯಲು, ಮತದಾನ ಮಾಡುವಾಗ, ಚಾಲನಾ ಪರವಾನಗಿ ಪಡೆಯುವಾಗ, ಪಾಸ್ ಪೋರ್ಟ್ ಮತ್ತು ಇತರ ಸಂದರ್ಭಗಳಿಗೆ ಅಗತ್ಯ. [ಮೈಸೂರಿಗೂ ಸಿಗುತ್ತೆ ವೈ ಫೈ]
ಮರಣ ಪ್ರಮಾಣಪತ್ರವು ಜೀವನ ವಿಮಾ ಮೊತ್ತ, ಪಿತ್ರಾರ್ಜಿತ ಆಸ್ತಿ ಹಾಗೂ ಸಹಾನುಭೂತಿ ಆಧಾರದ ಮೇಲೆ ಉದ್ಯೋಗ ಪಡೆಯಲು ಅತ್ಯವಶ್ಯ.












Click it and Unblock the Notifications