• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರು ಮೇಯರ್ ಸ್ಥಾನ: ಕುಮಾರಸ್ವಾಮಿ vs ಸಿದ್ದರಾಮಯ್ಯ

|
   ಮೈಸೂರು ಮೇಯರ್ ಸ್ಥಾನ: ಕುಮಾರಸ್ವಾಮಿ vs ಸಿದ್ದರಾಮಯ್ಯ | Oneindia Kannada

   ಮೈಸೂರು, ನವೆಂಬರ್ 16: ಮೈಸೂರು ಮಹಾನಗರ ಪಾಲಿಕೆ ಮೇಯರ್ ಪಟ್ಟ ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ಶೀಥಲಸಮರಕ್ಕೆ ಕಾರಣವಾಗುವ ಲಕ್ಷಣಗಳು ಗೋಚರಿಸುತ್ತಿವೆ.

   ಮೈಸೂರು ಮೇಯರ್ ಸ್ಥಾನ ಕಾಂಗ್ರೆಸ್‌ಗೆ ಬೇಕೆಂದು ಸಿದ್ದರಾಮಯ್ಯ ಹೇಳಿದ್ದರೆ. ಇಂದು ಮಂಗಳೂರಿನಲ್ಲಿ ಮಾತನಾಡಿರುವ ಕುಮಾರಸ್ವಾಮಿ ಮೇಯರ್ ಸ್ಥಾನ ಬೇಕೆಂದು ಜೆಡಿಎಸ್‌ನವರೂ ಕೇಳಿದ್ದಾರೆ ಎಂದಿದ್ದಾರೆ.

   ಮೇಯರ್ ಚುನಾವಣೆ ಆಯ್ಕೆ ಪ್ರಕ್ರಿಯೆಯಿಂದ ಸಿದ್ದರಾಮಯ್ಯ ಹಿಂದೆ ಸರಿದರೇ?

   ಬೆಂಗಳೂರಿನಲ್ಲಿ ಬಿಬಿಎಂಪಿ ಮೇಯರ್ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದ್ದೀರಿ ಹಾಗಾಗಿ ಮೈಸೂರು ಮೇಯರ್‌ ಸ್ಥಾನವನ್ನು ನಮಗೇ ನೀಡಿ ಎಂದು ನಮ್ಮ ಪಕ್ಷದವರು ಕೇಳುತ್ತಿದ್ದಾರೆ ಎಂದು ಕುಮಾರಸ್ವಾಮಿ ಅಡ್ಡಗೋಡೆಯ ಮೇಲೆ ದೀಪ ಇಟ್ಟಿದ್ದಾರೆ.

   ಮೈಸೂರು ಮೇಯರ್ ಗಾದಿಗೆ ಮುಹೂರ್ತ ಫಿಕ್ಸ್: ಪಟ್ಟಕ್ಕಾಗಿ ರಾಜಕೀಯದಾಟ ಶುರು

   ಇಂದು ಬೆಳಿಗ್ಗೆ ಇದೇ ವಿಷಯವಾಗಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಮೈಸೂರಿನಲ್ಲಿ ಈಗಾಗಲೇ ಜೆಡಿಎಸ್‌ನ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್ ಸಚಿವರಾಗಿದ್ದಾರೆ. ಹಾಗಾಗಿ ಕಾಂಗ್ರೆಸ್‌ಗೆ ಮೇಯರ್ ಸ್ಥಾನ ನೀಡುವಂತೆ ಕೇಳಿದ್ದೇವೆ ಇದು ನ್ಯಾಯಯುತವಾಗಿಯೇ ಇದೆ ಎಂದು ಟ್ವೀಟ್‌ ಮಾಡಿದ್ದಾರೆ.

   ಮೈಸೂರು ಮೇಯರ್ ಗಾದಿಗಾಗಿ ಸಿದ್ದು-ಜಿಟಿಡಿ ನಡುವೆ ಮತ್ತೆ ಶುರುವಾಯ್ತು ಮುಸುಕಿನ ಗುದ್ದಾಟ

   ಎಚ್‌ಡಿಕೆ-ಸಿದ್ದರಾಮಯ್ಯ ನಡುವೆ ತಿಕ್ಕಾಟ

   ಎಚ್‌ಡಿಕೆ-ಸಿದ್ದರಾಮಯ್ಯ ನಡುವೆ ತಿಕ್ಕಾಟ

   ಮೈಸೂರಿನ ಮೇಯರ್ ಸ್ಥಾನ ಕಾಂಗ್ರೆಸ್‌ಗೇ ಬೇಕು ಎಂದು ಸಿದ್ದರಾಮಯ್ಯ ಅವರೇ ಒತ್ತಾಯ ಹೇರುತ್ತಿರುವ ಕಾರಣ ಜೆಡಿಎಸ್‌-ಕಾಂಗ್ರೆಸ್‌ ನಡುವೆ ಮೈಸೂರಿನಲ್ಲಿ ಸಣ್ಣ ಮಟ್ಟಿನ ತಿಕ್ಕಾಟ ಈಗಾಗಲೇ ಆರಂಭವಾಗಿದೆ. ಈಗ ಸಿದ್ದರಾಮಯ್ಯ ಹೇಳಿಕೆಗೆ ವಿರುದ್ಧವಾದ ಹೇಳಿಕೆಯನ್ನು ಸಿಎಂ ನೀಡಿರುವ ಕಾರಣ ಇದು ಇನ್ನಷ್ಟು ದೊಡ್ಡ ಮಟ್ಟಕ್ಕೆ ಹೋಗುವ ಸಂಭವ ಇದೆ.

   ದೇವೇಗೌಡ ಸೂತ್ರ

   ದೇವೇಗೌಡ ಸೂತ್ರ

   ಮೊದಲು ಮೇಯರ್ ಆದವರಿಗೆ ಎರಡು ವರ್ಷ ಹಾಗೂ ನಂತರ ಮೇಯರ್ ಆದವರು ಮೂರು ವರ್ಷ ಆಡಳಿತ ಮಾಡಬೇಕು ಎಂಬ ಸೂತ್ರವನ್ನು ದೇವೇಗೌಡ ಅವರು ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಮೊದಲಿಗೆ ಕಾಂಗ್ರೆಸ್‌ಗೆ ಸ್ಥಾನ ಬಿಟ್ಟುಕೊಡಲು ಸಹ ದೇವೇಗೌಡ ಒಪ್ಪಿದ್ದಾರೆ ಎನ್ನಲಾಗಿದೆ. ಮೂಡಾ ಅಧ್ಯಕ್ಷ ಸ್ಥಾನಕ್ಕೂ ಇದೇ ಸೂತ್ರ ಅಳವಡಿಸಲು ಅವರು ಹೇಳಿದ್ದಾರೆ.

   ಜಿ.ಟಿ.ದೇವೇಗೌಡ ಪಟ್ಟು

   ಜಿ.ಟಿ.ದೇವೇಗೌಡ ಪಟ್ಟು

   ಸಚಿವ ಜಿ.ಟಿ.ದೇವೇಗೌಡ ಮತ್ತು ಸಾ.ರಾ.ಮಹೇಶ್ ಸಹ ತಮ್ಮ ಪಕ್ಷಕ್ಕೇ ಮೇಯರ್ ಸ್ಥಾನ ದೊರಕಬೇಕು ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಅದರಲ್ಲಿಯೂ ದೇವೇಗೌಡ ಅವರು ಮೇಯರ್ ಸ್ಥಾನಕ್ಕೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್‌ನ ತನ್ವಿರ್‌ ಸೇಠ್‌ ಸಹ ಇಂದು ಸಾ.ರಾ.ಮಹೇಶ್ ಅವರನ್ನು ಭೇಟಿಯಾಗಿ ಮೇಯರ್ ಸ್ಥಾನದ ಬಗ್ಗೆ ಮಾತನಾಡಿದ್ದಾರೆ.

   ನಾನು ತಲೆಹಾಕಲ್ಲ: ಸಿದ್ದರಾಮಯ್ಯ

   ನಾನು ತಲೆಹಾಕಲ್ಲ: ಸಿದ್ದರಾಮಯ್ಯ

   ಮೈಸೂರು ಮಹಾನಗರ ಪಾಲಿಕೆ ಚುನಾವಣೆ ನಾಳೆ ನಡೆಯಲಿದ್ದು, ಮೇಯರ್ ಆಯ್ಕೆ ಕುರಿತು ನಾನು ತಲೆ ಹಾಕುವುದಿಲ್ಲ. ನಾನು ಕುಮಾರಸ್ವಾಮಿ, ದೇವೇಗೌಡ , ಸಾರಾ ಮಹೇಶ್ ಜೊತೆ ಮಾತನಾಡಿಲ್ಲ , ಮಾತನಾಡುವುದೂ ಇಲ್ಲ ಎಂದು ಮಧ್ಯಾಹ್ನದ ವೇಳೆಗೆ ಸಿದ್ದರಾಮಯ್ಯ ಅವರು ವರಸೆ ಬದಲಿಸಿದ್ದು, ಒಳ ಒಪ್ಪಂದ ಆಗಿದೆಯೇ ಎಂಬ ಅನುಮಾನವನ್ನು ಮೂಡಿಸಿದೆ.

   ಯಾರ ಬಲ ಎಷ್ಟಿದೆ?

   ಯಾರ ಬಲ ಎಷ್ಟಿದೆ?

   ನಗರಪಾಲಿಕೆಯ 65 ಸದಸ್ಯ ಸ್ಥಾನಗಳಲ್ಲಿ ಬಿಜೆಪಿ 22 ಸ್ಥಾನ ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೆ, ಕಾಂಗ್ರೆಸ್- 19, ಜಾ.ದಳ-18, ಬಿಎಸ್ಪಿ 1, ಪಕ್ಷೇತರರು 5 ಸ್ಥಾನಗಳಲ್ಲಿ ಜಯ ಗಳಿಸಿದ್ದಾರೆ. ಮೇಯರ್‌ ಗಾದಿಗಾಗಿ ನಾಳೆ ಚುನಾವಣೆ ನಡೆಯಲಿದ್ದು, ಬಿಜೆಪಿ ಸಹ ಆಪರೇಷನ್‌ ಮೂಲಕ ಮೇಯರ್ ಸ್ಥಾನ ಗಳಿಸಲು ಹೊಂಚುಹಾಕಿದೆ.

   English summary
   Mysuru mayor seat is may create fight between CM Kumaraswamy and former CM Siddaramaiah. Both were demanding mayor seat for them party. Mayor election is going to happen tomorrow.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X