ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಮೇಯರ್ ಚುನಾವಣೆ: ಜೆಡಿಎಸ್ ಸದಸ್ಯೆ ತಸ್ಲೀಮಾ ಆಯ್ಕೆ ಸಾಧ್ಯತೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನವರಿ 18: ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಹಿನ್ನಲೆಯಲ್ಲಿ ಜೆಡಿಎಸ್ ಮುಖಂಡ ಅಬ್ದುಲ್ಲ ನೇತೃತ್ವದಲ್ಲಿ ಪಕ್ಷದ ಎಲ್ಲ ಸದಸ್ಯರು ಪಾಲಿಕೆಗೆ ಆಗಮಿಸಿದ್ದಾರೆ. ಕೌನ್ಸಿಲ್ ಕಾರ್ಯದರ್ಶಿ ರಂಗಸ್ವಾಮಿ ಅವರಿಗೆ ಮೇಯರ್ ಹುದ್ದೆಗೆ ತಸ್ಲೀಮಾ ನಾಮಪತ್ರ ಸಲ್ಲಿಸಿದರು. ಮೈಸೂರು ಮೇಯರ್ ಆಗಿ ಮೊದಲ ಮುಸ್ಲಿಂ ಆಯ್ಕೆ ಬಹುತೇಕ ಖಚಿತವಾಗಿದೆ.

ಮಾಜಿ ಮೇಯರ್ ಲಿಂಗಪ್ಪ, ರವಿಕುಮಾರ್, ಅಬ್ದುಲ್ಲಾ, ಪ್ರೇಮಾ ಶಂಕರೆಗೌಡ ಅವರು ಜೆಡಿಎಸ್ ಸದಸ್ಯೆ ತಸ್ಲೀಮಾ ಅವರಿಗೆ ಸಾಥ್ ನೀಡಿದ್ದಾರೆ. ಇನ್ನು ಜೆಡಿಎಸ್ ನ ಇನ್ನೊಬ್ಬ ಸದಸ್ಯೆ ನಮ್ರತಾ ಅವರು ಮೇಯರ್ ಹುದ್ದೆಯ ಆಕಾಂಕ್ಷಿಯಾಗಿದ್ದರು. ಅವರಿಗೆ ನಿರಾಸೆಯಾಗಿದೆ.

"ನನ್ನದೇನಿದ್ದರೂ ಸೈಲೆಂಟ್ ರಾಜಕಾರಣ" ಎಂದು ಎಚ್ ಡಿಕೆಗೆ ತಿವಿದ ಜಿಟಿಡಿ

ಜೆಡಿಎಸ್ ಸದಸ್ಯೆಯಾಗಿರುವ ವಾರ್ಡ್ ನಂ 26ರ ಸದಸ್ಯೆಯಾಗಿರುವ ತಸ್ಲಿಮ್ ಜೆಡಿಎಸ್ ಮುಖಂಡರೊಂದಿಗೆ ನಾಮಪತ್ರ ತಸ್ಲೀಮಾ. ಸಲ್ಲಿಸಿದ್ದಾರೆ.

ಮೊದಲ ಬಾರಿಗೆ ಮುಸ್ಲಿಂ ಮಹಿಳೆಗೆ ಒಲಿದ ಮೇಯರ್ ಪಟ್ಟ

ಮೊದಲ ಬಾರಿಗೆ ಮುಸ್ಲಿಂ ಮಹಿಳೆಗೆ ಒಲಿದ ಮೇಯರ್ ಪಟ್ಟ

ಕಳೆದ ಅವಧಿಯಲ್ಲಿ ಪಡುವಾರಹಳ್ಳಿ ರಾಜೇಶ್ವರಿ ಸೋಮು, ಆರ್ ಲಿಂಗಪ್ಪ, ಎಂ.ಜಿ ರವಿಕುಮಾರ್, ಭಾಗ್ಯವತಿ ಮೇಯರ್ ಆಗಿದ್ದರು.

ಈ ಬಾರಿಯೂ ಮತ್ತೆ ಚಾಮರಾಜ ಕ್ಷೇತ್ರಕ್ಕೆ ಮೇಯರ್ ಗಿರಿ ಒಲಿದಿದೆ.

ಮೈಸೂರು ಮಹಾನಗರ ಪಾಲಿಕೆ ಇತಿಹಾಸದಲ್ಲಿ ಮೊದಲ ಬಾರಿಗೆ ಮುಸ್ಲಿಂ ಮಹಿಳೆ ಮೈಸೂರು ಮಹಾನಗರ ಪಾಲಿಕೆಯ 53 ನೇ ಮೇಯರ್ ಆಗಿ ಆಯ್ಕೆಯಾಗುವ ಸಾಧ್ಯತೆ. ಆರಿಪ್ ಹುಸೇನ್, ಹಾಗೂ ಅಯೂಬ್ ಖಾನ್ ಈ ಹಿಂದೆ ಮುಸ್ಲಿಂ ಪುರುಷರು ಮೇಯರ್ ಆಗಿದ್ದರು.

ಮೇಯರ್ ಸ್ಥಾನ ಜೆಡಿಎಸ್ ಗೆ

ಮೇಯರ್ ಸ್ಥಾನ ಜೆಡಿಎಸ್ ಗೆ

ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಒಪ್ಪಂದ ಮಾಡಿಕೊಂಡಿವೆ. ಈ ಬಾರಿ ಕಾಂಗ್ರೆಸ್ ಮೇಯರ್ ಸ್ಥಾನವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿದೆ.

ಮೈಸೂರು ಮಹಾನಗರ ಪಾಲಿಕೆ ವಿಚಾರವಾಗಿ ಕಾಂಗ್ರೆಸ್ ಜೆಡಿಎಸ್ ಒಪ್ಪಂದ ಮಾಡಿಕೊಂಡಿದೆ. ಆ ಒಪ್ಪಂದದಂತೆ 5 ವರ್ಷಗಳ ಕಾಲ ನಾವು ಒಟ್ಟಾಗಿ ಆಡಳಿತ ನಡೆಸುತ್ತೇವೆ ಎಂದು ಮೈಸೂರಿನಲ್ಲಿ ಮಾಜಿ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.

"ವೋಟ್ ಹಾಕೋದಷ್ಟೆ ನನ್ ಕೆಲಸ" ಎಂದು ಮತ್ತೆ ಅಸಮಾಧಾನ ಹೊರಹಾಕಿದ ಜಿಟಿಡಿ

ಮೈಸೂರು ಪಾಲಿಕೆಗೆ ಮಾತ್ರ ಮೈತ್ರಿ

ಮೈಸೂರು ಪಾಲಿಕೆಗೆ ಮಾತ್ರ ಮೈತ್ರಿ

ಪಾಲಿಕೆ ಮೇಯರ್ ಆಗಿ ಈ ಬಾರಿ ಜೆಡಿಎಸ್ ಸದಸ್ಯರನ್ನ ಆಯ್ಕೆ ಮಾಡ್ತಿದ್ದೇವೆ. ಉಪಮೇಯರ್ ಸ್ಥಾನ ಕಾಂಗ್ರೆಸ್ ಸದಸ್ಯರಿಗೆ ಸಿಗಲಿದೆ.

ಮಾತು ಕೊಟ್ಟಂತೆ ನಾವು ನಡೆದುಕೊಳ್ಳುತ್ತೇವೆ, ಇದರಲ್ಲಿ ಯಾವುದೇ ಬದಲಾವಣೆ ಇರೋಲ್ಲ. ಇದು ಮೈಸೂರು ಪಾಲಿಕೆಗೆ ಮಾತ್ರ ಕೊಟ್ಟ ಮಾತಾಗಿದೆ ಎಂದು ಕೃಷ್ಣಭೈರೇಗೌಡ ಹೇಳಿದರು.

ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗಿಂತ ಸಚಿವ ಸಂಪುಟ ವಿಸ್ತರಣೆ ಮುಖ್ಯ. ಅಧಿಕಾರಕ್ಕೆ ಬಂದು ಆರು ತಿಂಗಳಾದರೂ ಬಿಜೆಪಿಯಿಂದ ಸಂಪೂರ್ಣ ಆಡಳಿತ ಕೊಡಲು ವಿಫಲವಾಗಿದೆ. ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋಥರ. ಬಿಜೆಪಿ ಒಳಜಗಳದಿಂದ ರಾಜ್ಯದ ಜನರು ಹಾಗೂ ಅಭಿವೃದ್ಧಿ ಬಡವಾಗಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಸಿಎಂ ಯಡಿಯೂರಪ್ಪ ಒತ್ತಡದಲ್ಲಿ ಆಡಳಿತ ನಡೆಸುತ್ತಿದ್ದಾರೆ

ಸಿಎಂ ಯಡಿಯೂರಪ್ಪ ಒತ್ತಡದಲ್ಲಿ ಆಡಳಿತ ನಡೆಸುತ್ತಿದ್ದಾರೆ

ನಮ್ಮ ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಆಯ್ಕೆ ವಿಳಂಬವಾಗಿಲ್ಲ. ಕೆಪಿಸಿಸಿ ಆಗಲಿ, ಎಐಸಿಸಿ ಆಗಲಿ ನಿನ್ನೆ ಅಧ್ಯಕ್ಷರ ಆಯ್ಕೆ ಮಾಡುತ್ತೇವೆಂದು ಎಲ್ಲೂ ಹೇಳಿರಲಿಲ್ಲ. ಅಧ್ಯಕ್ಷರ ಅವಧಿ ಇನ್ನು ಮೂರು ವರ್ಷಅಷ್ಟರೊಳಗೆ ಆಯ್ಕೆ ಮಾಡುತ್ತೇವೆ ಎಂದು ತಿಳಿಸಿದರು.

ಆದರೆ ಆರು ತಿಂಗಳಾದರೂ ಬಿಜೆಪಿ ಸರ್ಕಾರ ಪೂರ್ಣ ಸಂಪುಟ ರಚಿಸಿಲ್ಲ. ನೆರೆ, ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈ ಬಗ್ಗೆ ಬಿಜೆಪಿಯವರು ಉತ್ತರ ಕೊಡಲಿ‌ ಎಂದರು.

ಸಿಎಂ ಹಾದಿಯಾಗಿ ಬಿಜೆಪಿಯಲ್ಲಿ ಎಲ್ಲರೂ ಒತ್ತಡದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ವರಿಷ್ಠರ ನಡುವೆ ಸಮನ್ವಯತೆ ಇಲ್ಲದಂತಾಗಿದೆ. ಅದೇ ರೀತಿ ರಾಜ್ಯದಲ್ಲೂ ಸಿಎಂ ಹಾಗೂ ಸಚಿವರ ನಡುವೆ ಸಮನ್ವತೆ ಕಳೆದುಕೊಂಡಿದ್ದಾರೆ ಇದೆಲ್ಲದರ ಪರಿಣಾಮವಾಗಿ ರಾಜ್ಯದ ಅಭಿವೃದ್ದಿ ಮೇಲೆ ಪರಿಣಾಮ ಬೀರಿದೆ ಎಂದು ಕೃಷ್ಣಭೈರೇಗೌಡ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲು ಸಿಎಂ ಹಾಗೂ ನಾಯಕರ ನಡುವೆ ಸಮನ್ವಯತೆ ಇಲ್ಲ.

English summary
Taslimas first Muslim choice as mayor of Mysuru is almost certain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X