ಮೈಸೂರು: ಪೌರ ಕಾರ್ಮಿಕನನ್ನು ಮ್ಯಾನ್ ಹೋಲಿಗಿಳಿಸಿದ್ದ ಗ್ರಾ.ಪಂ ಅಧ್ಯಕ್ಷೆ ವಜಾ
ಮೈಸೂರು, ಜೂನ್ 28 : ಮ್ಯಾನ್ ಹೋಲ್ ನೊಳಗೆ ಪೌರಕಾರ್ಮಿಕನನ್ನು ಮ್ಯಾನ್ ಹೋಲ್ ಗೆ ಇಳಿಸಿ ಶುಚಿಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಚಾಮುಂಡಿ ಬೆಟ್ಟ ಗ್ರಾಮ ಪಂಚಾಯತ್ ಅಧ್ಯಕ್ಷೆಯನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ ಪಂಚಾಯತ್ ರಾಜ್ ಇಲಾಖೆ ಆದೇಶ ಹೊರಡಿಸಿದೆ.
ಗ್ರಾ.ಪಂ ಅಧ್ಯಕ್ಷೆ ಎಸ್.ಗೀತಾ ಎಂಬವರೇ ತಮ್ಮ ಸ್ಥಾನದಿಂದ ವಜಾಗೊಂಡವರು. ಜೂನ್ 7 ರಂದು ಗಣೇಶ್ ಎಂಬ ಪೌರಕಾರ್ಮಿಕನನ್ನು ಒತ್ತಾಯಪೂರ್ವಕವಾಗಿ ಮ್ಯಾನ್ ಹೋಲ್ ಗೆ ಇಳಿಸಿದ್ದರು. ಈ ಕುರಿತು ಭಾರೀ ಚರ್ಚೆಯಾಗಿ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿತ್ತು.

ಪ್ರಕರಣ ಸಂಬಂಧಿಸಿದಂತೆ ಪಿಡಿಓ ಆನಂದನನ್ನು ಬಂಧಿಸಲಾಗಿದೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್, ಅಧ್ಯಕ್ಷೆಯನ್ನು ವಜಾ ಮಾಡುವಂತೆ ಪಂಚಾಯತ್ ರಾಜ್ ಇಲಾಖೆಗೆ ಪತ್ರ ಬರೆದಿದ್ದರು. ಹೀಗಾಗಿ ಅಧ್ಯಕ್ಷೆ ಗೀತಾರನ್ನು ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ.
ಮೈಸೂರಿನಲ್ಲೊಂದು ವಿನೂತನ ಪ್ರತಿಭಟನೆ
ನಗರದಲ್ಲೆಡೆ ದಿನೇ ದಿನೇ ಪರವಾನಗಿ ಪಡೆಯದೆ ಮುಖ್ಯರಸ್ತೆಗಳಲ್ಲಿ ಅಶ್ಲೀಲ ಜಾಹೀರಾತು ಫಲಕಗಳು ರಾರಾಜಿಸುತ್ತಿದೆ. ಈ ಹಿನ್ನೆಲೆ ಮೈಸೂರು ನಗರಪಾಲಿಕೆ ವತಿಯಿಂದ ಪರವಾನಿಗೆ ಪಡೆದು ಅಶ್ಲೀಲ ರೀತಿಯಲ್ಲಿ ಅಳವಡಿಸಲಾಗಿರುವ ಪುರುಷರ ಒಳ ಉಡುಪಿನ ಜಾಹಿರಾತು ಫಲಕವನ್ನು ಮರೆಮಾಚಿಸಲು ಬಟ್ಟೆಯಿಂದ ಮುಚ್ಚುವುದರ ಮೂಲಕ ಬೆಳಕು ಸಂಸ್ಥೆಯ ಸದಸ್ಯರು ಪಾಲಿಕೆಯ ಗಮನ ಸೆಳೆದರಲ್ಲದೇ ಪ್ರತಿಭಟನೆ ನಡೆಸಿದರು.

ಕೂಡಲೇ ಜಾಹಿರಾತು ಫಲಕ ತೆರವುಗೊಳಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿಯ ಜಾಹಿರಾತು ಫಲಕಗಳಿಗೆ ಪರವಾನಿಗೆಯನ್ನು ನೀಡಬೇಡಿ ಎಂದು ಒತ್ತಾಯಿಸಿದರಲ್ಲದೇ ಪಾಲಿಕೆಗೆ ತೆರಳಿ ಆಯುಕ್ತರಿಗೆ ಮನವಿ ಸಲ್ಲಿಸಿದರು. ಬಿಜೆಪಿ ಮುಖಂಡರಾದ ಕೆ.ದೇವರಾಜ್, ಬೆಳಕು ಸಂಸ್ಥೆಯ ಸಹ ಸಂಚಾಲಕ ಧನುಷ್, ವಿನಯ್,ಸುಭಾಷ್ ಮತ್ತಿತರರು ಪಾಲ್ಗೊಂಡಿದ್ದರು












Click it and Unblock the Notifications