Mysuru-Kushalnagar Highway: 2025ರೊಳಗೆ ಕಾಮಗಾರಿ ಮುಗಿಸುವುದು ನನ್ನ ಗುರಿ: ಪ್ರತಾಪ್ ಸಿಂಹ
ಮೈಸೂರು-ಕುಶಾಲನಗರ 4 ಪಥದ ನೂತನ ಹೆದ್ದಾರಿ ಕಾಮಗಾರಿಯನ್ನು 2025ರೊಳಗೆ ಮುಗಿಸುವುದು ನನ್ನ ಮುಂದಿನ ಗುರಿಯಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ತಮ್ಮ ಟ್ವೀಟ್‌ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಬೆಂಗಳೂರು, ಮಾರ್ಚ್, 14: ಇತ್ತೀಚೆಗಷ್ಟೇ ಬೆಂಗಳೂರು- ಮೈಸೂರು ಹೆದ್ದಾರಿಯನ್ನು ಉದ್ಘಾಟನೆ ಮಾಡಲಾಗಿದೆ.
ಹಾಗೆಯೇ ಮೈಸೂರು-ಕುಶಾಲನಗರ 4 ಪಥದ ನೂತನ ಹೆದ್ದಾರಿ ಕಾಮಗಾರಿಯನ್ನು 2025ರೊಳಗೆ ಮುಗಿಸುವುದು ನನ್ನ ಮುಂದಿನ ಗುರಿಯಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ತಮ್ಮ ಟ್ವೀಟ್‌ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ನನ್ನ ಮುಂದಿನ ಗುರಿ ಮೋದೀಜಿ ಭೂಮಿ ಪೂಜೆ ಮಾಡಿದ ಮೈಸೂರು-ಕುಶಾಲನಗರ 4 ಪಥದ ಹೊಸ ಹೆದ್ದಾರಿ ಕಾಮಗಾರಿಯನ್ನು 2025 ರೊಳಗೆ ಮುಗಿಸುವುದು ಮತ್ತು ಮೈಸೂರು-ನಂಜನಗೂಡು ನಡುವಿನ ರಸ್ತೆಯನ್ನು 6 ಪಥಕ್ಕೆ ಹೆಚ್ಚಿಸುವುದಾಗಿದೆ. ನಿಮ್ಮ ಆಶೀರ್ವಾದವಿರಲಿ. pic.twitter.com/R27nJuYRG8
— Pratap Simha (@mepratap) March 13, 2023
ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್ ವೇ ಉದ್ಘಾಟನೆ ಮಾಡಿದ ಬೆನ್ನಲ್ಲೇ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನನ್ನ ಮುಂದಿನ ಗುರಿ ಮೈಸೂರು-ಕುಶಾಲನಗರ 4 ಪಥದ ನೂತನ ಹೆದ್ದಾರಿ ಕಾಮಗಾರಿಯನ್ನು 2025ರೊಳಗೆ ಮುಗಿಸುವುದಾಗಿದೆ. ಮತ್ತು ಮೈಸೂರು-ನಂಜನಗೂಡು ನಡುವಿನ ರಸ್ತೆಯನ್ನು 6 ಲೇನ್‌ಗೆ ಹೆಚ್ಚಿಸಲಾಗುವುದು. ಇದಕ್ಕೆ ನಿಮ್ಮ ಆಶೀರ್ವಾದವಿರಲಿ ಎಂದು ಟ್ವಿಟರ್‌ನಲ್ಲಿ ಕೇಳಿಕೊಂಡಿದ್ದಾರೆ.

ಕಾಮಗಾರಿಗೆ ತಗುಲಿದ ವೆಚ್ಚದ ವಿವರ
ಹಾಗೆಯೇ ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಬರೆದಿರುವ ಪತ್ರವನ್ನು ಸಹ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ. ಭಾನುವಾರ (ಮಾರ್ಚ್ 14) ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯ ಪ್ರವಾಸ ವೇಳೆ ಮೈಸೂರು- ಕುಶಾಲನಗರ ಚತುಷ್ಪಥ ಹೆದ್ದಾರಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದರು. 4,128.92 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕಾಮಗಾರಿಯನ್ನು ಕೈಗೊಳ್ಳಲಾಗಿದೆ.

ಪ್ರಯಾಣದ ಸಮಯವೂ ಇಳಿಕೆ
ಚತುಷ್ಪದ ಹೆದ್ದಾರಿ ನಿರ್ಮಾಣವಾದಲ್ಲಿ ಪ್ರಯಾಣದ ಸಮಯವೂ ಇಳಿಕೆಯಾಗಲಿದೆ. ಇನ್ನು ಎರಡನೇಯ ಹಂತದಲ್ಲಿ ಕುಶಾಲನಗರ ಮತ್ತು ಸಂಪಾಜೆ ಹಾಗೂ ಮೂರನೇ ಹಂತದಲ್ಲಿ ಸಂಪಾಜೆಯಿಂದ ಮಾಣಿಗೆ ಹೆದ್ದಾರಿ ನಿರ್ಮಾಣ ಮಾಡುವುದು ಯೋಜನೆಯ ಗುರಿಯಾಗಿದೆ. ಇನ್ನು ಚಾಮರಾಜನಗರ ಹಾಗೂ ಗುಂಡ್ಲುಪೇಟೆ ಕಡೆಯಿಂದ ತಮಿಳುನಾಡು ಮತ್ತು ಊಟಿ ಕಡೆಯಿಂದ ಬಸ್, ಸರಕು ಸಾಗಣೆ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಮೈಸೂರು-ನಂಜನಗೂಡು ನಡುವಿನ ರಿಂಗ್ ರಸ್ತೆ ಜಂಕ್ಷನ್ ಮೂಲಕ ರಾಜ್ಯದ ಬೇರೆಡೆಗೆ ಹೋಗುತ್ತವೆ.












Click it and Unblock the Notifications