'ಬೊಮ್ಮಾಯಿ ಅವರು ಚೊಚ್ಚಲ ಬಜೆಟ್ ಸರ್ವವ್ಯಾಪಿ, ಸರ್ವಸ್ಪರ್ಶಿ'

ಮೈಸೂರು, ಮಾರ್ಚ್ 4: "ಕರ್ನಾಟಕದ ಮುಖ್ಯಮಂತ್ರಿಗಳು ಮತ್ತು ಹಣಕಾಸು ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಚೊಚ್ಚಲ ಆಯವ್ಯಯ 2022 ಮತ್ತು 2023 ಅನ್ನು ಮಂಡಿಸಿರುವುದು ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದ ಮೇರೆಗೆ ನೆಮ್ಮದಿಯ ಬದುಕನ್ನು ಈಸ್ ಆಫ್ ಲಿವಿಂಗ್ ಮಹಾತ್ವಾಕಾಂಕ್ಷಿಯ ಪ್ರತಿರೂಪವಾಗಿದೆ"ಎಂದು ಮೈಸೂರು ಕೃಷ್ಣರಾಜ ಶಾಸಕ ಎಸ್.ಎ.ರಾಮದಾಸ್ ಅಭಿಪ್ರಾಯ ಪಟ್ಟಿದ್ದಾರೆ.

"ನಮ್ಮ ಭಾರತೀಯ ಜನತಾ ಪಕ್ಷದ ತತ್ವ ಸಿದ್ದಾಂತದಂತೆ ಶ್ಯಾಮ ಪ್ರಸಾದ್ ಮುಖರ್ಜಿ ಅವರ ಆಶೆಯಂತೆ ಸರ್ವ ವ್ಯಾಪಿ ಸರ್ವ ಸ್ಪರ್ಶಿ ಜೊತೆಗೆ 2 ವರ್ಷಗಳ ಕಾಲದ ಕೋವಿಡ್ ನ ಕಠಿಣ ಪರಿಸ್ಥಿತಿಯಲ್ಲಿಯೂ ಕೂಡಾ ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡು ಬಂದಿರುವುದು ಸಾಧನೆಯಾಗಿದೆ"ಎಂದು ರಾಮದಾಸ್ ಹೊಗಳಿದರು.

"ಈ ವರ್ಷದ ಬಜೆಟ್ ವಿಶೇಷವಾಗಿ ದುರ್ಬಲ ವರ್ಗದವರಿಗೆ ಕೊಟ್ಟಿರುವ 03ಇ ಗಳು ಎಂಪ್ಲಾಯ್ ಮೆಂಟ್, ಎಜುಕೇಶನ್ ಮತ್ತು ಎಂಪವರ್ ಮೆಂಟ್ , ಶಿಕ್ಷಣ ಉದ್ಯೋಗ ಮತ್ತು ಸಬಲೀಕರಣ. ಈ ಬಾರಿಯ ಬಜೆಟ್ ನಲ್ಲಿ ಮನೆ ಬಾಗಿಲಿಗೆ ಸರ್ಕಾರ, ಸರ್ಕಾರದ ಸೇವೆಗಳು ಇದಕ್ಕೆ ಆದ್ಯತೆ ನೀಡಲಾಗಿದೆ. ಭಾರತದ ಸ್ವಾತಂತ್ರ್ಯದ ಶುಭ ಸಂದರ್ಭದಲ್ಲಿ ರಾಜ್ಯದ ಅಭಿವೃದ್ಧಿಗಾಗಿ ಪಂಚ ಸೂತ್ರಗಳನ್ನು ಸೂಚಿಸಲಾಗಿದೆ"ಎಂದು ರಾಮದಾಸ್ ಅಭಿಪ್ರಾಯ ಪಟ್ಟರು.

Mysuru Krishnaraja MLA S A Ramadas Reaction On Karnataka Budget 2022

"ಎಲ್ಲರನ್ನೂ ಒಳಗೊಂಡಂತೆ ಸಮಗ್ರ ಆರ್ಥಿಕತೆ ಮತ್ತು ಅಭಿವೃದ್ಧಿ, ದುರ್ಬಲ ವರ್ಗದವರ ರಕ್ಷಣೆ ಮತ್ತು ಏಳಿಗೆ, ರಾಜ್ಯದಲ್ಲಿ ಹಿಂದುಳಿದಿರುವ ಪ್ರದೇಶಗಳ ಆದ್ಯತೆ, ಕೃಷಿ ಕೈಗಾರಿಕೆ ಮತ್ತು ಸೇವೆಗಳಿಗೆ ಸಿಂಹ ಪಾಲು , ಹೊಸ ಚಿಂತನೆ ಮತ್ತು ಹೊಸ ಚೈತನ್ಯ ಮತ್ತು ಹೊಸ ಮುನ್ನೋಟದೊಂದಿಗೆ ನವ ಕರ್ನಾಟಕಕ್ಕಾಗಿ ಆದ್ಯತೆಯಾಗಿದೆ"ಎಂದು ಶಾಸಕರು ಹೇಳಿದರು.

"ಕೋವಿಡ್ ನ ನಂತರದಲ್ಲೂ ಕೂಡಾ 2021, 2022 ನೆ ಸಾಲಿನಲ್ಲಿ ಕೃಷಿ ವಲಯದಲ್ಲಿ ಶೇ.2.2, ಕೈಗಾರಿಕೆಯಲ್ಲಿ 7.4 , ಸೇವಾ ಕ್ಷೇತ್ರದಲ್ಲಿ 9.2 ಬೆಳವಣಿಗೆ ಆಗಿರುವುದು ಸ್ವಾಗತಾರ್ಹ ಹಾಗೂ ಜಿ ಎಸ್ ಟಿ ಯಲ್ಲಿ 9.5 ಪ್ರಗತಿ ಸಾಧಿಸಿರುವುದು ಪ್ರಗತಿದಾಯಕವಾಗಿದೆ. ಸದರಿ ಬಜೆಟ್ ನಲ್ಲಿ ಮೈಸೂರಿನ ಅಭಿವೃದ್ಧಿಗೆ ನೂತನ ಯೋಜನೆ ಕೊಟ್ಟಿರುವುದು ಸ್ವಾಗತಾರ್ಹ"ಎಂದು ರಾಮದಾಸ್ ಬಜೆಟ್ ಅನ್ನು ಹೊಗಳಿದರು.

Mysuru Krishnaraja MLA S A Ramadas Reaction On Karnataka Budget 2022


"ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ರೋಪ್‌ವೇ ಅನ್ನು ನಿರ್ಮಾಣ ಮಾಡಲು ಕೇಂದ್ರ ಸರ್ಕಾರದ "ಪರ್ವತಮಾಲಾ" ಯೋಜನೆಯಡಿ ಪ್ರಸ್ತಾವನೆ ಸಲ್ಲಿಕೆ. ಮೈಸೂರಿನ ಕೆ.ಆರ್.ಆಸ್ಪತ್ರೆಯ ಕಟ್ಟಡಗಳ ನವೀಕರಣಕ್ಕೆ 89 ಕೋಟಿ ರೂ ಬಿಡುಗಡೆ. ಮಹಿಳಾ ಮತ್ತು ಮಕ್ಕಳ ಇಲಾಖೆಯ ವತಿಯಿಂದ ಮೈಸೂರು ನಗರದಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ವಸತಿನಿಲಯಗಳ ಪ್ರಾರಂಭ".

"460 ಕಿ.ಮೀ. ಉದ್ದದ ಚೆನ್ನೈ-ಬೆಂಗಳೂರು-ಮೈಸೂರು ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಯ ಅನುಷ್ಠಾನಕ್ಕೆ ಕೇಂದ್ರ ಸರ್ಕಾರದೊಂದಿಗೆ ಕೈಜೋಡಿಸಲಿದೆ. ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗೆ ಯೋಜನೆ. ಸಮಾಜದ ಎಲ್ಲಾ ವರ್ಗಗಳನ್ನೂ ನೋಡುವ ಸಮಗ್ರವಾದ ಚಿಂತನೆಯ ಜೊತೆಗೆ ನವಕರ್ನಾಟಕದೊಂದಿಗೆ ನವ ಭಾರತದ ನಿರ್ಮಾಣದ ಗುರಿಯನ್ನು ಈ ಬಜೆಟ್ ಹೊಂದಿದೆ. ಇಂತಹ ಸಮಗ್ರವಾದ ಆಯವ್ಯಯ ರಾಜ್ಯಕ್ಕೆ ಪೂರಕವಾಗಲೆಂದು ಬಯಸುತ್ತೇನೆ"ಎಂದು ರಾಮದಾಸ್ ಆಶಿಸಿದರು.

Recommended Video

      ಕೊಹ್ಲಿ ಔಟಾದ ತಕ್ಷಣ ರೋಹಿತ್ ಕೊಟ್ಟ ರಿಯಾಕ್ಷನ್ ಫುಲ್ ವೈರಲ್ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+