ಮತ್ತೊಂದು ದಾಖಲೆ ನಿರ್ಮಿಸಲು ಅಣಿಯಾಗುತ್ತಿದೆ ಸಾಂಸ್ಕೃತಿಕ ನಗರಿ
ಮೈಸೂರು, ಜೂನ್.10 : ಕಳೆದ ವರ್ಷ ವಿಶ್ವ ಯೋಗ ದಿನದಂದು ಗಿನ್ನಿಸ್ ದಾಖಲೆ ಮಾಡಿದ್ದ ಮೈಸೂರು ಈಗ ಮತ್ತೊಂದು ದಾಖಲೆ ನಿರ್ಮಿಸುವತ್ತ ಸಿದ್ಧತೆಗೊಳ್ಳುತ್ತಿದೆ.
ಹೌದು, ಕಳೆದ ವರ್ಷ 56 ಸಾವಿರಕ್ಕೂ ಹೆಚ್ಚು ಮಂದಿ ಯೋಗಪಟುಗಳನ್ನು ಸೇರಿಸುವುದರ ಮೂಲಕ ಗಿನ್ನಿಸ್ ದಾಖಲೆ ಮಾಡಿದ್ದ ಮೈಸೂರು, ಈ ಬಾರಿ ವಿಶ್ವ ಯೋಗ ದಿನದಂದು 70 ಸಾವಿರಕ್ಕೂ ಹೆಚ್ಚು ಯೋಗಪಟುಗಳನ್ನು ಸೇರಿಸುವ ಮೂಲಕ ಮತ್ತೊಂದು ದಾಖಲೆಗೆ ಅಣಿಯಾಗುತ್ತಿದೆ.
ಮೈಸೂರು ಜಿಲ್ಲಾಡಳಿತ ಮತ್ತು ವಿವಿಧ ಯೋಗ ಸಂಸ್ಥೆಗಳ ಸಹಯೋಗದಲ್ಲಿ ಇಂದು ಭಾನುವಾರ ಮುಂಜಾನೆ 6 ಗಂಟೆಯಿಂದಲೇ ಮೈಸೂರಿನ ಅರಮನೆ ಮುಂಭಾಗದ ಆವರಣದಲ್ಲಿ ಯೋಗಪಟುಗಳು ಯೋಗಾಭ್ಯಾಸದಲ್ಲಿ ತಲ್ಲೀನರಾಗಿದ್ದಾರೆ.

ಇದೇ ತಿಂಗಳ 21 ರಂದು ಮೈಸೂರಿನ ರೇಸ್ ಕೋರ್ಸ್ ಬಳಿಯ ಮೈದಾನದಲ್ಲಿ ನಡೆಯಲಿರುವ ವಿಶ್ವ ಯೋಗ ದಿನದ ಕಾರ್ಯಕ್ರಮಕ್ಕೆ ಕಳೆದ ಒಂದು ವಾರದಿಂದಲೂ ಯೋಗಪಟುಗಳು ಅಭ್ಯಾಸ ನಡೆಸುತ್ತಿದ್ದು, 70ಸಾವಿರಕ್ಕೂ ಹೆಚ್ಚು ಮಂದಿ ಯೋಗಪಟುಗಳನ್ನು ಸೇರಿಸುವ ನೀರಿಕ್ಷೆಯನ್ನು ಮೈಸೂರು ಜಿಲ್ಲಾಡಳಿತ ಹೊಂದಿದೆ.
ಈ ಬಾರಿಯ ವಿಶ್ವ ಯೋಗ ದಿನ ಆಚರಣೆಯ ಅಂಗವಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಮೈಸೂರಿಗೆ ಪ್ರಧಾನಿ ಮೋದಿ ಆಗಮಿಸಬೇಕಿತ್ತು. ಆದರೆ ಕೆಲವು ಕಾರಣಗಳಿಂದ ಸಾಧ್ಯವಾಗಿಲ್ಲ.












Click it and Unblock the Notifications