• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಳೆಗೆ ಕಳಚಿಬಿತ್ತು ಮೈಸೂರು ಅಗ್ನಿಶಾಮಕ ಕಚೇರಿ ಕಟ್ಟಡದ ಕಮಾನು

|

ಮೈಸೂರು, ಆಗಸ್ಟ್ 9 : ಕಳೆದೆರಡು ದಿನಗಳಿಂದ ಮೈಸೂರಿನಲ್ಲಿ ಸುರಿಯುತ್ತಿರುವ ಮಳೆಗೆ ನಗರದ ಸರಸ್ವತಿಪುರಂ ಬಳಿ ಇರುವ ಅಗ್ನಿಶಾಮಕ ಕಚೇರಿಯ ಕಟ್ಟಡ ನೆಲಕ್ಕುರುಳಿದೆ.

ಕ್ಷಣ ಕ್ಷಣಕ್ಕೂ ಏರುತ್ತಿದ್ದಾಳೆ ನೇತ್ರಾವತಿ, ತೀರದ ಮನೆಗಳ ಪಾಡೇನು?

ಅಗ್ನಿಶಾಮಕ ಠಾಣೆ ಕಟ್ಟಡದ ಮುಂಭಾಗ ಮಳೆ ಹೊಡೆತಕ್ಕೆ ಇಂದು ಮಧ್ಯಾಹ್ನ ಕಮಾನು ಕುಸಿದಿದೆ. ಸದ್ಯ ಯಾವುದೇ ಅಪಾಯ ಸಂಭವಿಸಿಲ್ಲ.

ಅದೃಷ್ಟವಶಾತ್ ಇಂದು ಶಾಲಾ ಕಾಲೇಜಿಗೆ ರಜೆ ಘೋಷಿಸಿದ್ದ ಕಾರಣ ಭಾರಿ ಅನಾಹುತ ತಪ್ಪಿದೆ. ಸಾಮಾನ್ಯವಾಗಿ ಸಮೀಪದ ಶಾಲಾ. ಕಾಲೇಜು ವಿದ್ಯಾರ್ಥಿಗಳು ಇದೇ ಸ್ಥಳದಲ್ಲಿ ಬಸ್ ಗಾಗಿ ಕಾಯುತ್ತಿದ್ದರು. ಇಂದು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ರಜೆ ಇದ್ದ ಕಾರಣ ಖಾಲಿಯಿತ್ತು.

ಕಳೆದ ಕೆಲ ದಿನಗಳಿಂದ ಮೈಸೂರಿನಲ್ಲಿ ಮಳೆ ಧಾರಾಕಾರವಾಗಿ ಸುರಿಯುತ್ತಿದ್ದು ಕಟ್ಟಡ ಶಿಥಿಲವಾಗಿ ಈ ಘಟನೆ ನಡೆದಿದೆ.

English summary
Mysuru fire station entrance collapsed for heavy rain. People are hesitate to go for outside on rain time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X