ಮೈಸೂರು: ಸೊಸೆ ಆತ್ಮಹತ್ಯೆ ಸುದ್ದಿ ತಿಳಿದು ಮಾವ ಸಾವು
ಮೈಸೂರು, ನವೆಂಬರ್ 2 : ಕಳೆದ ಐದು ದಿನಗಳ ಹಿಂದೆ ನಾಪತ್ತೆಯಾದ ನವವಿವಾಹಿತೆ ಶವವಾಗಿ ಪತ್ತೆಯಾದ ಹಿನ್ನೆಲೆ, ಸೊಸೆ ಸಾವಿನ ಸುದ್ದಿ ತಿಳಿದ ಮಾವ ಕೂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ರುಕ್ಮಿಣಿ (24)ಮೃತಪಟ್ಟ ಮಹಿಳೆ ಹಾಗೂ ಸೊಸೆ ಸಾವಿನಿಂದ ಮನನೊಂದ ಮಾವ ರಮೇಶ್ (50) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂರು ತಿಂಗಳ ಹಿಂದೆ ಶಾದನಹಳ್ಳಿಯ ಪುನೀತ್ ಎಂಬಾತನೊಂದಿಗೆ ರುಕ್ಮಿಣಿಯ ವಿವಾಹವಾಗಿತ್ತು. ಈ ನಡುವೆ ಅಕ್ಟೋಬರ್ 27ರಂದು ಗಂಡನ ಜೊತೆಗೆ ಜಗಳವಾಡಿ ರುಕ್ಮಿಣಿ ಮನೆ ಬಿಟ್ಟಿದ್ದ ರು. ಇದೀಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಗೊರೂರಿನ ವರುಣಾ ನಾಲೆಯಲ್ಲಿ ರುಕ್ಮಿಣಿ ಶವವಾಗಿ ಪತ್ತೆಯಾಗಿದ್ದಾರೆ.

ಮಗ ಪುನೀತ್ ವರ್ತನೆಗೆ ಬೇಸತ್ತು ಸೊಸೆ ಮನೆ ಬಿಟ್ಟು ಹೋಗಿ ಈಗ ಶವವಾಗಿ ಪತ್ತೆಯಾಗಿದ್ದಕ್ಕೆ ಮನನೊಂದ ಮಾವ ರಮೇಶ್ ಕೂಡ ಶ್ರೀರಂಗಪಟ್ಟಣದ ಪಾಲಹಳ್ಳಿಯ ಜಮೀನಿನಲ್ಲಿ ನೇಣು ಹಾಕಿಕೊಂಡಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.












Click it and Unblock the Notifications