ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಒಂದು ಲಕ್ಷ ಮೀನು ಮರಿಗಳ ಉಚಿತ ವಿತರಣೆ

|
Google Oneindia Kannada News

ಮೈಸೂರು, ಜೂನ್ 12: ಮೈಸೂರಿನ ಮೀನು ಕೃಷಿಕರಿಗೊಂದು ಸಿಹಿ ಸುದ್ದಿ. ಮೀನು ಕೃಷಿಯತ್ತ ಜನರನ್ನು ಆಕರ್ಷಿಸುವ ಸಲುವಾಗಿ ಜಿಲ್ಲಾ ಮೀನುಗಾರಿಕಾ ಇಲಾಖೆ ಇದೀಗ ಒಂದು ಲಕ್ಷ ಮೀನು ಮರಿಗಳ ವಿತರಣೆಗೆ ಹೊಸ ಯೋಜನೆಯೊಂದನ್ನು ಸಿದ್ಧ ಮಾಡಿದೆ.

ಮೀನುಗಾರಿಕೆಯಲ್ಲಿ ಉದ್ಯೋಗಾವಕಾಶ ಸೃಷ್ಟಿಯ ಮೂಲಕ ಆರ್ಥಿಕ ಪ್ರಕ್ರಿಯೆ ಹೆಚ್ಚಿಸಲು ಈ ಯೋಜನೆ ಕೈಗೊಂಡಿದೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮತ್ತು ನೀಲಿ ಕ್ರಾಂತಿ ಯೋಜನೆಯಲ್ಲಿ ಮೀನುಕೊಳ ನಿರ್ಮಾಣ ಹಾಗೂ ಮೀನು ಸಾಕಾಣಿಕೆಯ ಮೂಲಕ ಹಣಕಾಸಿನ ನೆರವು ನೀಡಲಾಗುತ್ತದೆ. ಪ್ರಸ್ತುತ, ಜಿಲ್ಲೆಯ ಕರಿಮುದ್ದನಹಳ್ಳಿ, ನುಗು, ಕಬಿನಿಯಲ್ಲಿ ವಾರ್ಷಿಕ 125 ಲಕ್ಷ ಮೀನುಮರಿ ವ್ಯಾಪಾರ ವಹಿವಾಟು ನಡೆಯುತ್ತಿದೆ. ಇದನ್ನು ಮತ್ತಷ್ಟು ಜನರಿಗೆ ತಲುಪಿಸುವ ದೃಷ್ಟಿಯಿಂದ ಜಿಲ್ಲಾ ಪಂಚಾಯಿತಿ ನೆರವಿನಿಂದ ಉಚಿತವಾಗಿ ಮೀನು ವಿತರಿಸುವ ಯೋಜನೆಯನ್ನು ಮೀನುಗಾರಿಕೆ ಇಲಾಖೆ ಕೈಗೊಂಡಿದೆ.

 ನಾಳೆಯಿಂದ ಜುಲೈವರೆಗೆ ಕರಾವಳಿಯಲ್ಲಿ ಮೀನುಗಾರಿಕೆ ನಿಷೇಧ ನಾಳೆಯಿಂದ ಜುಲೈವರೆಗೆ ಕರಾವಳಿಯಲ್ಲಿ ಮೀನುಗಾರಿಕೆ ನಿಷೇಧ

ರಾಜ್ಯದ ಹಲವು ಜಿಲ್ಲೆಯಲ್ಲಿ ಇಂಥದೊಂದು ಯೋಜನೆ ಫಲವಾಗಿ ಮೀನುಗಾರಿಕೆ ಕಸುಬು ಫಲಪ್ರದವಾಗಿದೆ. ಈ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಇಂಥದ್ದೊಂದು ಯೋಜನೆ ಜಾರಿಗೊಳಿಸಲು ಇಲಾಖೆ ಸಿದ್ಧತೆ ಕೈಗೊಂಡು ಹೊಲ, ಬಾವಿ, ಕೆರೆ ಒಳಗೊಂಡಿರುವ ಸಣ್ಣ ಪ್ರಮಾಣದ ರೈತರಿಗೆ ಉಚಿತವಾಗಿ ಮೀನು ನೀಡಲು ಇಲಾಖೆ ಮುಂದಾಗಿದೆ. ಕನಿಷ್ಠ ಒಬ್ಬ ರೈತರಿಗೆ 200-250 ಮೀನಿನ ಮರಿಯನ್ನು ನೀಡುವ ಕುರಿತು ಆಲೋಚನೆ ನಡೆಸಲಾಗಿದೆ. ವಾತಾವರಣವನ್ನು ಪರಿಶೀಲಿಸಿ ಜಿಲ್ಲಾ ಪಂಚಾಯಿತಿ ಸದಸ್ಯರ ನೆರವಿನ ಮೂಲಕ ವಿತರಿಸಲು ಕಾರ್ಯಸೂಚಿ ಸಿದ್ಧಗೊಂಡಿದೆ.

Mysuru Department of Fisheries planning to distribute one lakh fish

 ಮತ್ತೆ ಬಂತು ಖಂಡಿಗೆ ಕ್ಷೇತ್ರದಲ್ಲಿ ಸಂಭ್ರಮದ ಮೀನು ಹಿಡಿಯುವ ಜಾತ್ರೆ ಮತ್ತೆ ಬಂತು ಖಂಡಿಗೆ ಕ್ಷೇತ್ರದಲ್ಲಿ ಸಂಭ್ರಮದ ಮೀನು ಹಿಡಿಯುವ ಜಾತ್ರೆ

ಜಿಲ್ಲೆಯಲ್ಲಿ ಮೀನುಗಾರಿಕೆಯನ್ನು ಪ್ರಚಾರಪಡಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿಯ ಸಭೆ ಅನುಮತಿಗೆ ಸದ್ಯ ಇದನ್ನು ಕಳುಹಿಸಲಾಗಿದೆ. ಜೂನ್, ಜುಲೈ, ಆಗಸ್ಟ್ ತಿಂಗಳು ಮೀನು ಮರಿಗಳನ್ನು ಮಾಡುವ ಕಾಲ. ಹೀಗಾಗಿ ಅನುಮತಿ ಸಿಕ್ಕ ಕೂಡಲೇ ಹಂತ ಹಂತವಾಗಿ ಉಚಿತವಾಗಿ ಸಣ್ಣ ಪ್ರಮಾಣದ ರೈತರಿಗೆ ಮೀನು ಮನೆ ನೀಡಲು ಮೀನುಗಾರಿಕೆ ಇಲಾಖೆ ಮುಂದಾಗಿದೆ.

English summary
Mysuru District Fisheries Department, which is in the forefront of attracting people to fish farming, has now prepared a new plan for distribution of one lakh fishes freely.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X