ಜಂಬೂಸವಾರಿ ಪುಷ್ಪಾರ್ಚನೆಗೆ ಬಿಗಿ ಭದ್ರತೆ: ಮೈಸೂರು ಡಿಸಿ ಸೂಚನೆ
ಮೈಸೂರು, ಆಗಸ್ಟ್ 31 : ನಾಡಹಬ್ಬ ದಸರೆಗೆ ದಿನಗಣನೆ ಆರಂಭವಾಗಿದೆ. ಈ ಹಿನ್ನೆಲೆ ಮೈಸೂರು ನಗರಿ ಸಕಲ ಸಿದ್ಧತೆಗೊಳ್ಳುತ್ತಿದ್ದು, ಸೆಪ್ಟೆಂಬರ್ 30 ರಂದು ಜರುಗಲಿರುವ ವಿಜಯದಶಮಿಗೆ ಅರಮನೆ ಆವರಣದಲ್ಲಿ ನಡೆಯಲಿರುವ ಜಂಬೂಸವಾರಿಯ ಪುಷ್ಪಾರ್ಚನೆ ಗೆ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಈ ಹಿನ್ನೆಲೆ 30 ಸಾವಿರ ಜನರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ತಯಾರಿ ನಡೆಸಿದೆ. ಸದ್ಯ ಆರು ಗೇಟ್ ಗಳಿದ್ದು, ಇನ್ನೆರಡು ಗೇಟ್ ಗಳನ್ನು ತೆರೆಯಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ಕೇವಲ 21(ಸೆಪ್ಟೆಂಬರ್ 21 ರಿಂದ 30) ದಿನಗಳು ಮಾತ್ರ ಬಾಕಿಯಿರುವ ಹಿನ್ನೆಲೆಯಲ್ಲಿ ಮೈಸೂರು ಅರಮನೆ ಆವರಣದಲ್ಲಿ ಕೈಗೊಳ್ಳಬೇಕಾದ ಭದ್ರತೆಯ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಪರಾಮರ್ಶೆ ನಡೆಯಿತು.

ದಸರಾ ಮೆರವಣಿಗೆ ವೀಕ್ಷಣೆ ಮಾಡುವುದಕ್ಕೆ ಅರಮನೆ ಪ್ರವೇಶಿಸುವ ಗೇಟ್ ಗಳಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಯಾವುದೇ ರೀತಿಯ ಗೊಂದಲವಾಗದಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಿ.ರಂದೀಪ್ ಸೂಚನೆ ನೀಡಿದ್ದಾರೆ. ಆವರಣದಲ್ಲಿ ಪೆಂಡಲ್ ವ್ಯವಸ್ಥೆ, ಆಸನದ ವ್ಯವಸ್ಥೆ ಸೇರಿದಂತೆ ಇತರೇ ಸಿದ್ಧತೆಗಳು ತುಂಬಾ ಅಚ್ಚುಕಟ್ಟಾಗಿ ಇರಬೇಕು.

ಒಳಗಡೆ ಯಾವುದೇ ರೀತಿಯಲ್ಲೂ ಸಮಸ್ಯೆ ಆಗದಂತೆ ಹೆಚ್ಚಿನ ಪೋಲಿಸ್ ರನ್ನು ನಿಯೋಜಿಸಿ ಎಂದು ಡಿಸಿಪಿ ವಿಷ್ಣುವರ್ಧನ್ ಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.













Click it and Unblock the Notifications