ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ದಸರಾ ಸಿದ್ಧತೆಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ವಿಶೇಷ ಸಭೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜುಲೈ 22 : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸುವಂತೆ ಉನ್ನತ ಮಟ್ಟದ ಸಮಿತಿ ತೀರ್ಮಾನಿಸಿದರೆ ಮಾತ್ರ ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜು.21 ರಂದು ವಿವಿಧ ಪ್ರಮುಖ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ ಅವರು, ದಸರಾ ಮಹೋತ್ಸವನ್ನು ಅದ್ಧೂರಿಯಾಗಿ ಅಥವಾ ಸರಳವಾಗಿ ಆಚರಿಸಬೇಕೆ ಎನ್ನುವುದನ್ನು ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನಿಸಲಾಗುತ್ತದೆ. ಒಂದು ವೇಳೆ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಿದರೆ ಕಳೆದ ಬಾರಿಗಿಂತಲೂ ಸ್ವಲ್ಪ ಹೆಚ್ಚುವರಿಯಾಗಿ ಹಣದ ಪಸ್ತಾವನೆ ಸಲ್ಲಿಸಬೇಕಾಗುತ್ತದೆ ಎಂದರು.

Mysuru Dasara: DC conducted meeting

ಕಳೆದ ವರ್ಷ ಸರ್ಕಾರ ದಸರಾ ವೆಚ್ಚಕ್ಕಾಗಿ 14.25 ಕೋಟಿ ರೂ. ಬಿಡುಗಡೆ ಮಾಡಿತ್ತು. ಅದರಲ್ಲೇ 12.25 ಖರ್ಚು ಮಾಡಲಾಗಿದ್ದು, ಇನ್ನೂ 2 ಕೋಟಿ ರೂ. ಉಳಿದಿದೆ. ಈ ವಿಚಾರವನ್ನು ಉನ್ನತ ಮಟ್ಟದ ಸಭೆಯಲ್ಲಿ ಪಸ್ತಾಪಿಸಿ ವಿವರಿಸಲಾಗುವುದು ಎಂದು ಹೇಳಿದರು.

Mysuru Dasara: DC conducted meeting

ಕೊನೆಯ ಆಷಾಢ ಶುಕ್ರವಾರ: ಮೈಸೂರಿನಲ್ಲಿ ಚಾಮುಂಡಿಗೆ ವಿಶೇಷ ಪೂಜೆಕೊನೆಯ ಆಷಾಢ ಶುಕ್ರವಾರ: ಮೈಸೂರಿನಲ್ಲಿ ಚಾಮುಂಡಿಗೆ ವಿಶೇಷ ಪೂಜೆ

ಗಜಪಯಣದಿಂದ ಮಹೋತ್ಸವ ಆರಂಭ
ಈ ಬಾರಿ ದಸರಾ ಮಹೋತ್ಸವಕ್ಕೆ ವೀರನಹೊಸಹಳ್ಳಿಯಿಂದ ಹೊರಡುವ ಗಜಪಯಣದಿಂದಲೇ ವಿಶೇಷ ಕಾರ್ಯಕ್ರಮ ನಿಗದಿಪಡಿಸಲಾಗುವುದು ಎಂದರು. ದಸರಾ ಮಹೋತ್ಸವ ಸೆ.21ರಿಂದ 30ರವರೆಗೆ ನಡೆಯಲಿದ್ದು, ಆ.10 ಅಥವಾ 14ರಂದು ಗಜಪಯಣ ಕಾರ್ಯಕ್ರಮ ನಡೆಸಲಾಗುವುದು. ಅರಮೆನೆಗೆ ಆನೆಗಳು ಬಂದಾಗ ಅಲ್ಲಿಯೂ ಅದ್ಧೂರಿಯಾಗಿ ಸ್ವಾಗತಿಸಲು ಕ್ರಮ ವಹಿಸಲಾಗುವುದು ಎಂದರು.

Mysuru Dasara: DC conducted meeting

ಸ್ವಚ್ಛತೆಗೆ ಹೆಚ್ಚುವರಿ ಕಾರ್ಮಿಕರು
ದಸರಾ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ತಿಂಗಳ 30 ದಿನ ನಗರದ ಸ್ವಚ್ಛತೆಗೆ ಹೆಚ್ಚವರಿಯಾಗಿ ಪೌರಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲು ಜಿಲ್ಲಾಧಿಕಾರಿ ಸೂಚಿಸಿದರು. ಇದಕ್ಕೆ 45 ಲಕ್ಷ ರೂ., ಗೋಡೆಗಳಿಗೆ ಬಣ್ಣ ಬಳಿಯಲು 10 ಲಕ್ಷ ರೂ. ಹಾಗೂ ಪುರಭವನದಲ್ಲಿ ಪಾರ್ಕಿಂಗ್ ಗಾಗಿ 10 ಲಕ್ಷ ರೂ. ಮಂಜೂರು ಮಾಡುವುದಾಗಿ ಹೇಳಿದರು.

ವಾರ್ತಾ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಗಳು ತಮ್ಮ ಸ್ವಂತ ಖರ್ಚಿನಿಂದಲೇ ಸ್ವಾಗತ ಹಾಗೂ ಪ್ರಚಾರದ ಕೆಲಸಗಳನ್ನು ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಇದೇ ವೇಳೆ ಕೆ.ಆರ್.ವೃತ್ತದಿಂದ ಆಯುರ್ವೇದ ಆಸ್ಪತೆ ವೃತ್ತದವರೆಗೆ ಸಾಂಪ್ರದಾಯಿಕ ದೀಪಾಲಂಕಾರ ಮಾಡಲಾಗುವುದು. ಉಳಿದಂತೆ ಬೇರೆ ಬೇರೆ ಕಡೆಗಳಲ್ಲಿ ಎಲ್‍ಇಡಿ ದೀಪಗಳನ್ನು ಬಳಕೆ ಮಾಡಲಾಗುವುದು ಎಂದು ತಿಳಿಸಿದರು.

English summary
Mysuru deputy commissioner Randeep has conducted a meeting on 21st July, to discuss about preperation of world famous Dasara, which will be celebrating between September 21st to 30th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X